ಖಲಿಸ್ತಾನಿಗಳು ಕೆನಡಾದಲ್ಲಿ ಹಿಂದೂ ಹಾಗೂ ಸಿಖ್ಖರನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿದ್ದಾರೆ: ಕೆನಡಾ ಸಂಸದ ಚಂದ್ರ ಆರ್ಯ
ಖಲಿಸ್ತಾನಿಗಳು ಕೆನಡಾ(Canada)ದಲ್ಲಿ ಹಿಂದೂ ಹಾಗೂ ಸಿಖ್ಖರನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ(Chandra Arya) ಹೇಳಿದ್ದಾರೆ. ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ನಮ್ಮ ಬಹುಪಾಲು ಸಿಖ್ ಸಹೋದರರು ಮತ್ತು ಸಹೋದರಿಯರು ಖಲಿಸ್ತಾನಿ ಚಳವಳಿಯನ್ನು ಬೆಂಬಲಿಸುವುದಿಲ್ಲ, ಚಳವಳಿಯನ್ನು ಸಾರ್ವಜನಿಕವಾಗಿ ಖಂಡಿಸದಿರಬಹುದು ಆದರೆ ಅವರು ಹಿಂದೂ-ಕೆನಡಿಯನ್ ಸಮುದಾಯದೊಂದಿದೆ ಉತ್ತಮ ಸಂಪರ್ಕ ಹೊಂದಿದ್ದಾರೆ ಎಂದರು.
ಖಲಿಸ್ತಾನಿಗಳು ಕೆನಡಾ(Canada)ದಲ್ಲಿ ಹಿಂದೂ ಹಾಗೂ ಸಿಖ್ಖರನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ(Chandra Arya) ಹೇಳಿದ್ದಾರೆ. ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ನಮ್ಮ ಬಹುಪಾಲು ಸಿಖ್ ಸಹೋದರರು ಮತ್ತು ಸಹೋದರಿಯರು ಖಲಿಸ್ತಾನಿ ಚಳವಳಿಯನ್ನು ಬೆಂಬಲಿಸುವುದಿಲ್ಲ, ಚಳವಳಿಯನ್ನು ಸಾರ್ವಜನಿಕವಾಗಿ ಖಂಡಿಸದಿರಬಹುದು ಆದರೆ ಅವರು ಹಿಂದೂ-ಕೆನಡಿಯನ್ ಸಮುದಾಯದೊಂದಿದೆ ಉತ್ತಮ ಸಂಪರ್ಕ ಹೊಂದಿದ್ದಾರೆ ಎಂದರು.
ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಭಯೋತ್ಪಾದನೆಯ ವೈಭವೀಕರಣ ಅಥವಾ ಧಾರ್ಮಿಕ ಗುಂಪನ್ನು ಗುರಿಯಾಗಿರುವ ಅಪರಾಧವನ್ನು ಹೇಗೆ ಅನುಮತಿಸಲಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲಿನ ದಾಳಿಗಳು ಮತ್ತು ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಆಚರಣೆಯನ್ನು ಖಂಡಿಸಿದರು.
ಎಸ್‌ಎಫ್‌ಜೆಯ ಕಾನೂನು ಸಲಹೆಗಾರ ಗುರುಪತ್‌ವಂತ್ ಪನ್ನುನ್ ಅವರು ಕೆನಡಾವನ್ನು ತೊರೆಯುವಂತೆ ಭಾರತೀಯರನ್ನು ಕೇಳುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಈ ವರ್ಷ ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಭಾರತೀಯ ಸರ್ಕಾರಿ ಸಂಸ್ಥೆ ಕೊಂದಿದೆ ಎಂದು ಮಂಗಳವಾರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದರು.
ಮತ್ತಷ್ಟು ಓದಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಭಾರತವನ್ನು ಒತ್ತಾಯಿಸಿದ ಅಮೆರಿಕ
ಭಾರತವು ಕೆನಡಾ ಸರ್ಕಾರದ ಆರೋಪಗಳನ್ನು ‘ಅಸಂಬದ್ಧ’ ಎಂದು ತಳ್ಳಿಹಾಕಿತು ಮತ್ತು ನಂತರ ಕೆನಡಾದ ರಾಜತಾಂತ್ರಿಕರನ್ನು ಮುಂದಿನ ಐದು ದಿನಗಳಲ್ಲಿ ದೇಶದಿಂದ ನಿರ್ಗಮಿಸುವಂತೆ ಕೇಳಿಕೊಂಡಿದೆ.
ಕೆನಡಾವು ಹೆಚ್ಚಿನ ನೈತಿಕ ಮೌಲ್ಯಗಳನ್ನು ಹೊಂದಿದೆ ಮತ್ತು ನಾವು ಕಾನೂನಿನ ನಿಯಮವನ್ನು ಸಂಪೂರ್ಣವಾಗಿ ಎತ್ತಿಹಿಡಿಯುತ್ತೇವೆ ಎಂದರು.
Few days back Khalistan movement leader in Canada and the president of Sikhs for Justice which organizes the so-called referendum Gurpatwant Singh Pannun attacked Hindu-Canadians asking us to leave Canada and go back to India. I have heard from many Hindu-Canadians who are… pic.twitter.com/z3vkAcsUDs
— Chandra Arya (@AryaCanada) September 20, 2023
ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದರು. ಹಾಗೆಯೇ ಕನ್ನಡದಲ್ಲಿಯೇ ಭಾಷಣ ಮಾಡಿದ್ದರು.
‘ನಾನು ಕೆನಡಾದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ, ಈ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ಜನರು ಇದನ್ನು ಮಾತನಾಡುತ್ತಾರೆ. ಭಾರತದ ಹೊರಗಿನ ಪ್ರಪಂಚನ ಯಾವುದೇ ಸಂಸತ್ತಿನಲ್ಲಿ ಕನ್ನಡವನ್ನು ಮಾತನಾಡಿರುವುದು ಇದೇ ಮೊದಲು’ ಎಂದು ಚಂದ್ರ ಆರ್ಯ ಹೇಳಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ