Government Scheme: ಎಸ್​ಸಿಎಸ್​ಎಸ್ ಸ್ಕೀಮ್​ನಿಂದ ಏನೇನು ಲಾಭ? ಈ ಯೋಜನೆಗಿರುವ ಬಡ್ಡಿ, ತೆರಿಗೆ ರಿಯಾಯಿತಿ ಇತ್ಯಾದಿ ವಿವರ ತಿಳಿಯಿರಿ

Schemes With High Interest And Tax Benefits: ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್) ವೃದ್ಧರಿಗೆಂದು ಇರುವ ಸೇವಿಂಗ್ ಸ್ಕೀಮ್. ಇದು ಉತ್ತಮ ಬಡ್ಡಿ ಕೊಡುವುದರ ಜೊತೆಗೆ ಆದಾಯ ತೆರಿಗೆ ರಿಯಾಯಿತಿಗೂ ಅವಕಾಶ ನೀಡುತ್ತದೆ. 30 ಲಕ್ಷ ರೂವರೆಗೂ ಈ ಸ್ಕೀಮ್​ನಲ್ಲಿ ಹಣ ಹೂಡಬಹುದು.

Government Scheme: ಎಸ್​ಸಿಎಸ್​ಎಸ್ ಸ್ಕೀಮ್​ನಿಂದ ಏನೇನು ಲಾಭ? ಈ ಯೋಜನೆಗಿರುವ ಬಡ್ಡಿ, ತೆರಿಗೆ ರಿಯಾಯಿತಿ ಇತ್ಯಾದಿ ವಿವರ ತಿಳಿಯಿರಿ
ಎಸ್​ಸಿಎಸ್​ಎಸ್ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 17, 2023 | 1:13 PM

ಹಿರಿಯ ನಾಗರಿಕರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಕೆಲ ಮಹತ್ವದ ಯೋಜನೆಗಳಲ್ಲಿ ಎಸ್​ಸಿಎಸ್​ಎಸ್ ಸ್ಕೀಮ್ (SCSS Saving Scheme) ಕೂಡ ಒಂದು. ಇದು ಉತ್ತಮ ಮೊತ್ತದ ಬಡ್ಡಿ ಕೊಡುವುದರ ಜೊತೆಗೆ ತೆರಿಗೆ ರಿಯಾಯಿತಿಗಳನ್ನೂ ಕೊಡುವ ಯೋಜನೆ. ಸದ್ಯಕ್ಕೆ ಜನವರಿಯಿಂದ ಮಾರ್ಚ್​ವರೆಗಿನ ಹಣಕ್ಕೆ ಸರ್ಕಾರ ಶೇ. 8ರಷ್ಟು ಬಡ್ಡಿ ತುಂಬುತ್ತಿದೆ. ಏಪ್ರಿಲ್ 1ರ ನಂತರದ ತ್ರೈಮಾಸಿಕಕ್ಕೆ ಸರ್ಕಾರ ಎಷ್ಟು ಬಡ್ಡಿ ಕೊಡುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ತಿಂಗಳಲ್ಲಿ ಸರ್ಕಾರ ಇದನ್ನು ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ, ವರದಿಗಳ ಪ್ರಕಾರ ಸದ್ಯಕ್ಕೆ ಇದರ ಘೋಷಣೆ ಇರುವುದಿಲ್ಲ. ಈ ಬಾರಿಯ ಬಜೆಟ್​ನಲ್ಲಿ ಆದ ಮಹತ್ವದ ಬದಲಾವಣೆ ಎಂದರೆ ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿಯನ್ನು 15 ಲಕ್ಷ ರೂನಿಂದ 30 ಲಕ್ಷ ರುಪಾಯಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ ಹೂಡಿಕೆ 1,000 ರುಪಾಯಿ ಇದೆ.

ಜನವರಿ 1ರಿಂದ ಆರಂಭವಾಗಿ ಪ್ರತೀ ಮೂರು ತಿಂಗಳಿಗೊಮ್ಮೆ ಈ ಯೋಜನೆಯ ಠೇವಣಿ ಮೊತ್ತಕ್ಕೆ ಸರ್ಕಾರ ನಿಗದಿತ ಬಡ್ಡಿ ಹಣ ಜಮೆ ಮಾಡುತ್ತಾ ಹೋಗುತ್ತದೆ. ಅಂದರೆ ಬಡ್ಡಿ ಜಮೆಯಾಗುವ ದಿನ ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ಆಗಿರುತ್ತದೆ. ಆ ತಿಂಗಳ ಒಂದನೇ ತಾರೀಖು ರಜಾ ದಿನವಾಗಿದ್ದರೆ ಮೊದಲ ಕೆಲಸದ ದಿನದಂದು ಬಡ್ಡಿ ಹಣ ಜಮೆಯಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ವಯೋಮಿತಿ ಎಷ್ಟು?

ಇದು ಹಿರಿಯ ನಾಗರಿಕರಿಗೆಂದು ರೂಪಿಸಲಾದ ಸ್ಕೀಮ್. 60 ವರ್ಷ ಹಾಗೂ ಹೆಚ್ಚು ವಯಸ್ಸಿನವರು ಖಾತೆ ತೆರೆಯಬಹುದು. ವಿಆರ್​ಎಸ್ ಪಡೆದು ವಾಲಂಟರಿಯಾಗಿ ನಿವೃತ್ತರಾದವರಿಗೆ ವಯೋಮಿತಿಯಲ್ಲಿ ವಿನಾಯಿತಿ ಕೊಡಲಾಗಿದೆ. 55 ವರ್ಷ ವಯಸ್ಸು ದಾಟಿದ ಇಂಥವರು ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ ಪಡೆಯಬಹುದು. ಇನ್ನು, ಮಿಲಿಟರಿ ಸೇವೆಯಿಂದ ನಿವೃತ್ತರಾದವರು 50 ವರ್ಷ ವಯಸ್ಸು ಪೂರ್ಣಗೊಂಡ ಬಳಿಕ ಈ ಸ್ಕೀಮ್​ನಲ್ಲಿ ಹಣ ತೊಡಗಿಸಿಕೊಳ್ಳಬಹುದು.

ಎಸ್​ಸಿಎಸ್​ಎಸ್ ಯೋಜನೆಯ ಅವಧಿ ಎಷ್ಟು?

ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್​ನ ಅವಧಿ 5 ವರ್ಷ ಇರುತ್ತದೆ. ಇದನ್ನು ಇನ್ನೂ 3 ವರ್ಷ ವಿಸ್ತರಣೆ ಮಾಡುವ ಅವಕಾಶ ಇರುತ್ತದೆ. ಒಂದು ಸಾವಿರದಿಂದ ಶುರುವಾಗಿ 30 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ಆದರೆ, ನಿಶ್ಚಿತ ಠೇವಣಿಯಂತೆ ಈ ಸ್ಕೀಮ್​ನಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡಬಹುದು. ಪ್ರತೀ ವರ್ಷ ಕಂತುಗಳಲ್ಲಿ ಕಟ್ಟಲು ಬರುವುದಿಲ್ಲ.

ಇದನ್ನೂ ಓದಿEPF Balance Check: ನಿಮ್ಮ ಇಪಿಎಫ್ ಖಾತೆಗೆ ಸರ್ಕಾರ ಹಾಕಿದ ಬಡ್ಡಿ ಹಣ ಬಂದಿದೆಯಾ? ಖಚಿತಪಡಿಸಿಕೊಳ್ಳುವುದು ಹೇಗೆ?

ಒಂದು ಲಕ್ಷ ರೂ ಒಳಗಿನ ಠೇವಣಿ ಹಣವನ್ನು ಕ್ಯಾಷ್ ರೂಪದಲ್ಲಿ ನೀಡಬಹುದು. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತವಾದರೆ ಚೆಕ್ ಮೂಲಕ ಪಾವತಿಸಬೇಕಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಅವಧಿಗೆ ಮುನ್ನ ರದ್ದು ಮಾಡಬಹುದಾ?

ಒಂದು ವೇಳೆ ಅವಧಿಗೆ ಮುನ್ನ ಎಸ್​ಸಿಎಸ್​ಎಸ್ ಯೋಜನೆಯನ್ನು ರದ್ದು ಮಾಡಬೇಕೆಂದಿದ್ದರೆ ಅದು ಸಾಧ್ಯ. ಆದರೆ, ಎಫ್​ಡಿಯಲ್ಲಿರುವಂತೆ ಇದರಲ್ಲಿಯೂ ಒಂದಷ್ಟು ಶುಲ್ಕ ತೆರಬೇಕಾಗುತ್ತದೆ. ಸ್ಕೀಮ್ ಆರಂಭಿಸಿ ಒಂದು ವರ್ಷದ ಬಳಿಕ ರದ್ದು ಮಾಡಿದರೆ ಒಟ್ಟು ಠೇವಣಿ ಮೊತ್ತದ ಶೇ. 1.5ರಷ್ಟು ಹಣವನ್ನು ಶುಲ್ಕವಾಗಿ ತೆರಬೇಕಾಗುತ್ತದೆ. ಎರಡು ವರ್ಷದ ಬಳಿಕ ಹಿಂಪಡೆಯುವುದಾದರೆ ಶೇ. 1ರಷ್ಟು ಮೊತ್ತವನ್ನು ದಂಡ ಕಟ್ಟಬೇಕಾಗುತ್ತದೆ.

ಎಸ್​ಸಿಎಸ್​ಎಸ್ ಯೋಜನೆಗೆ ತೆರಿಗೆ ಲಾಭ ಮತ್ತು ನಷ್ಟಗಳ ಲೆಕ್ಕಾಚಾರ

ಹಿರಿಯ ನಾಗರಿಕರ ಉಳಿತಾಯ ಯೋಜನೆಯು 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿ ಅವಕಾಶ ನೀಡುತ್ತದೆ. ಈ ಸೆಕ್ಷನ್​ನಲ್ಲಿ 1.5 ಲಕ್ಷ ರೂವರೆಗಿನ ಹೂಡಿಕೆಗಳಿಗೆ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಎಸ್​ಸಿಎಸ್​ಎಸ್ ಯೋಜನೆಯಲ್ಲಿನ ಹೂಡಿಕೆಯನ್ನು ಇದರಲ್ಲಿ ತೋರಿಸಬಹುದು.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಒಂದು ವೇಳೆ ನಿಮ್ಮ ಹೂಡಿಕೆಗೆ ವರ್ಷಕ್ಕೆ ಸಿಗುವ ಬಡ್ಡಿ 10,000 ರೂಗಿಂತ ಹೆಚ್ಚು ಇದ್ದರೆ ಅದಕ್ಕೆ ಟಿಡಿಎಸ್ ತೆರಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿPMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ

ಉದಾಹರಣೆಗೆ ಶೇ. 8ರಷ್ಟು ವಾರ್ಷಿಕ ಬಡ್ಡಿ ದರ ಜಾರಿಯಲ್ಲಿದೆ ಎಂದಿಟ್ಟುಕೊಂಡರೆ, 1.25 ಲಕ್ಷ ಠೇವಣಿಗೆ 10 ಸಾವಿರ ರೂ ಬಡ್ಡಿ ಜಮೆಯಾಗುತ್ತದೆ. ಈ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತವಾಗುತ್ತದೆ. 1.25 ಲಕ್ಷಕ್ಕಿಂತ ಕಡಿಮೆ ಮೊತ್ತದ ಠೇವಣಿಗೆ ತೆರಿಗೆ ಇರುವುದಿಲ್ಲ.

ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್ ಎಲ್ಲಿ ತೆರೆಯಬಹುದು?

ಎಸ್​ಸಿಎಸ್​ಎಸ್ ಯೋಜನೆಯನ್ನು ಆನ್​ಲೈನ್​ನಲ್ಲಿ ತೆರೆಯುವ ಅವಕಾಶ ಇರುವುದಿಲ್ಲ. ಸಮೀಪದ ಅಂಚೆ ಕಚೇರಿ ಅಥವಾ ಬ್ಯಾಂಕ್​ನಲ್ಲಿ ಈ ಯೋಜನೆಯ ಖಾತೆ ತೆರೆಯಬಹುದು.

2 ಪಾಸ್​ಪೋರ್ಟ್ ಗಾತ್ರದ ಫೋಟೋ ಕೊಡಬೇಕು. ಗುರುತು, ವಿಳಾಸ ಮತ್ತು ವಯಸ್ಸನ್ನು ದೃಢಪಡಿಸುವ ಪಾನ್ ಕಾರ್ಡ್ ಅಥವಾ ಪಾಸ್​ಪೋರ್ಟ್, ಆಧಾರ್ ಕಾರ್ಡ್, ಸಿನಿಯರ್ ಸಿಟಿಜನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು. ನಂತರ ನಾಮಿನಿ ಯಾರೆಂದು ನಮೂದಿಸಬೇಕು.

ಎಸ್​ಸಿಎಸ್​ಎಸ್ ಯೋಜನೆ ಲಭ್ಯ ಇರುವ ಬ್ಯಾಂಕುಗಳು:

  1. ಐಸಿಐಸಿಐ ಬ್ಯಾಂಖ್
  2. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  3. ಯೂಕೋ ಬ್ಯಾಂಕ್
  4. ಇಂಡಿಯನ್ ಬ್ಯಾಂಕ್
  5. ಪಂಜಾಬ್ ನ್ಯಾಷನಲ್ ಬ್ಯಾಂಕ್
  6. ಐಡಿಬಿಐ ಬ್ಯಾಂಕ್
  7. ಇಂಡಿಯನ್ ಓವರ್​ಸೀಸ್ ಬ್ಯಾಂಕ್
  8. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ)
  9. ದೇನಾ ಬ್ಯಾಂಕ್
  10. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  11. ಕೆನರಾ ಬ್ಯಾಂಕ್
  12. ಕಾರ್ಪೊರೇಶನ್ ಬ್ಯಾಂಕ್
  13. ಬ್ಯಾಂಕ್ ಆಫ್ ಇಂಡಿಯಾ
  14. ಬ್ಯಾಂಕ್ ಆಫ್ ಬರೋಡಾ
  15. ಬ್ಯಾಂಕ್ ಆಫ್ ಮಹಾರಾಷ್ಟ್ರ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ