ಜಾಗತಿಕ ಚಿಪ್ ದೈತ್ಯ ಎನ್​ವಿಡಿಯ ಜೊತೆ ಇನ್ಫೋಸಿಸ್ ಒಪ್ಪಂದ; 50,000 ಉದ್ಯೋಗಿಗಳಿಗೆ ಎಐ ತರಬೇತಿ

Nvidia and Infosys Partnership: ವಿಶ್ವದ ಜಾಗತಿಕ ಚಿಪ್ ದೈತ್ಯ ಕಂಪನಿ ಎನ್​ವಿಡಿಯ ಮತ್ತು ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಮಧ್ಯೆ ಎಐ ತಂತ್ರಜ್ಞಾನ ಆಧಾರಿತ ಸೇವೆಗಳ ಪ್ಲಾಟ್​ಫಾರ್ಮ್ ಕಲಿಕೆಗೆ ಒಪ್ಪಂದವಾಗಿದೆ. ಎನ್​ವಿಡಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಿ 50,000 ಉದ್ಯೋಗಿಗಳಿಗೆ ನುರಿತ ತರಬೇತಿ ಕೊಡಿಸಲು ಇನ್ಫೋಸಿಸ್ ಯೋಜಿಸಿದೆ. ಇದರೊಂದಿಗೆ ಇನ್ಫೋಸಿಸ್​ನ ಐಟಿ ಸೇವೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಲಿದೆ.

ಜಾಗತಿಕ ಚಿಪ್ ದೈತ್ಯ ಎನ್​ವಿಡಿಯ ಜೊತೆ ಇನ್ಫೋಸಿಸ್ ಒಪ್ಪಂದ; 50,000 ಉದ್ಯೋಗಿಗಳಿಗೆ ಎಐ ತರಬೇತಿ
ಇನ್ಫೋಸಿಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2023 | 11:00 AM

ಬೆಂಗಳೂರು, ಸೆಪ್ಟೆಂಬರ್ 21: ಮುಂದಿನ ವರ್ಷಗಳು ಆರ್ಟಿಫಿಶಿಯಲ್ ತಂತ್ರಜ್ಞಾನ ಆಧಾರಿತ ಸೇವೆಗಳ ಕಾಲ. ವಿಶ್ವಾದ್ಯಂತ ಬಹಳಷ್ಟು ಸಂಸ್ಥೆಗಳು ಎಐ ಸೇವೆ ಪಡೆಯಲು ಕಾಯುತ್ತಿವೆ. ಸಾಫ್ಟ್​ವೇರ್ ಸರ್ವಿಸ್ ಉದ್ಯಮದಲ್ಲಿರುವ ಸಂಸ್ಥೆಗಳ ಬತ್ತಳಿಕೆಯಲ್ಲಿ ಇದು ಪ್ರಮುಖ ಅಸ್ತ್ರವಾಗಲಿದೆ. ಜಾಗತಿಕ ಚಿಪ್ ತಯಾರಕ ದೈತ್ಯ ಎನ್​ವಿಡಿಯಾ (Nvidia) ಜೊತೆ ಹಲವು ಕಂಪನಿಗಳು ಎಐ ತಂತ್ರಜ್ಞಾನಕ್ಕಾಗಿ ಒಪ್ಪಂದ ಮಾಡಿಒಳ್ಳುತ್ತಿವೆ. ಭಾರತದ ಟಾಟಾ ಗ್ರೂಪ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಎನ್​ವಿಡಿಯ ಜೊತೆ ಇತ್ತೀಚೆಗೆ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿದ್ದವು. ಇದೀಗ ಈ ಪಟ್ಟಿಗೆ ಇನ್ಫೋಸಿಸ್ ಸೇರ್ಪಡೆಯಾಗಿದೆ. ಜನರೇಟಿವ್ ಎಐ ಆ್ಯಪ್ ಮತ್ತು ಸಲ್ಯೂಶನ್ಸ್ ಮೂಲಕ ವಿವಿಧ ಸಂಸ್ಥೆಗಳಿಗೆ ಉತ್ಪನ್ನಶೀಲತೆ ಹೆಚ್ಚಿಸಲು ನೆರವಾಗಬಹುದು ಎಂಬ ದೃಷ್ಟಿಯಲ್ಲಿ ಎನ್​ವಿಡಿಯ ಜೊತೆ ಇನ್ಫೋಸಿಸ್ ಒಪ್ಪಂದ ಮಾಡಿಕೊಂಡಿದೆ.

ಎಐ ಟೆಕ್ನಾಲಜಿ ಬಳಸುವ ಟೊಪಾಜ್ (Topaz) ಎಂಬ ಅಪ್ಲಿಕೇಶನ್ ಅನ್ನು ಇನ್ಫೋಸಿಸ್ ಅಭಿವೃದ್ಧಿಪಡಿಸಿದೆ. ಈ ಟೊಪಾಜ್ ಜೊತೆ ಎನ್​ವಿಡಿಯದ ಎಐ ವ್ಯವಸ್ಥೆ ಸುಲಭವಾಗಿ ಸಮ್ಮಿಳಿತಗೊಳ್ಳುತ್ತದೆ. ಇದರಿಂದ ಇನ್ಫೋಸಿಸ್ ತನ್ನ ಗ್ರಾಹಕರಿಗೆ ಅವರ ಉದ್ಯಮಗಳಲ್ಲಿ ಜನರೇಟಿವ್ ಎಐ ಅನ್ನು ಮಿಳಿತಗೊಳಿಸಲು ಸುಲಭ ಆಗುತ್ತದೆ.

ಇದನ್ನೂ ಓದಿ: TIME: 2023ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು; ಟಾಪ್ 100 ಪಟ್ಟಿಯಲ್ಲಿ ಇನ್ಫೋಸಿಸ್; ಚೀನಾದ ಒಂದೂ ಇಲ್ಲ; ಇಲ್ಲಿದೆ ಲಿಸ್ಟ್

ಇನ್ಫೋಸಿಸ್​ನ 50,000 ಉದ್ಯೋಗಿಗಳಿಗೆ ತರಬೇತಿ

ಎನ್​ವಿಡಿಯದ ಎಐ ತಂತ್ರಜ್ಞಾನವನ್ನು ಕಲಿಯಲು ಇನ್ಫೋಸಿಸ್ ತನ್ನ ಕ್ಯಾಂಪಸ್​ನಲ್ಲೇ ವ್ಯವಸ್ಥೆ ಏರ್ಪಡಿಸಲು ಯೋಜಿಸಿದೆ. ಎನ್​ವಿಡಿಯ ಸೆಂಟರ್ ಆಫ್ ಎಕ್ಸಲೆನ್ಸ್ ಎಂಬ ಕೇಂದ್ರವನ್ನು ಸ್ಥಾಪಿಸಿ ತನ್ನಲ್ಲಿನ 50,000 ಉದ್ಯೋಗಿಗಳಿಗೆ ತರಬೇತಿ ಕೊಡಿಸುವುದು ಇನ್ಫೋಸಿಸ್​ನ ಚಿಂತನೆಯಾಗಿದೆ.

ಇನ್ಫೋಸಿಸ್ ಮತ್ತು ಎನ್​ವಿಡಿಯ ಈ ಎರಡೂ ಸಂಸ್ಥೆಗಳು ಒಟ್ಟುಗೂಡಿ 5ಜಿ, ಸೈಬರ್​ಸೆಕ್ಯೂರಿಟಿ, ಎನರ್ಜಿ ಟ್ರಾನ್ಸಿಶನ್ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಶಕ್ತ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈಗ ಜನರೇಟಿವ್ ಎಐ ಪರಿಹಾರಗಳನ್ನು ಒದಗಿಸುವ ಸಹಾಯವಾಗುವ ಪ್ಲಾಟ್​ಫಾರ್ಮ್ ಅನ್ನು ಬಳಸಲು ಗ್ರಾಹಕರಿಗೆ ಅನುವು ಮಾಡಿಕೊಡಲು ಇನ್ಫೋಸಿಸ್ ಉದ್ಯೋಗಿಗಳಿಗೆ ವೃತ್ತಿಪರ ತರಬೇತಿ ಕೊಡಲಿದೆ ಎನ್​ವಿಡಿಯ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್​ನ ಯಶೋಗಾಥೆ

ಎನ್​ವಿಡಿಯದ ಎಐ ಮಾಡಲ್ ಬಗ್ಗೆ ವಿವರಣೆಯ ಒಂದು ವಿಡಿಯೋ ಇಲ್ಲಿದೆ…

ಇನ್ಫೋಸಿಸ್ ಸಂಸ್ಥೆ ಟೈಮ್ ಮ್ಯಾಗಝಿನ್ ಪ್ರಸ್ತುತಪಡಿಸಿದ ವಿಶ್ವದ 100 ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿದೆ. ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಕಂಪನಿ ಇನ್ಫೋಸಿಸ್. ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಇನ್ಫೋಸಿಸ್ ಭಾರತದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿಗಳಲ್ಲಿ ಒಂದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!