ಬೆಂಗಳೂರು, ಸೆಪ್ಟೆಂಬರ್ 21: ಮುಂದಿನ ವರ್ಷಗಳು ಆರ್ಟಿಫಿಶಿಯಲ್ ತಂತ್ರಜ್ಞಾನ ಆಧಾರಿತ ಸೇವೆಗಳ ಕಾಲ. ವಿಶ್ವಾದ್ಯಂತ ಬಹಳಷ್ಟು ಸಂಸ್ಥೆಗಳು ಎಐ ಸೇವೆ ಪಡೆಯಲು ಕಾಯುತ್ತಿವೆ. ಸಾಫ್ಟ್ವೇರ್ ಸರ್ವಿಸ್ ಉದ್ಯಮದಲ್ಲಿರುವ ಸಂಸ್ಥೆಗಳ ಬತ್ತಳಿಕೆಯಲ್ಲಿ ಇದು ಪ್ರಮುಖ ಅಸ್ತ್ರವಾಗಲಿದೆ. ಜಾಗತಿಕ ಚಿಪ್ ತಯಾರಕ ದೈತ್ಯ ಎನ್ವಿಡಿಯಾ (Nvidia) ಜೊತೆ ಹಲವು ಕಂಪನಿಗಳು ಎಐ ತಂತ್ರಜ್ಞಾನಕ್ಕಾಗಿ ಒಪ್ಪಂದ ಮಾಡಿಒಳ್ಳುತ್ತಿವೆ. ಭಾರತದ ಟಾಟಾ ಗ್ರೂಪ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಎನ್ವಿಡಿಯ ಜೊತೆ ಇತ್ತೀಚೆಗೆ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿದ್ದವು. ಇದೀಗ ಈ ಪಟ್ಟಿಗೆ ಇನ್ಫೋಸಿಸ್ ಸೇರ್ಪಡೆಯಾಗಿದೆ. ಜನರೇಟಿವ್ ಎಐ ಆ್ಯಪ್ ಮತ್ತು ಸಲ್ಯೂಶನ್ಸ್ ಮೂಲಕ ವಿವಿಧ ಸಂಸ್ಥೆಗಳಿಗೆ ಉತ್ಪನ್ನಶೀಲತೆ ಹೆಚ್ಚಿಸಲು ನೆರವಾಗಬಹುದು ಎಂಬ ದೃಷ್ಟಿಯಲ್ಲಿ ಎನ್ವಿಡಿಯ ಜೊತೆ ಇನ್ಫೋಸಿಸ್ ಒಪ್ಪಂದ ಮಾಡಿಕೊಂಡಿದೆ.
ಎಐ ಟೆಕ್ನಾಲಜಿ ಬಳಸುವ ಟೊಪಾಜ್ (Topaz) ಎಂಬ ಅಪ್ಲಿಕೇಶನ್ ಅನ್ನು ಇನ್ಫೋಸಿಸ್ ಅಭಿವೃದ್ಧಿಪಡಿಸಿದೆ. ಈ ಟೊಪಾಜ್ ಜೊತೆ ಎನ್ವಿಡಿಯದ ಎಐ ವ್ಯವಸ್ಥೆ ಸುಲಭವಾಗಿ ಸಮ್ಮಿಳಿತಗೊಳ್ಳುತ್ತದೆ. ಇದರಿಂದ ಇನ್ಫೋಸಿಸ್ ತನ್ನ ಗ್ರಾಹಕರಿಗೆ ಅವರ ಉದ್ಯಮಗಳಲ್ಲಿ ಜನರೇಟಿವ್ ಎಐ ಅನ್ನು ಮಿಳಿತಗೊಳಿಸಲು ಸುಲಭ ಆಗುತ್ತದೆ.
ಇದನ್ನೂ ಓದಿ: TIME: 2023ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು; ಟಾಪ್ 100 ಪಟ್ಟಿಯಲ್ಲಿ ಇನ್ಫೋಸಿಸ್; ಚೀನಾದ ಒಂದೂ ಇಲ್ಲ; ಇಲ್ಲಿದೆ ಲಿಸ್ಟ್
ಎನ್ವಿಡಿಯದ ಎಐ ತಂತ್ರಜ್ಞಾನವನ್ನು ಕಲಿಯಲು ಇನ್ಫೋಸಿಸ್ ತನ್ನ ಕ್ಯಾಂಪಸ್ನಲ್ಲೇ ವ್ಯವಸ್ಥೆ ಏರ್ಪಡಿಸಲು ಯೋಜಿಸಿದೆ. ಎನ್ವಿಡಿಯ ಸೆಂಟರ್ ಆಫ್ ಎಕ್ಸಲೆನ್ಸ್ ಎಂಬ ಕೇಂದ್ರವನ್ನು ಸ್ಥಾಪಿಸಿ ತನ್ನಲ್ಲಿನ 50,000 ಉದ್ಯೋಗಿಗಳಿಗೆ ತರಬೇತಿ ಕೊಡಿಸುವುದು ಇನ್ಫೋಸಿಸ್ನ ಚಿಂತನೆಯಾಗಿದೆ.
ಇನ್ಫೋಸಿಸ್ ಮತ್ತು ಎನ್ವಿಡಿಯ ಈ ಎರಡೂ ಸಂಸ್ಥೆಗಳು ಒಟ್ಟುಗೂಡಿ 5ಜಿ, ಸೈಬರ್ಸೆಕ್ಯೂರಿಟಿ, ಎನರ್ಜಿ ಟ್ರಾನ್ಸಿಶನ್ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಶಕ್ತ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈಗ ಜನರೇಟಿವ್ ಎಐ ಪರಿಹಾರಗಳನ್ನು ಒದಗಿಸುವ ಸಹಾಯವಾಗುವ ಪ್ಲಾಟ್ಫಾರ್ಮ್ ಅನ್ನು ಬಳಸಲು ಗ್ರಾಹಕರಿಗೆ ಅನುವು ಮಾಡಿಕೊಡಲು ಇನ್ಫೋಸಿಸ್ ಉದ್ಯೋಗಿಗಳಿಗೆ ವೃತ್ತಿಪರ ತರಬೇತಿ ಕೊಡಲಿದೆ ಎನ್ವಿಡಿಯ.
ಇದನ್ನೂ ಓದಿ: ಇನ್ಫೋಸಿಸ್ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್ನ ಯಶೋಗಾಥೆ
ಎನ್ವಿಡಿಯದ ಎಐ ಮಾಡಲ್ ಬಗ್ಗೆ ವಿವರಣೆಯ ಒಂದು ವಿಡಿಯೋ ಇಲ್ಲಿದೆ…
ಇನ್ಫೋಸಿಸ್ ಸಂಸ್ಥೆ ಟೈಮ್ ಮ್ಯಾಗಝಿನ್ ಪ್ರಸ್ತುತಪಡಿಸಿದ ವಿಶ್ವದ 100 ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿದೆ. ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಕಂಪನಿ ಇನ್ಫೋಸಿಸ್. ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸುವ ಇನ್ಫೋಸಿಸ್ ಭಾರತದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿಗಳಲ್ಲಿ ಒಂದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ