ಡಿಜಿಟಲ್ ಸೇವೆ ವಿಸ್ತರಣೆ ಭಾಗವಾಗಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಿಂದ ಗುರುವಾರ ಡಿಜಿಗೋಲ್ಡ್ ಆರಂಭಿಸಲಾಗಿದೆ. ಯಾರು ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಬಯಸುತ್ತಾರೋ ಅವರಿಗೆ ಈ ಪ್ಲಾಟ್ಫಾರ್ಮ್ ಉಪಯೋಗ ಆಗಲಿದೆ. ಡಿಜಿಟಲ್ ಆಗಿ ಚಿನ್ನ ಒದಗಿಸುವ SafeGold ಜತೆಗೆ ಸಹಭಾಗಿತ್ವ ವಹಿಸಿ, ಈ ಸೇವೆಯನ್ನು ಒದಗಿಸಲಾಗುತ್ತದೆ. ಡಿಜಿಗೋಲ್ಡ್ನೊಂದಿಗೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನ ಉಳಿತಾಯ ಖಾತೆ ಗ್ರಾಹಕರು 24 ಕ್ಯಾರಟ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಅದು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕವಾಗಿ. ಅಷ್ಟೇ ಅಲ್ಲ, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ಇರುವ ಕುಟುಂಬ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಡಿಜಿಗೋಲ್ಡ್ ಮೂಲಕವಾಗಿ ಉಡುಗೊರೆಯನ್ನು ಸಹ ನೀಡಬಹುದು.
ನಮ್ಮ ನಿಯೋ ಬ್ಯಾಂಕಿಂಗ್ಗೆ ಡಿಜಿಗೋಲ್ಡ್ ಸೇರ್ಪಡೆಯು ಸರಳ, ಸುರಕ್ಷಿತ ಮತ್ತು ಮೌಲ್ಯಯುತ ಪ್ರಾಡಕ್ಟ್ ಎಂದು ಬ್ಯಾಂಕ್ನ ಸಿಒಒ ಗಣೇಶ್ ಅನಂತ್ನಾರಾಯಣನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಮ್ಮ ಗ್ರಾಹಕರು ಈಗ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನಮ್ಮ ಆ್ಯಪ್ ಮೂಲಕ ಯಾವುದೇ ತಡೆಯಿಲ್ಲದ ಡಿಜಿಟಲ್ ಪಯಣ ಮಾಡಬಹುದು. ನಿರಂತರವಾಗಿ ನಮ್ಮ ಗ್ರಾಹಕರು ಹೂಡಿಕೆ ಮಾಡಲು ಅನುಕೂಲ ಆಗುವಂತೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಗಳನ್ನು ಕೂಡ ಪರಿಚಯಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಗ್ರಾಹಕರು ಖರೀದಿ ಮಾಡಿದ ಚಿನ್ನವನ್ನು ಸೇಫ್ಗೋಲ್ಡ್ನಿಂದ ಸುರಕ್ಷಿತವಾಗಿ ಇಡಲಾಗುತ್ತದೆ. ಈ ರೀತಿ ಸಂಗ್ರಹಿಸಿಡುವುದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಆಗುವುದಿಲ್ಲ. ಜತೆಗೆ ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಯಾವುದೇ ಸಂದರ್ಭದಲ್ಲಾದರೂ ಕೆಲವೇ ಕ್ಲಿಕ್ಗಳಲ್ಲಿ ಮಾರಾಟ ಮಾಡಬಹುದು. ಕನಿಷ್ಠ ಇಷ್ಟೇ ಹೂಡಿಕೆ ಮಾಡಬೇಕು ಎಂಬ ಯಾವ ಅಗತ್ಯ ನಿಯಮ ಇಲ್ಲ ಮತ್ತು ಗ್ರಾಹಕರು ಕನಿಷ್ಠ ಮೊತ್ತದೊಂದಿಗೆ ಹೂಡಿಕೆಯನ್ನು ಆರಂಭಿಸಬಹುದು. ಸೇಫ್ಗೋಲ್ಡ್ನಿಂದ ಅಂತರರಾಷ್ಟ್ರೀಯ ಗುಣಮಟ್ಟದ 24 ಕ್ಯಾರಟ್ ಚಿನ್ನವನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ. ಅನುಕೂಲ ಮತ್ತು ಇಂಟರ್ನೆಟ್ ವೇಗ ಎರಡರ ಜತೆಗೆ ಸೆಬಿಯಿಂದ ನೋಂದಾಯಿತವಾದ ಟ್ರಸ್ಟಿಯ ಸುರಕ್ಷತೆಯೂ ಇದೆ. ಸಾಂಪ್ರದಾಯಿಕ ಚಿನ್ನದ ಖರೀದಿಗಿಂತ ಹೆಚ್ಚು ಸುರಕ್ಷವಾಗಿರುತ್ತದೆ.
ಇದನ್ನೂ ಓದಿ: ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ 1 ಲಕ್ಷ ರೂಪಾಯಿ ಮೇಲ್ಪಟ್ಟು ಮೊತ್ತದ ಠೇವಣಿಗೆ ವರ್ಷಕ್ಕೆ ಶೇ 6ರಷ್ಟು ಬಡ್ಡಿ
(Airtel Payments Bank launched product called DigiGold to buy gold)