ಹೂಡಿಕೆಗಳ ಮೂಲಕ 15 ವರ್ಷದಲ್ಲಿ 1 ಕೋಟಿ ಗಳಿಸುವುದು ಹೇಗೆ? ಇಲ್ಲಿದೆ ಟ್ರಿಪಲ್ 15 ಫಾರ್ಮುಲ
ಹೂಡಿಕೆಯಲ್ಲಿ ಅಧಿಕ ರಿಸ್ಕ್ ತೆಗೆದುಕೊಳ್ಳಬಯಸುವವರು ಈಕ್ವಿಟಿ ಮೊರೆ ಹೋಗಬಹುದು. ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡುವ ಬದಲು ಮ್ಯುಚುವಲ್ ಫಂಡ್ಗಳ ಮೂಲಕವೇ ಹೂಡಿಕೆ ಮಾಡಬಹುದು. ಅದೇನೇ ಆದರೂ 15 ವರ್ಷದಲ್ಲಿ ಕೋಟ್ಯಧಿಪತಿ ಆಗಲು ತಜ್ಞರು 15 X 15 X 15 ಫಾರ್ಮುಲಾ ಮುಂದಿಡುತ್ತಾರೆ. ಇದು ಮ್ಯುಚುವಲ್ ಫಂಡ್ ಎಸ್ಐಪಿಗಳಿಂದ ಸಾಧ್ಯವಾಗುತ್ತದೆ.
ನಮ್ಮ ಕಾಯಕದ ಹಿಂದೆ ಹಣ ಗಳಿಕೆಯ ಗುರಿ ಇದ್ದೇ ಇರುತ್ತದೆ. ಇಂತಿಷ್ಟು ವರ್ಷದಲ್ಲಿ ನಿರ್ದಿಷ್ಟ ಮೊತ್ತದ ಹಣ ಕೂಡಿಹಾಕುವ ಗುರಿ ಅನೇಕರಿಗೆ ಇರುತ್ತದೆ. ಹಣದ ಉಳಿತಾಯ ಮತ್ತು ಆ ಉಳಿತಾಯ ಹಣದ ಹೂಡಿಕೆಗಳ ಮೂಲಕ ಹಣ ಕೂಡಿಹಾಕಲು ಸಾಧ್ಯ. ಈಗ ಹೂಡಿಕೆಗಳಿಗೆ ಹಲವು ರೀತಿಯ ಮಾರ್ಗಗಳಿವೆ. ಸಾಂಪ್ರದಾಯಿಕ ವಿಧಾನಗಳಾದ ಎಫ್ಡಿ, ಆರ್ಡಿ ಇತ್ಯಾದಿಗಳಿಗೆ. ಸರ್ಕಾರದಿಂದ ನೀಡಲಾಗುವ ಪಿಪಿಎಫ್, ಎನ್ಎಸ್ಸಿ, ಕೆವಿಪಿ, ಡೆಟ್ ಬಾಂಡ್ ಮಾರ್ಗಗಳಿವೆ. ಹಾಗೆಯೇ, ಕಾರ್ಪೊರೇಟ್ ಬಾಂಡ್ಗಳಿವೆ. ಚಿನ್ನ, ರಿಯಲ್ ಎಸ್ಟೇಟ್ ಇತ್ಯಾದಿ ಭೌತಿಕ ಆಸ್ತಿಗಳ (Physical assets) ಮೇಲೆಯೂ ಹೂಡಿಕೆಗಳನ್ನು ಮಾಡಬಹುದು. ಹಾಗೆಯೇ, ಅಧಿಕ ರಿಸ್ಕ್ ತೆಗೆದುಕೊಳ್ಳಬಯಸುವವರು ಈಕ್ವಿಟಿ (stock investments) ಮೊರೆ ಹೋಗಬಹುದು. ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡುವ ಬದಲು ಮ್ಯುಚುವಲ್ ಫಂಡ್ಗಳ (mutual fund) ಮೂಲಕವೇ ಹೂಡಿಕೆ ಮಾಡಬಹುದು. ಅದೇನೇ ಆದರೂ 15 ವರ್ಷದಲ್ಲಿ ಕೋಟ್ಯಧಿಪತಿ ಆಗಲು ತಜ್ಞರು 15 X 15 X 15 ಫಾರ್ಮುಲಾ ಮುಂದಿಡುತ್ತಾರೆ.
ಏನಿದು 15 X 15 X 15 ಸೂತ್ರ?
ಮೊದಲಿಗೆ ನೀವು ತಿಂಗಳಿಗೆ 15,000 ರೂ ಹೂಡಿಕೆ ಮಾಡಬೇಕು. ಇದು 15 ವರ್ಷ ನಿರಂತರವಾಗಿ ನಡೆಯಬೇಕು. ನಿಮ್ಮ ಹೂಡಿಕೆ ವಾರ್ಷಿಕವಾಗಿ ಶೇ. 15ರ ದರದಲ್ಲಿ ರಿಟರ್ನ್ ಕೊಡಬೇಕು. ಹೀಗಾದಲ್ಲಿ 15 ವರ್ಷದಲ್ಲಿ ನೀವು ಒಂದು ಕೋಟಿ ರೂಗಳ ಒಡೆಯರಾಗಲು ಸಾಧ್ಯ.
ಇದನ್ನೂ ಓದಿ: ಪಿಪಿಎಫ್ ಹಣ ಹಿಂಪಡೆಯುವುದು ಹೇಗೆ? ನಿಯಮಗಳು, ದಾಖಲೆ, ಮಾನದಂಡಗಳೇನೇನು? ಇಲ್ಲಿದೆ ವಿವರ
ಇಲ್ಲಿ ವರ್ಷಕ್ಕೆ ಶೇ. 15ರಷ್ಟು ರಿಟರ್ನ್ ಸಿಗಬೇಕೆಂದರೆ ಕೆಲ ಮ್ಯುಚುವಲ್ ಫಂಡ್ ಎಸ್ಐಪಿಗಳಿಂದ ಸಾಧ್ಯವಾಗಬಹುದು. ಸಾಮಾನ್ಯವಾಗಿ ಎಸ್ಐಪಿಗಳಿಂದ ವರ್ಷಕ್ಕೆ ಶೇ. 10ರಿಂದ ಶೇ. 20ರವರೆಗೆ ನಿರೀಕ್ಷಿಸಬಹುದು.
ಟ್ರಿಪಲ್ 15 ಫಾರ್ಮುಲಾ ವಿಷಯಕ್ಕೆ ಬಂದರೆ, ನೀವು ತಿಂಗಳಿಗೆ 15,000 ರೂ ಹಣವನ್ನು 15 ವರ್ಷ ಕಟ್ಟಿದರೆ ಒಟ್ಟು 27 ಲಕ್ಷ ರೂ ಆಗುತ್ತದೆ. ಶೇ. 15ರಷ್ಟು ವಾರ್ಷಿಕ ರಿಟರ್ನ್ ಸಿಕ್ಕರೆ ಈ ಹಣ 1 ಕೋಟಿ ಆಗುತ್ತದೆ.
ಒಂದು ವೇಳೆ ನಿಮ್ಮ ಮ್ಯೂಚುವಲ್ ಫಂಡ್ ಎಸ್ಐಪಿ ವರ್ಷಕ್ಕೆ ಶೇ. 12 ಮಾತ್ರವೇ ರಿಟರ್ನ್ ಕೊಟ್ಟರೆ ನಿಮ್ಮ ಹೂಡಿಕೆ 75 ಲಕ್ಷ ರೂ ಮಾತ್ರವೆ ಆಗುವುದು. ಇನ್ನು, ದುರದೃಷ್ಟಕ್ಕೆ ಎಸ್ಐಪಿಯಿಂದ ಸಿಗುವ ರಿಟರ್ನ್ ಶೇ. 10ರ ದರ ಮಾತ್ರವೇ ಅಗಿದ್ದರೆ 62 ಲಕ್ಷ ರೂ ನಿಮ್ಮದಾಗಿರುತ್ತದೆ.
ಇದನ್ನೂ ಓದಿ: Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ
ಇನ್ನು, ನಿಮ್ಮ ಅದೃಷ್ಟಕ್ಕೆ ಮ್ಯೂಚುವಲ್ ಫಂಡ್ ಎಸ್ಐಪಿ ವರ್ಷಕ್ಕೆ ಶೇ. 20ರಷ್ಟು ರಿಟರ್ನ್ ತಂದುಕೊಟ್ಟಿದ್ದೇ ಆದಲ್ಲಿ 15 ವರ್ಷದಲ್ಲಿ ನಿಮ್ಮ ಹೂಡಿಕೆ 1.7 ಕೋಟಿ ರೂ ಅಗುತ್ತದೆ.
ಒಟ್ಟಾರೆ ತಿಂಗಳಿಗೆ 15,000 ರೂನಂತೆ 15 ವರ್ಷ ಕಾಲ ನಿರಂತರವಾಗಿ ನೀವು ಹೂಡಿಕೆ ಮಾಡಿದರೆ 60 ಲಕ್ಷ ರೂನಿಂದ 2 ಕೋಟಿ ರೂವರೆಗೆ ರಿಟರ್ನ್ ನಿರೀಕ್ಷಿಸಬಹುದು
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ