Airtel: ನಿರೀಕ್ಷೆಮೀರಿದ ಲಾಭ ಗಳಿಸಿದ ಏರ್ಟೆಲ್; ಈ ಪ್ಲಾನ್ಗಳಿಗೆ ಶೇ. 15 ಡಿಸ್ಕೌಂಟ್; ಯಾವ್ಯಾವುದಕ್ಕೆ ಇದೆ ರಿಯಾಯಿತಿ?
Discount Upto 15% For These Airtel Plans: ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಭಾರ್ತಿ ಏರ್ಟೆಲ್ 2023 ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ 3,006 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಇದೇ ವೇಳೆ, ಅದರ ಬ್ರಾಡ್ಬ್ಯಾಂಡ್ ಪ್ಲಾನ್ಗಳಿಗೆ ಡಿಸ್ಕೌಂಟ್ ಕೂಡ ಘೋಷಣೆ ಆಗಿದೆ.
ನವದೆಹಲಿ: ಭಾರ್ತಿ ಏರ್ಟೆಲ್ ಸಂಸ್ಥೆ (Bharti Airtel) 2023ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ (FY23 Q4) ಭರ್ಜರಿ ಲಾಭ ಮಾಡಿ ತೋರಿಸಿದೆ. 2023 ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ ಅವಧಿಯಲ್ಲಿ ಏರ್ಟೆಲ್ನ ನಿವ್ವಳ ಲಾಭ ಬರೋಬ್ಬರಿ 3,006 ಕೋಟಿ ರೂ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಏರ್ಟೆಲ್ 2008 ಕೋಟಿ ರೂ ಲಾಭ ತೋರಿಸಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಅದರ ನಿವ್ವಳ ಲಾಭ ಶೇ. 50ರಷ್ಟು ಹೆಚ್ಚಾಗಿದೆ. ಇದು ನಿರೀಕ್ಷಿಸಿದಕ್ಕಿಂತಲೂ ಹೆಚ್ಚು ನಿವ್ವಳ ಲಾಭವಾಗಿದೆ.
ಇನ್ನು ಪ್ರತೀ ಬಳಕೆದಾರನಿಂದ ಬರುವ ಸರಾಸರಿ ಆದಾಯದ ಲೆಕ್ಕವಾದ ಮೊಬೈಲ್ ಎಆರ್ಪಿಯು (ARPU) ಕೂಡ ಹೆಚ್ಚಾಗಿದೆ. ಏರ್ಟೆಲ್ನ ಮೊಬೈಲ್ ಎಆರ್ಪಿಯು ಮಾರ್ಚ್ ಅಂತ್ಯದ ಕ್ವಾರ್ಟರ್ನಲ್ಲಿ 178 ರೂನಿಂದ 193 ರುಪಾಯಿಗೆ ಹೆಚ್ಚಾಗಿದೆ. ಈ ಅವಧಿಯಲ್ಲಿ ಏರ್ಟೆಲ್ಗೆ 74 ಲಕ್ಷದಷ್ಟು ಹೊಸ 4ಜಿ ಗ್ರಾಹಕರು ಸಿಕ್ಕಿದ್ದಾರೆ. ಇದರೊಂದಿಗೆ ಒಂದು ವರ್ಷದಲ್ಲಿ ಏರ್ಟೆಲ್ಗೆ 2.3 ಕೋಟಿಯಷ್ಟು ಹೊಸ 4ಜಿ ಗ್ರಾಹಕರು ಸಿಕ್ಕಿದಂತಾಗಿದೆ.
ಇದನ್ನೂ ಓದಿ: WhatsApp New Feature: ವಾಟ್ಸ್ಆ್ಯಪ್ನಲ್ಲಿ ಕೆಲ ಬಳಕೆದಾರರಿಗೆ ಸಿಗುತ್ತಿದೆ ಈ ಅಚ್ಚರಿ ಫೀಚರ್: ತಕ್ಷಣ ಅಪ್ಡೇಟ್ ಮಾಡಿ
ಏರ್ಟೆಲ್ ಬ್ರಾಡ್ಬ್ಯಾಂಡ್ ಪ್ಲಾನ್ಗಳಿಗೆ ಶೇ. 15ರವರೆಗೂ ರಿಯಾಯಿತಿ
ಏರ್ಟೆಲ್ಗೆ ಭರ್ಜರಿ ಲಾಭ ಬಂದ ಹೊತ್ತಲ್ಲೇ ಈಗ ಏರ್ಟೆಲ್ನ ಬ್ರಾಡ್ಬ್ಯಾಂಡ್ ಪ್ಲಾನ್ಗಳಿಗೆ ಶೇ. 15ರವರೆಗೂ ರಿಯಾಯಿತಿ ಪ್ರಕಟಿಸಲಾಗಿದೆ. ಜಿಯೋ ಮತ್ತಿತರ ಬ್ರಾಡ್ಬ್ಯಾಂಡ್ ಸೇವೆ ನೀಡುವ ಕಂಪನಿಗಳ ಡಿಸ್ಕೌಂಟ್ ಯುದ್ಧಕ್ಕೆ ಏರ್ಟೆಲ್ ಕೂಡ ಧುಮುಕಿದಂತಾಗಿದೆ. ಏರ್ಟೆಲ್ ಎಕ್ಸ್ಸ್ಟ್ರೀಮ್ನ (Airtel Xstream) 6 ತಿಂಗಳು ಮತ್ತು 12 ತಿಂಗಳ ಪ್ಲಾನ್ಗಳಿಗೆಡಿಸ್ಕೌಂಟ್ ನೀಡಲಾಗುತ್ತಿದೆ.
ಇದನ್ನೂ ಓದಿ: Education Loan: ಕೋರ್ಸ್ ಫೀಸ್ ಮೊತ್ತವಷ್ಟೇ ಸಾಲ ಸಿಗುತ್ತಾ? ಎಜುಕೇಶನ್ ಲೋನ್ ಪಡೆಯುವ ಮುನ್ನ ಈ ವಿಚಾರಗಳು ತಿಳಿದಿರಲಿ
ಏರ್ಟೆಲ್ ಎಕ್ಸ್ಟ್ರೀಮ್ನ 6 ತಿಂಗಳ ಪ್ಲಾನ್ಗಳಿಗೆ ಶೇ. 7.5, ಹಾಗು 12 ತಿಂಗಳ ಪ್ಲಾನ್ಗಳಿಗೆ ಶೇ. 15ರಷ್ಟು ಡಿಸ್ಕೌಂಟ್ ಕೊಡಲಾಗುತ್ತದೆ. 3 ತಿಂಗಳ ಪ್ಲಾನ್ಗಳಿಗೆ ರಿಯಾಯಿತಿ ಇರುವುದಿಲ್ಲ. 499 ರೂಗಿಂತ ಹೆಚ್ಚಿನ ಮೊತ್ತದ ಪ್ಲಾನ್ಗಳಿಗೆ ಡಿಸ್ಕೌಂಟ್ ಸಿಗುತ್ತದೆ. 799 ರೂ, 999 ರೂ, 1499 ರೂ, 2498 ರೂ ಮತ್ತು 3999 ರೂ ಮೊದಲಾದ ಪ್ಲಾನ್ಗಳಿಗೆ ಡಿಸ್ಕೌಂಟ್ ಇದೆ. ಈ ಪ್ಲಾನ್ಗಳನ್ನು ಖರೀದಿಸುವುದಾದರೆ ಆ ಮೊತ್ತಕ್ಕೆ ಡಿಸ್ಕೌಂಟ್ ಕಳೆದು ಉಳಿದ ಮೊತ್ತವನ್ನಷ್ಟೇ ಪಾವತಿಸಬಹುದು.