ಖಲಿಸ್ತಾನ್ ವಿಚಾರ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕು ಹೆಚ್ಚಿಸುತ್ತಿದೆ. ಭಾರತದ ಆರ್ಥಿಕತೆ ಮತ್ತು ಕೆನಡಾ ಕಂಪನಿಗಳ ಮೇಲೆ ಈ ವಿಚಾರ ಪರಿಣಾಮ ಬೀರುತ್ತಿದೆ. ಕೆನಡಾದ ರಾಪರ್ ಶುಭ್ (Canadian rapper Shubh) ಅವರ ಕಾರ್ಯಕ್ರಮವನ್ನು ಇತ್ತೀಚೆಗೆ ರದ್ದುಗೊಳಿಸಲಾಗಿತ್ತು. ಶುಭ್ ಖಲಿಸ್ತಾನ್ ಬೆಂಬಲಿಗ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಆತನ ಕಾರ್ಯಕ್ರಮದ ಟಿಕೆಟ್ ಬುಕಿಂಗ್ ಅನ್ನು ಬುಕ್ ಮೈ ಶೋ ನಿಲ್ಲಿಸಿತು. ಈ ಬೆಳವಣಿಗೆ ಬಳಿಕ ಭಾರತದಲ್ಲಿ ಕೆನಡಾದ ಫೂಡ್ ಚೈನ್ ಕಂಪನಿಗಳಿಗೆ ತೊಂದರೆ ಹೆಚ್ಚಾಗಿದೆ. ಮೆಕೇನ್ (McCain) ಮತ್ತು ಟಿಮ್ ಹಾರ್ಟನ್ (Tim Hortons) ಕಂಪನಿಗಳು ಸಮಸ್ಯೆಗೆ ಸಿಲುಕಿವೆ. ಏನು ಕಾರಣ?
ಕೆನಡಾದ ಆಹಾರ ಸರಪಳಿ ಬ್ರಾಂಡ್‌ಗಳಾದ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಭಾರತದಲ್ಲಿ ಖಲಿಸ್ತಾನ್ ವಿವಾದದಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಭಾರತೀಯರು ಕೆನಡಾ ಕಂಪನಿಗಳ ಉತ್ಪನ್ನಗಳಿಂದ ದೂರ ಉಳಿಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಕಂಪನಿಗಳನ್ನು ಭಾರತೀಯರು ಟ್ರೊಲ್ ಮಾಡುತ್ತಿದ್ದಾರೆ. ಇವುಗಳ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಕಂಪನಿಗಳ ಭಾರತ ವಿಭಾಗದಿಂದ ಪ್ರತಿಕ್ರಿಯೆ ಬಂದಿಲ್ಲ.
ಬುಕ್ ಮೈ ಶೋ ಭಾರತದಲ್ಲಿ ಕೆನಡಾದ ಗಾಯಕನ ಸಂಗೀತ ಕಚೇರಿಯನ್ನು ರದ್ದುಗೊಳಿಸಿದ ನಂತರ, ಮ್ಯೂಸಿಕ್ ಅಪ್ಲಿಕೇಶನ್ ಮೌಜ್ ತನ್ನ ಪ್ಲಾಟ್ಫಾರ್ಮ್ನಿಂದ ಗಾಯಕ ಶುಭ್ ಅವರ ಎಲ್ಲಾ ಹಾಡುಗಳನ್ನು ತೆಗೆದುಹಾಕಿದೆ. ತಜ್ಞರ ಪ್ರಕಾರ, ಅಂತಹ ಕಂಪನಿಗಳು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗಬಹುದು ಮತ್ತು ಅವುಗಳು ಉತ್ತಮ ಹಾದಿಯಲ್ಲಿ ನಡೆಯಬೇಕು. ಅಂತಹ ರಾಜಕೀಯ ಮತ್ತು ರಾಜತಾಂತ್ರಿಕ ವಿರೋಧ.
ಇದನ್ನೂ ಓದಿ: Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ
ಕೆನಡಾದ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಕಂಪನಿಗಳು ಭಾರತದಲ್ಲಿ ದೊಡ್ಡ ಮಾರುಕಟ್ಟೆ ಹೊಂದಿವೆ. ವಾಸ್ತವವಾಗಿ, ಭಾರತವು ಕೆನಡಾದ ಮೆಕೇನ್‌ನ ದೊಡ್ಡ ಗ್ರಾಹಕ. ಇದರ ಆಲೂ ಟಿಕ್ಕಿಗೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಈಗ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆ ವಿಕೋಪಕ್ಕೆ ಹೋದರೆ ಮೆಕೇನ್ ಉತ್ಪನ್ನಗಳಿಗೆ ಬಹಿಷ್ಕಾರ ಕ್ರಮ ಕಾದಿರಬಹುದು.
ಇದೇ ವೇಳೆ, ಖ್ಯಾತ ಕಾಫಿ ಮತ್ತು ರೆಸ್ಟೋರೆಂಟ್ ಚೈನ್ ಕಂಪನಿ ಟಿಮ್ ಹಾರ್ಟನ್ಸ್ ಭಾರತದಲ್ಲಿ ತನ್ನ ಮೊದಲ ಔಟ್ಲೆಟ್ ಅನ್ನು ತೆರೆದು ಕೇವಲ ಒಂದು ವರ್ಷ ಕಳೆದಿದೆ. ಅಂತಹ ಪರಿಸ್ಥಿತಿಯಲ್ಲಿ, ಎರಡು ದೇಶಗಳ ನಡುವಿನ ಕಹಿಯು ಅದರ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಜಾಹೀರಾತು ಏಜೆನ್ಸಿ ರಿಡಿಫ್ಯೂಷನ್‌ನ ಅಧ್ಯಕ್ಷ ಸಂದೀಪ್ ಗೋಯಲ್ ಅವರ ಪ್ರಕಾರ, ಇಂಥ ಸಂದರ್ಭಗಳಲ್ಲಿ ಬ್ರ್ಯಾಂಡ್ಗಳು ಲೋ ಪ್ರೊಫೈಲ್ನಲ್ಲಿ ಕಾರ್ಯನಿರ್ವಹಿಸುವುದು ಉತ್ತಮ ಐಡಿಯಾ.
ಇದನ್ನೂ ಓದಿ: Sukha Duneke: ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್ಸ್ಟರ್ ಸುಖ ದುನೆಕೆ ಹತ್ಯೆ
ಪಂಜಾಬಿ ಗಾಯಕ ಶುಭನೀತ್ ಸಿಂಗ್ ಅಲಿಯಾಸ್ ಶುಭ್ ಭಾರತದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಈ ಹಿಂದೆಯೂ, ಈಗಲೂ ಶುಭ್ ವಿರುದ್ಧ ‘ಖಲಿಸ್ತಾನ್’ ಬೆಂಬಲಿಗ ಎಂಬ ಆರೋಪಗಳಿದ್ದವು. ಭಾರತ ಮತ್ತು ಕೆನಡಾ ನಡುವೆ ವಿವಾದ ಹೆಚ್ಚಾದಾಗ, ಮತ್ತೊಮ್ಮೆ ಜನರು ಕೆನಡಾ ಮತ್ತು ಅದರ ಜನರ ಬಗ್ಗೆ ಕೋಪಗೊಳ್ಳಲು ಪ್ರಾರಂಭಿಸಿದರು. ಕೆನಡಾದ ಗಾಯಕ ಶುಭ್ ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ವಿರಾಟ್ ಕೊಹ್ಲಿಯಿಂದ ಹಿಡಿದು ಹರ್ಭಜನ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯರವರೆಗೆ ವಿವಿದ ಕ್ರಿಕೆಟಿಗರೂ ಕೂಡ ಶುಭ್ ಅವರನ್ನು ಅನ್ಫಾಲೋ ಮಾಡಿದ್ದಾರೆ. ಶುಭ್ ಅವರ ಪ್ರದರ್ಶನವನ್ನು ಪ್ರಾಯೋಜಿಸುವ ಬೋಟ್ ಕಂಪನಿಯ ಮಾಲೀಕರು ಸಹ ಆ ಕಾರ್ಯಕ್ರಮದಿಂದ ಹಿಂದೆಸರಿದಿದ್ದೂ ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ