ಭಾರತದಲ್ಲಿ 4ಜಿ ಬಹಳ ಕಡಿಮೆ ದರದಲ್ಲಿ ಸಿಗುತ್ತಿರುವಂತೆ 5ಜಿ ಇರುವುದಿಲ್ಲ. ಇನ್ನೂ ಬಹಳ ಹೆಚ್ಚು ಬೆಲೆ ತೆರಬೇಕು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಭಾರ್ತಿ ಏರ್ಟೆಲ್ (Bharti Airtel) ತನ್ನ ಗ್ರಾಹಕರಿಗೆ 5ಜಿ ಸೌಲಭ್ಯವನ್ನು (Airtel 5G) ಕಡಿಮೆ ಬೆಲೆ ನೀಡುವ ಆಫರ್ವೊಂದನ್ನು ಕೊಟ್ಟಿದೆ. ಅನ್ಲಿಮಿಟೆಡ್ 4ಜಿ ಸಿಗುವಷ್ಟೇ ದರದಲ್ಲಿ ಅನ್ಲಿಮಿಟೆಡ್ 5ಜಿ (Unlimited Airtel 5G) ಆಫರ್ ಅನ್ನು ಏರ್ಟೆಲ್ ನೀಡಿದೆ. ಇದು ಪೋಸ್ಟ್ ಪೇಡ್ ಮತ್ತು ಪ್ರೀಪೇಡ್ ಒಳಗೊಂಡಂತೆ ಎಲ್ಲಾ ಏರ್ಟೆಲ್ ಗ್ರಾಹಕರಿಗೂ ಲಭ್ಯ ಇರುವ ಆಫರ್. ಈ ಆಫರ್ ಪಡೆಯಲು ಈ ವಿಧಾನ ಅನುಸರಿಸಿ:
ಇಷ್ಟು ಮಾಡಿದರೆ ಸಾಕು ನಿಮಗೆ ಅನ್ಲಿಮಿಟೆಡ್ 5ಜಿ ಡೇಟಾ ಸೌಲಭ್ಯ ಆ್ಯಕ್ಟಿವೇಟ್ ಆಗಿ ಹೋಗುತ್ತದೆ. ಇದನ್ನು ಖಚಿತಪಡಿಸಲು ಏರ್ಟೆಲ್ನಿಂದ ನಿಮ್ಮ ಮೊಬೈಲ್ ನಂಬರ್ಗೆ ಎಸ್ಸೆಮ್ಮೆಸ್ ಮೆಸೇಜ್ ಕೂಡ ಬರುತ್ತದೆ. ನೀವು ಹೆಚ್ಚಿನ ಬೆಲೆ ನೀಡದೇ ಅಪರಿಮಿತವಾಗಿ 5ಜಿ ಸೇವೆ ಪಡೆಯಬಹುದು. ಅದೂ 4ಜಿ ದರದಲ್ಲೇ.
ಇದನ್ನೂ ಓದಿ: PPF Account: ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?
ಏರ್ಟೆಲ್ ಸಂಸ್ಥೆ ನೀಡಿರುವ ಈ ಅನ್ಲಿಮಿಟೆಡ್ 5ಜಿ ಡೇಟಾ ಆಫರ್ ಎಲ್ಲಾ ಪೋಸ್ಟ್ ಪೇಡ್ ಗ್ರಾಹಕರಿಗೆ ಲಭ್ಯ ಇದೆ. ಆದರೆ, ಪ್ರೀಪೇಡ್ ಗ್ರಾಹಕರೆಲ್ಲರಿಗೂ ಇದು ಇಲ್ಲ. ರು 455 ಮತ್ತು ರು 1,799 ಪ್ಲಾನ್ಗಳನ್ನು ಹೊಂದಿರುವ ಪ್ರೀಪೇಡ್ ಗ್ರಾಹಕರಿಗೆ ಇದು ಸಿಗುವುದಿಲ್ಲ. ಇದು ಬಿಟ್ಟರೆ 239 ರುಪಾಯಿ ಹಾಗು ಅದಕ್ಕಿಂತ ಹೆಚ್ಚಿನ ದರಗಳ ಎಲ್ಲಾ ಪ್ಲಾನ್ಗಳಿಗೂ ಈ ಆಫರ್ ಅನ್ವಯ ಆಗುತ್ತದೆ.
ಪೋಸ್ಟ್ ಪೇಡ್ ಗ್ರಾಹಕರು ಪ್ರತೀ ತಿಂಗಳು ಬಿಲ್ ಜನರೇಟ್ ಆಗುವ ವೇಳೆ ಈ ಆಫರ್ ಕ್ಲೇಮ್ ಮಾಡಬಹುದು ಎಂಬ ಮಾಹಿತಿ ಇದೆ.
ಏರ್ಟೆಲ್ ಅನ್ಲಿಮಿಟೆಡ್ 5ಜಿ ಆಫರ್ ಕೊಟ್ಟಿರುವುದಾದರೂ ಅದನ್ನು ಬಳಸಲು 5ಜಿ ಸಪೋರ್ಟ್ ಮಾಡುವ ಮೊಬೈಲ್ ನಿಮ್ಮಲ್ಲಿರಬೇಕು. ಜೊತೆಗೆ, ಈಗ 5ಜಿ ನೆಟ್ವರ್ಕ್ ಇರುವ ಪ್ರದೇಶದಲ್ಲಿ ನೀವಿರಬೇಕು. ಹಾಗಿದ್ದರೆ ಮಾತ್ರ ನೀವು 5ಜಿ ಡೇಟಾದ ಅಗಾಧ ವೇಗ ಮತ್ತು ಸೇವೆಯನ್ನು ಪಡೆಯಬಹುದು. ಇಲ್ಲದಿದ್ದರೆ 4ಜಿ ನೆಟ್ವರ್ಕ್ ಮಾತ್ರವೇ ನಿಮಗೆ ಸಿಗುತ್ತದೆ.
ಏರ್ಟೆಲ್ ನಾನಾ ಕಡೆ 5ಜಿ ನೆಟ್ವರ್ಕ್ ಅಳವಡಿಸುತ್ತಿದೆ. ನೀವಿರುವ ಪ್ರದೇಶದಲ್ಲಿ 5ಜಿ ನೆಟ್ವರ್ಕ್ ಇದೆಯಾ ಎಂಬುದನ್ನು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ನಿಂದ ತಿಳಿಯಬಹುದು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ