ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ ದರ ಹೆಚ್ಚಳ; ಆಗಸ್ಟ್ ತಿಂಗಳ ಅಂಕಿ ಅಂಶ ಬಿಡುಗಡೆ

|

Updated on: Sep 21, 2023 | 12:32 PM

CPI-AL and RL Inflation Rates Rised In 2023 August: ಗ್ರಾಮೀಣ ಕಾರ್ಮಿಕ ಸಿಪಿಐ ವಿಚಾರದಲ್ಲಿ ವಿವಿಧ ರಾಜ್ಯಗಳಲ್ಲಿ 18 ಅಂಕಗಳವರೆಗೆ ಏರಿಕೆ ಆಗಿದೆ. ಈ ಪೈಕಿ ಆಂಧ್ರಪ್ರದೇಶ 1,412 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಹಿಮಾಚಲಪ್ರದೇಶ 1,003 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಮೇಘಾಲಯ ಮತ್ತು ಗುಜರಾತ್ ರಾಜ್ಯಗಳಲ್ಲಿ ಗರಿಷ್ಠ ಏರಿಕೆ ಆಗಿದೆ. ಇಲ್ಲಿ ಎರಡೂ ಸೂಚಿಗಳಲ್ಲಿ ಹಿಮಾಚಲಪ್ರದೇಶ ಅತ್ಯುತ್ತಮ ಎನಿಸಿದೆ. ಅತಿ ದುಬಾರಿ ಎನಿಸಿರುವುದು ದಕ್ಷಿಣದ ರಾಜ್ಯಗಳೇ.

ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ ದರ ಹೆಚ್ಚಳ; ಆಗಸ್ಟ್ ತಿಂಗಳ ಅಂಕಿ ಅಂಶ ಬಿಡುಗಡೆ
ಕೃಷಿ ಕಾರ್ಮಿಕ
Follow us on

ನವದೆಹಲಿ, ಸೆಪ್ಟೆಂಬರ್ 21: ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಕಾರ್ಮಿಕ ಅಖಿಲ ಭಾರತ ಗ್ರಾಹಕ ಬೆಲೆ ಅನುಸೂಚಿ (All India Consumer Price Index for Agricultural Labourers and Rural Labourers) ಸಂಖ್ಯೆ ಆಗಸ್ಟ್ ತಿಂಗಳಲ್ಲಿ ಹೆಚ್ಚಳವಾಗಿದೆ. ಕೃಷಿ ಕಾರ್ಮಿಕರ ಸಿಪಿಐ ಸಂಖ್ಯೆ 9 ಅಂಕಗಳಷ್ಟು ಏರಿ 1,224 ತಲುಪಿದೆ. ಇನ್ನು, ಗ್ರಾಮೀಣ ಕಾರ್ಮಿಕರ ಸಿಪಿಐ ಸಂಖ್ಯೆ 8 ಅಂಕಗಳಷ್ಟು ಹೆಚ್ಚಳಗೊಂಡು 1,234 ಮಟ್ಟ ಮುಟ್ಟಿದೆ. ಅಕ್ಕಿ, ಗೋಧಿ ಹಿಟ್ಟು, ಹಾಲು, ಮಟನ್, ಸಕ್ಕರೆ, ಮೆಣಸಿನ ಕಾಯಿ, ಅರಿಶಿನ, ಬೆಳ್ಳುಳ್ಳಿ, ಈರುಳ್ಳಿ, ಮಸಾಲೆ ಪದಾರ್ಥ ಇತ್ಯಾದಿ ಆಹಾರವಸ್ತುಗಳ ಬೆಲೆ ಏರಿಕೆ ಆಗಿದ್ದು ಈ ವಿಭಾಗಗಳ ಬೆಲೆ ಸೂಚಿ ಏರಲು ಕಾರಣ ಎನ್ನಲಾಗಿದೆ.

ರಾಜ್ಯದಿಂದ ರಾಜ್ಯಕ್ಕೆ ಬೆಲೆ ಸೂಚಿ ಏರಿಕೆಯಲ್ಲಿ ವ್ಯತ್ಯಾಸಗಳಿವೆ. ಕೃಷಿ ಕಾರ್ಮಿಕರ ಸಿಪಿಐ (CPI-AL) ವಿಚಾರದಲ್ಲಿ 20 ರಾಜ್ಯಗಳಲ್ಲಿ 2ರಿಂದ 19 ಅಂಗಳಷ್ಟು ಏರಿಕೆ ಆಗಿದೆ. ತಮಿಳುನಾಡು 1,423 ಅಂಕಗಳೊಂದಿಗೆ ಮೊದಲ ಸಾಲಿನಲ್ಲಿದೆ. ಹಿಮಾಚಲಪ್ರದೇಶ 942 ಅಂಗಳೊಂದಿಗೆ ತಳದಲ್ಲಿದೆ. ಮೇಘಾಲಯದಲ್ಲಿ ಆಗಸ್ಟ್ ತಿಂಗಳಲ್ಲಿ ಗರಿಷ್ಠ ಏರಿಕೆ ಆಗಿದೆ.

ಇದನ್ನೂ ಓದಿ: ಯಥಾಸ್ಥಿತಿಯಲ್ಲಿ ಅಮೆರಿಕದ ಬಡ್ಡಿದರ; ಚಿನ್ನ ಮತ್ತು ಷೇರುಗಳ ಮೇಲೇನು ಪರಿಣಾಮ?

ಗ್ರಾಮೀಣ ಕಾರ್ಮಿಕ ಸಿಪಿಐ (CPI-RL) ವಿಚಾರದಲ್ಲಿ ವಿವಿಧ ರಾಜ್ಯಗಳಲ್ಲಿ 18 ಅಂಕಗಳವರೆಗೆ ಏರಿಕೆ ಆಗಿದೆ. ಈ ಪೈಕಿ ಆಂಧ್ರಪ್ರದೇಶ 1,412 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಹಿಮಾಚಲಪ್ರದೇಶ 1,003 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಮೇಘಾಲಯ ಮತ್ತು ಗುಜರಾತ್ ರಾಜ್ಯಗಳಲ್ಲಿ ಗರಿಷ್ಠ ಏರಿಕೆ ಆಗಿದೆ. ಇಲ್ಲಿ ಎರಡೂ ಸೂಚಿಗಳಲ್ಲಿ ಹಿಮಾಚಲಪ್ರದೇಶ ಅತ್ಯುತ್ತಮ ಎನಿಸಿದೆ. ಅತಿ ದುಬಾರಿ ಎನಿಸಿರುವುದು ದಕ್ಷಿಣದ ರಾಜ್ಯಗಳೇ.

ಸಿಪಿಐ ದರಗಳು ಹಣದುಬ್ಬರಕ್ಕೆ ಮಾನದಂಡವಾಗಿರುವುದರಿಂದ ಮಹತ್ವದ್ದೆನಿಸಿವೆ. ನಗರ ಭಾಗದ ಸಿಪಿಐ ದರಗಳು ಹಣದುಬ್ಬರದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಆದರೂ ಕೂಡ ಔದ್ಯಮಿಕ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಕಾರ್ಮಿಕರ ಹಣದುಬ್ಬರ ದರವೂ ಬಹಳ ಮುಖ್ಯವಾದುದು.

ಇದನ್ನೂ ಓದಿ: ಜಾಗತಿಕ ಚಿಪ್ ದೈತ್ಯ ಎನ್​ವಿಡಿಯ ಜೊತೆ ಇನ್ಫೋಸಿಸ್ ಒಪ್ಪಂದ; 50,000 ಉದ್ಯೋಗಿಗಳಿಗೆ ಎಐ ತರಬೇತಿ

ಕೃಷಿ ಕಾರ್ಮಿಕರ ಸಿಪಿಐ ಆಧಾರಿತವಾದ ಹಣದುಬ್ಬರ ದರ ಆಗಸ್ಟ್​ನಲ್ಲಿ ಶೇ. 7.37ರಷ್ಟಿದೆ. ಇನ್ನು, ಗ್ರಾಮೀಣ ಕಾರ್ಮಿಕ ಸಿಪಿಐ ಆಧಾರಿತ ಹಣದುಬ್ಬರ ಶೇ. 7.12ರಷ್ಟಿದೆ. ಈ ಎರಡು ವಿಭಾಗಗಳಲ್ಲಿ ಆಹಾರ ಹಣದುಬ್ಬರ ಕ್ರಮವಾಗಿ ಶೇ. 8.89 ಮತ್ತು ಶೇ. 8.64ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ