AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024 ಜನವರಿ ಕೊನೆಯ ವಾರದಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ

ಆಗಸ್ಟ್ 9 ರಂದು ಅಕಾಲಿಕವಾಗಿ ವಿಸರ್ಜನೆಯಾದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ ನಂತರ 90 ದಿನಗಳಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹಿಂದಿನ ಸರ್ಕಾರವು ತನ್ನ ಅವಧಿ ಮುಗಿಯುವ ಕೆಲವೇ ದಿನಗಳ ಮೊದಲು ಹೊಸ ಜನಗಣತಿ ಪೂರ್ಣಗೊಂಡ ನಂತರ ಮತ್ತು ಹೊಸ ಕ್ಷೇತ್ರಗಳ ಗಡಿಯನ್ನು ರಚಿಸಿದ ನಂತರವೇ ಚುನಾವಣೆ ನಡೆಸಬಹುದು ಎಂದು ಘೋಷಿಸಿತು.

2024 ಜನವರಿ ಕೊನೆಯ ವಾರದಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ
ಪಾಕಿಸ್ತಾನ
ರಶ್ಮಿ ಕಲ್ಲಕಟ್ಟ
|

Updated on: Sep 21, 2023 | 6:02 PM

Share

ಇಸ್ಲಾಮಾಬಾದ್ ಸೆಪ್ಟೆಂಬರ್ 21:ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಜನವರಿ 2024 ರ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ (Pakistan) ಚುನಾವಣಾ ಆಯೋಗವು (Election commission) ಗುರುವಾರ ಹೇಳಿದೆ. ಕ್ಷೇತ್ರಗಳ ವಿಂಗಡಣೆಯ (delimitation )ಕೆಲಸವನ್ನು ತಾನು ಪರಿಶೀಲಿಸಿದ್ದು, ಕ್ಷೇತ್ರಗಳ ವಿಂಗಡಣೆಯ ಆರಂಭಿಕ ಪಟ್ಟಿಯನ್ನು ಸೆಪ್ಟೆಂಬರ್ 27 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಲಿಸಿದ ನಂತರ ನವೆಂಬರ್ 30 ರಂದು ಅಂತಿಮ ಪಟ್ಟಿಯನ್ನು ನೀಡಲಾಗುವುದು ಎಂದು ಅದು ಹೇಳಿದೆ.

2024ರ ಜನವರಿ ಕೊನೆಯ ವಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಆಗಸ್ಟ್ 9 ರಂದು ಅಕಾಲಿಕವಾಗಿ ವಿಸರ್ಜನೆಯಾದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ ನಂತರ 90 ದಿನಗಳಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹಿಂದಿನ ಸರ್ಕಾರವು ತನ್ನ ಅವಧಿ ಮುಗಿಯುವ ಕೆಲವೇ ದಿನಗಳ ಮೊದಲು ಹೊಸ ಜನಗಣತಿ ಪೂರ್ಣಗೊಂಡ ನಂತರ ಮತ್ತು ಹೊಸ ಕ್ಷೇತ್ರಗಳ ಗಡಿಯನ್ನು ರಚಿಸಿದ ನಂತರವೇ ಚುನಾವಣೆ ನಡೆಸಬಹುದು ಎಂದು ಘೋಷಿಸಿತು.

ಈ ಕ್ರಮವು 90 ದಿನಗಳೊಳಗೆ ನಡೆಯಬೇಕಿದ್ದ ಚುನಾವಣೆಯು ಮುಂದಿನ ವರ್ಷಕ್ಕೆ ವಿಳಂಬವಾಗಬಹುದು ಎಂಬ ಆತಂಕವನ್ನು ಉಂಟುಮಾಡಿದೆ. ಏಕೆಂದರೆ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಆದಷ್ಟು ಬೇಗನೆ ಚುನಾವಣೆಗಳಿಗೆ ಒತ್ತಾಯಿಸಿದ ಹಲವಾರು ರಾಜಕೀಯ ಪಕ್ಷಗಳಿಂದ ಇಸಿಪಿ ಮೇಲೆ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಡಿಲಿಮಿಟೇಶನ್‌ನ ಅವಧಿಯನ್ನು ಕಡಿಮೆ ಮಾಡುವ ನಿರ್ಧಾರವು ಬಂದಿದೆ.

ಇದನ್ನೂ ಓದಿ:  ಅದ್ದೂರಿ ಮದುವೆ, ಬಾಲಿವುಡ್ ಸೆಲಬ್ರಿಟಿಗಳ ಪಾತ್ರ, ಪಾಕಿಸ್ತಾನದ ನಂಟು; ಬೆಟ್ಟಿಂಗ್ ಮಾದೇವನ ಕರ್ಮಕಾಂಡ

ಇಸಿಪಿ 120 ದಿನಗಳಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸಂವಿಧಾನವು ಹೇಳುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!