AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sukha Duneke: ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್​ಸ್ಟರ್ ಸುಖ ದುನೆಕೆ ಹತ್ಯೆ

Sukha Duneke Death: ಕೆನಡಾದ ಮೊಗಾ ಜಿಲ್ಲೆಯಲ್ಲಿ ದವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆಯನ್ನು ಬುಧವಾರ ರಾತ್ರಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಜೂನ್ 19 ರಂದು ಸರ್ರೆಯಲ್ಲಿ ನಡೆದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತೆಯೇ ಇದೆ. ಆರೋಪಿಗಳು ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆ ಮೇಲೆ ಸುಮಾರು 15 ಗುಂಡುಗಳನ್ನು ಹಾರಿಸಿದ್ದಾರೆ. 2017 ರಲ್ಲಿ ನಕಲಿ ದಾಖಲೆಗಳ ಸಹಾಯದಿಂದ ದುನೆಕೆ ಭಾರತದಿಂದ ಕೆನಡಾಕ್ಕೆ ಪರಾರಿಯಾಗಿದ್ದ, ಸುಖದುಲ್ ಸಿಂಗ್ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪಂಜಾಬ್ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕನಿಷ್ಠ 29 ಗ್ಯಾಂಗ್​ಸ್ಟರ್​ಗಳಿದ್ದಾರೆ.

Sukha Duneke: ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್​ಸ್ಟರ್ ಸುಖ ದುನೆಕೆ ಹತ್ಯೆ
ಸುಖ ದುನೆಕೆ
Follow us
ನಯನಾ ರಾಜೀವ್
|

Updated on: Sep 21, 2023 | 10:58 AM

ಕೆನಡಾದ ಮೊಗಾ ಜಿಲ್ಲೆಯಲ್ಲಿ ದವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆ(Sukha Duneke)ಯನ್ನು ಬುಧವಾರ ರಾತ್ರಿ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಜೂನ್ 19 ರಂದು ಸರ್ರೆಯಲ್ಲಿ ನಡೆದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತೆಯೇ ಇದೆ. ಆರೋಪಿಗಳು ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆ ಮೇಲೆ ಸುಮಾರು 15 ಗುಂಡುಗಳನ್ನು ಹಾರಿಸಿದ್ದಾರೆ. 2017 ರಲ್ಲಿ ನಕಲಿ ದಾಖಲೆಗಳ ಸಹಾಯದಿಂದ ದುನೆಕೆ ಭಾರತದಿಂದ ಕೆನಡಾಕ್ಕೆ ಪರಾರಿಯಾಗಿದ್ದ, ಸುಖದುಲ್ ಸಿಂಗ್ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪಂಜಾಬ್ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕನಿಷ್ಠ 29 ಗ್ಯಾಂಗ್​ಸ್ಟರ್​ಗಳಿದ್ದಾರೆ.

ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಭಾರತದ ಹೊರಗೆ ಆಶ್ರಯ ಪಡೆಯುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ ಭಾರತದ ಪಾಸ್‌ಪೋರ್ಟ್‌ನಲ್ಲಿ ಅಥವಾ ನಕಲಿ ಪ್ರಯಾಣ ದಾಖಲೆಗಳ ಸಹಾಯದಿಂದ ನೇಪಾಳದ ಮೂಲಕ ಬೇರೆ ದೇಶಕ್ಕೆ ಹೋಗಿದ್ದರು. ಸುಖದುಲ್ ಸಿಂಗ್ ದುನೆಕೆ ಮೋಸ್ಟ್ ವಾಂಟೆಡ್ ಅರ್ಶ್ ದಲ್ಲಾ ಗ್ಯಾಂಗ್‌ಗೆ ಸಂಬಂಧ ಹೊಂದಿದ್ದಾನೆ.

ಸುಖದುಲ್ ಸಿಂಗ್ ದುನೆಕೆ ಟಾರ್ಗೆಟ್​ ಕಿಲ್ಲಿಂಗ್​ನಲ್ಲಿ ಕುಖ್ಯಾತಿ ಪಡೆದಿದ್ದ. ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧದ ಕ್ರಮವನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅರ್ಶ್ ದಲ್ಲಾ ಗ್ಯಾಂಗ್‌ ಹಿಡಿದುಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಹರಿಯಾಣ, ದೆಹಲಿ ಮತ್ತು ರಾಜಸ್ಥಾನದಲ್ಲಿ ದವಿಂದರ್ ಬಾಂಬಿಹಾ ಗ್ಯಾಂಗ್‌ಗೆ ಬೆಂಬಲ ಮತ್ತು ಧನಸಹಾಯ ನೀಡುವ ಮೂಲಕ ದುನಿಕೆ ಸಂಘಟನೆ ಬಲಪಡಿಸುತ್ತಿದ್ದ.

ಮತ್ತಷ್ಟು ಓದಿ: Delhi: ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್​ನ ಇಬ್ಬರು ಸಹಚರರ ಬಂಧನ

ದುನೆಕೆ ಕೂಡ ಖಲಿಸ್ತಾನಿ ಪರ ಸಂಘಟನೆಗಳತ್ತ ಒಲವು ತೋರಿದ್ದ. ತನ್ನ ಸಹಚರರ ಸಹಾಯದಿಂದ ದುನೆಕೆ ಪಂಜಾಬ್ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಅಪರಾಧಗಳನ್ನು ಮಾಡುತ್ತಿದ್ದ. ಕಳೆದ ವರ್ಷ ಮಾರ್ಚ್ 14 ರಂದು ಜಲಂಧರ್‌ನ ಮಲ್ಲಿಯನ್ ಗ್ರಾಮದಲ್ಲಿ ಕಬಡ್ಡಿ ಪಂದ್ಯದ ವೇಳೆ ದುನಿಕೆ ತನ್ನ ಸಹಚರರ ಸಹಾಯದಿಂದ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.

ಈತನ ವಿರುದ್ಧ ಪಂಜಾಬ್ ಮತ್ತು ನೆರೆಯ ರಾಜ್ಯಗಳಲ್ಲಿ 20 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಕೊಲೆ ಮತ್ತು ಇತರ ಗಂಭೀರ ಅಪರಾಧಗಳು ದಾಖಲಾಗಿವೆ. ಇತ್ತೀಚೆಗಷ್ಟೇ ಕೆನಡಾ ಖಲಿಸ್ತಾನ್ ಟೈಗರ್ ಫೋರ್ಸ್‌ನ (ಕೆಟಿಎಫ್) ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಯಾವುದೇ ಖಚಿತವಾದ ಸಾಕ್ಷ್ಯಗಳಿಲ್ಲದೆ ಕೊಂದಿದೆ ಎಂದು ಕೆನಡಾ ಭಾರತದ ಮೇಲೆ ಆರೋಪ ಮಾಡಿತ್ತು.

ಭಾರತದಿಂದ ಪಲಾಯನ ಮಾಡಿದ ಗ್ಯಾಂಗ್​ಸ್ಟರ್​ಗಳು ಪ್ರಪಂಚದಾದ್ಯಂತ 10 ವಿವಿಧ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಕೆನಡಾದಲ್ಲಿ 8, ಅಮೆರಿಕದಲ್ಲಿ 11, ಆಸ್ಟ್ರೇಲಿಯಾದಲ್ಲಿ 2, ಪಾಕಿಸ್ತಾನದಲ್ಲಿ 1, ಮಲೇಷ್ಯಾದಲ್ಲಿ 2, ಯುಎಇಯಲ್ಲಿ 1, ಹಾಂಗ್ ಕಾಂಗ್‌ನಲ್ಲಿ 1, ಇಟಲಿ-ಪೋರ್ಚುಗಲ್‌ನಲ್ಲಿ 1, ಇಂಡೋನೇಷ್ಯಾದಲ್ಲಿ 1 ಮತ್ತು ಜರ್ಮನಿಯಲ್ಲಿ 1 ಇವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ