Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತವನ್ನು ವಿಶ್ವವೇ ನೋಡುತ್ತಿದೆ, ನಾವು ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ: ಪಾಕ್​​ ಮಾಜಿ ಪ್ರಧಾನಿ

Nawaz Sharif: ಭಾರತವು ಚಂದ್ರನನ್ನು ತಲುಪಿದೆ ಮತ್ತು ಜಿ 20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಆದರೆ ಪಾಕಿಸ್ತಾನ ಹಣಕ್ಕಾಗಿ ಇತರ ರಾಷ್ಟ್ರಗಳಲ್ಲಿ ಬೇಡಿಕೊಳ್ಳುತ್ತಿದೆ ಎಂದು ಪಾಕ್​​ ಮಾಜಿ ಪ್ರಧಾನಿ ನವಾಜ್​​ ಷರೀಫ್ ಹೇಳಿದ್ದಾರೆ. ಲಾಹೋರ್‌ನಲ್ಲಿ ನಡೆದ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ಇಂದು, ಭಾರತವು ಚಂದ್ರನ ಮೇಲೆ ಕಾಲಿಡುತ್ತಿರುವಾಗ, ಜತೆಗೆ ಜಿ 20ನಲ್ಲಿ ವಿಶ್ವ ನಾಯಕರಿಗೆ ಆತಿಥ್ಯ ನೀಡುತ್ತಿರುವಾಗ ಪಾಕಿಸ್ತಾನದ ಪ್ರಧಾನಿ ನಿಧಿಗಾಗಿ ಭಿಕ್ಷೆ ಬೇಡಲು ವಿದೇಶಗಳಿಗೆ ಹೋಗುತ್ತಿದ್ದಾರೆ.

ಭಾರತವನ್ನು ವಿಶ್ವವೇ ನೋಡುತ್ತಿದೆ, ನಾವು ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ: ಪಾಕ್​​ ಮಾಜಿ ಪ್ರಧಾನಿ
ಪಾಕ್​​ ಮಾಜಿ ಪ್ರಧಾನಿ ನವಾಜ್​​ ಷರೀಫ್
Follow us
ಅಕ್ಷಯ್​ ಪಲ್ಲಮಜಲು​​
|

Updated on: Sep 20, 2023 | 1:16 PM

ಇಸ್ಲಾಮಾಬಾದ್, ಸೆ.20: ಭಾರತ ಎಲ್ಲದರಲ್ಲೂ ಮುಂದೆ ಸಾಗುತ್ತಿದೆ. ಭಾರತ ಚಂದ್ರಯಾನ -3ಯನ್ನು (chandrayaan 3) ಯಶ್ವಸಿ ಮಾಡಿದೆ. ವಿಶ್ವವೇ ಭಾರತದತ್ತ ನೋಡುವಂತೆ ಜಿ-20 ಶೃಂಗಸಭೆ ನಡೆಸಿದೆ. ಆದರೆ  ಪಾಕಿಸ್ತಾನ ಏನು? ಮಾಡುತ್ತಿದೆ ಎಂದು ಅಚ್ಚರಿಯ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​​ ಷರೀಫ್ (Nawaz Sharif) ನೀಡಿದ್ದಾರೆ. ತಮ್ಮ ಪಕ್ಷದ ಪಿಎಂಎಲ್ (ಎನ್) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತವು ಚಂದ್ರನನ್ನು ತಲುಪಿದೆ ಮತ್ತು ಜಿ 20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಆದರೆ ಪಾಕಿಸ್ತಾನ ಹಣಕ್ಕಾಗಿ ಇತರ ರಾಷ್ಟ್ರಗಳಲ್ಲಿ ಬೇಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಲಾಹೋರ್‌ನಲ್ಲಿ ನಡೆದ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ಇಂದು, ಭಾರತವು ಚಂದ್ರನ ಮೇಲೆ ಕಾಲಿಡುತ್ತಿರುವಾಗ, ಜತೆಗೆ ಜಿ 20ನಲ್ಲಿ ವಿಶ್ವ ನಾಯಕರಿಗೆ ಆತಿಥ್ಯ ನೀಡುತ್ತಿರುವಾಗ ಪಾಕಿಸ್ತಾನದ ಪ್ರಧಾನಿ ನಿಧಿಗಾಗಿ ಭಿಕ್ಷೆ ಬೇಡಲು ವಿದೇಶಗಳಿಗೆ ಹೋಗುತ್ತಿದ್ದಾರೆ. ಪಾಕಿಸ್ತಾನಕ್ಕೆ ಏಕೆ ಅಂತಹ ಸಾಧನೆ ಮಾಡಲು ಸಾಧ್ಯವಾಗಲಿಲ್ಲ? ನಮ್ಮ ದೇಶದ ಈ ಸ್ಥಿತಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಲ್ಲಿರುವ ಬಡವರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ನಾವು ನಮ್ಮ ದೇಶಕ್ಕೆ ಏನು ಮಾಡಿದ್ದೇವೆ? ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಪಾಕಿಸ್ತಾನದ ಪ್ರಸ್ತುತ ಆರ್ಥಿಕತೆಯ ಸ್ಥಿತಿಯ ಬಗ್ಗೆ ಟೀಕಿಸಿದ ಷರೀಫ್, ನಮ್ಮ ದೇಶಕ್ಕೆ ಇಂತಹ ಸ್ಥಿತಿ ತಂದವರು ದೊಡ್ಡ ಅಪರಾಧಿಗಳು ಎಂದು ಹೇಳಿದ್ದಾರೆ.

1990ರಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ ನೇತೃತ್ವದ ಸರ್ಕಾರ ಮಾಡಿದ ಆರ್ಥಿಕ ಸುಧಾರಣೆಗಳನ್ನು ಈಗಿನ ಸರ್ಕಾರ ಅನುಸರಿಸಬೇಕು ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿಯಾದಾಗ ಅವರ ಖಜಾನೆಯಲ್ಲಿ ಕೇವಲ ಒಂದು ಬಿಲಿಯನ್ ಡಾಲರ್ ಇತ್ತು. ಈಗ, ಅವರ ವಿದೇಶಿ ವಿನಿಮಯ ಸಂಗ್ರಹವು 600 ಶತಕೋಟಿಗೆ ಏರಿದೆ ಎಂದು ಷರೀಫ್ ಹೇಳಿದರು.

ಆದರೆ ಪಾಕಿಸ್ತಾನ ಇನ್ನೂ ಒಂದು ಶತಕೋಟಿ ಡಾಲರ್‌ಗೆ ಇತರ ದೇಶಗಳ ಮುಂದೆ ಭಿಕ್ಷೆ ಬೇಡಬೇಕಾಗಿದೆ. ನಮ್ಮ ಸ್ಥಿತಿ ಎಲ್ಲಿಗೆ ಬಂದಿದೆ? ಭಾರತದ ಮುಂದೆ ಯಾವ ಹಂತಕ್ಕೆ ಬಂದು ನಿಲ್ಲಲಿದ್ದೇವೆ? ನಾವು ಇಂದಿಗೂ ಚೀನಾ ಮತ್ತು ಗಲ್ಫ್‌ನಿಂದ ಹಣವನ್ನು ಕೇಳುತ್ತಿದ್ದೇವೆ ಎಂದು ಖಡಕ್​​​ ಆಗಿ ಸರ್ಕಾರವನ್ನು ಟೀಕಿಸಿದರು.

ಇದನ್ನೂ ಓದಿ: ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಎಲ್ಲಿದ್ದಾನೆ ಎಂದು ಭಾರತಕ್ಕೆ ತಿಳಿಸಿದ್ದು ನವಾಜ್ ಷರೀಫ್: ಪಾಕ್ ಸಚಿವ

ಪಾಕ್​​ ಮಾಜಿ ಪ್ರಧಾನಿ ನವಾಜ್​​ ಷರೀಫ್ ಅವರು ಅಕ್ಟೋಬರ್ 21ರಂದು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಇನ್ನು ಪಾಕಿಸ್ತಾನದ ಕೆಟ್ಟ ಆರ್ಥಿಕ ಸ್ಥಿತಿ ಮತ್ತು ರಾಜಕೀಯ ಬಿಕ್ಕಟ್ಟು ದೇಶ ಜನರ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಈಗಾಗಲೇ ಪಾಕ್​​​ ಹಣದುಬ್ಬರ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಡಾನ್​​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !