IRDAI: ಬಾಡಿಗೆ ತಾಯಂದಿರಿಗೆ ಸಿಹಿಸುದ್ದಿ ನೀಡಿದ IRDAI, ಇಲ್ಲಿದೆ ಮಾಹಿತಿ

ಬಾಡಿಗೆ ತಾಯ್ತನ ಪಡೆಯುವವರ ಎಲ್ಲ ವೆಚ್ಚವನ್ನು ಭರಿಸುವ ವಿಮೆಯನ್ನು ಪಡೆಯಲು ಹೊಸ ಯೋಜನೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೀಡಿದೆ.

IRDAI: ಬಾಡಿಗೆ ತಾಯಂದಿರಿಗೆ ಸಿಹಿಸುದ್ದಿ ನೀಡಿದ IRDAI, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 17, 2023 | 12:07 PM

ಬಾಡಿಗೆ ತಾಯ್ತನ ಪಡೆಯುವ ಮಹಿಳೆಯರಿಗೆ ಒಂದು ಸಿಹಿ ಸುದ್ದಿಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೀಡಿದೆ. ಬಾಡಿಗೆ ತಾಯ್ತನ ಪಡೆಯುವವರ ಎಲ್ಲ ವೆಚ್ಚವನ್ನು ಭರಿಸುವ ವಿಮೆಯನ್ನು ಪಡೆಯಲು ಹೊಸ ಯೋಜನೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೀಡಿದೆ, ಹೌದು ಯಾರು ಬಾಡಿಗೆ ತಾಯಿ ಆಗುತ್ತಾರೆ ಅವರು ಎಲ್ಲ ಖರ್ಚುಗಳನ್ನು ಮತ್ತು ಭವಿಷ್ಯಕ್ಕಾಗಿ ಈ ವಿಮೆಯಲ್ಲಿ ಬಹುದೊಡ್ಡ ಪಾಲನ್ನು ನೀಡಲಾಗುತ್ತದೆ ಎಂದು ಹೇಳಿದೆ. ಯಾರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಬೇಕು ಎಂದು ಬಯಸುತ್ತಾರೆ, ಅವರು ಬಾಡಿಗೆ ತಾಯಿಗೆ ವೈದ್ಯಕೀಯ ವೆಚ್ಚದಿಂದ ಹಿಡಿದು, ಭವಿಷ್ಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಮೆಯನ್ನು ನೀಡಬೇಕು ಎಂದು ಹೇಳಿದೆ. ಇದರಿಂದ ಬಾಡಿಗೆ ತಾಯಿ ಆಗಲು ಹೆಚ್ಚು ಜನ ಮುಂದೆ ಬರುತ್ತಾರೆ ಎಂಬ ಕಾರಣಕ್ಕೆ ಈ ಕ್ರಮವನ್ನು ತರಲಾಗಿದೆ. ಅದಕ್ಕಾಗಿ 18-20 ಲಕ್ಷ ವಿಮೆ ಯೋಜನೆಯನ್ನು ಜಾರಿ ತರಲಾಗಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮೇ 10ರಂದು ಈ ಬಗ್ಗೆ ಒಂದು ಸುತ್ತೊಲೆಯನ್ನು ಬಿಡುಗಡೆ ಮಾಡಲಾಗಿತ್ತು. ಬಾಡಿಗೆ ತಾಯಿ ಆಗುವವರು ವಿಮಾ ಕಂಪನಿ ಅಥವಾ IRDAI ನಿಂದ ಗುರುತಿಸಲ್ಪಟ್ಟ ಏಜೆಂಟ್‌ನಿಂದ 36 ತಿಂಗಳ ಅವಧಿಗೆ ಬಾಡಿಗೆ ತಾಯಿಯ ಪರವಾಗಿ ಸಾಮಾನ್ಯ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸಬೇಕು ಎಂದು ಕಡ್ಡಾಯಗೊಳಿಸಿದೆ.

ಬಾಡಿಗೆ ತಾಯಿಯ ಗರ್ಭಧಾರಣೆ ಸಮಯದಲ್ಲಿ ಆಗುವ ತೊಂದರೆ ಮತ್ತು ಹೆರಿಗೆ ಸಮಯದಲ್ಲಿ ಆಗುವ ತೊಡಕುಗಳಿಗೆ ಎಲ್ಲಾ ವೆಚ್ಚವನ್ನು ಈ ವಿಮೆಯಲ್ಲಿ ನೀಡಲಾಗುವುದು ಎಂದು ಹೇಳಿದೆ. ಗರ್ಭಧಾರಣೆಗೆ ಓಸೈಟ್ ದಾನಿಗಳಿಗೆ 12 ತಿಂಗಳ ವಿಮಾ ರಕ್ಷಣೆಯನ್ನು ಒದಗಿಸಬೇಕು ಎಂದು ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:Business Ideas: 70 ಸಾವಿರ ಖರ್ಚು ಮಾಡಿ 3-4 ಲಕ್ಷ ರೂ. ಆದಾಯ ಗಳಿಸಿ!

ಐಆರ್‌ಡಿಎಐನ ಈ ಸುತ್ತೋಲೆಯು ಒಂದು ಒಳ್ಳೆಯ ಕ್ರಮವಾಗಿದೆ, ತಾಯಿ ಮತ್ತು ಬಾಡಿಗೆ ತಾಯಿಯಿಂದ ಪಡೆದ ಮಗುವಿನ ಕುಟುಂಬಕ್ಕೂ ಒಳ್ಳೆಯದು ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್‌ನ ಆರೋಗ್ಯ ಆಡಳಿತ ತಂಡದ ಮುಖ್ಯಸ್ಥ ಭಾಸ್ಕರ್ ನೆರೂರ್ಕರ್ ಹೇಳಿದರು.

ವಿಮಾ ಕಂಪನಿಗಳು ದಂಪತಿಗಳಿಗೆ ಪಾಲಿಸಿಯನ್ನು ಹೇಗೆ ಒದಗಿಸಬಹುದು ಎಂಬುದನ್ನು ತಿಳಿಸಿದೆ. ಪ್ಲಮ್ ಇನ್ಶೂರೆನ್ಸ್‌ನ ಕಾರ್ಯತಂತ್ರದ ಮುಖ್ಯಸ್ಥ ಆದಿತ್ಯ ಬಗರ್ಕಾ ಹೇಳಿರುವಂತೆ “ಆಸ್ಪತ್ರೆ, ಡೇ ಕೇರ್ ಚಿಕಿತ್ಸೆಗಳು, ಹೆರಿಗೆ ಮತ್ತು ಸಹಾಯಕ ಸಂತಾನೋತ್ಪತ್ತಿ ತಂತ್ರಗಳು (ARTs) ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಕನಿಷ್ಠ ಮಾತೃತ್ವ ಮಿತಿಯವರೆಗೆ ಕವರೇಜ್ ಅನ್ನು ವಿಸ್ತರಿಸಲು ಕಂಪನಿಗಳು ವಿಮಾದಾರರಿಗೆ ನೀಡಬೇಕು ಎಂದು ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ