ಸಿದ್ದರಾಮಯ್ಯ ಸಂಪುಟಕ್ಕೆ ವಾಪಸ್ಸಾಗುವ ತವಕದಲ್ಲಿರುವ ನಾಗೇಂದ್ರಗೆ ಈಡಿ ಆಘಾತ, ಎಲ್ಹೆಚ್ ಕೊಠಡಿ ಮೇಲೆ ದಾಳಿ
ಲಭ್ಯವಿರುವ ಮಾಹಹಿತಿಯೊಂದರ ಪ್ರಕಾರ ಮಾಜಿ ಸಚಿವ ನಾಗೇಂದ್ರ ಅವರ ಡೈರಿಯಲ್ಲಿ ಸಂಸದ ತುಕಾರಾಂ ಅವರ ಹೆಸರು ನಮೂದಾಗಿದ್ದು ಅದೇ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ 10ಕ್ಕೂ ಹೆಚ್ಚು ಅಧಿಕಾರಿಗಳು ಸಂಡೂರುನಲ್ಲಿರುವ ಸಂಸದನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯ ಮತ್ತೊಬ್ಬ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಯ ಮನೆ ಮೇಲೂ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು, ಜೂನ್ 11: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ಬಹುಕೋಟಿ ಹಗರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಮತ್ತು ಕೂಡ್ಲಿಗಿ ಶಾಸಕ ಬಿ ನಾಗೇಂದ್ರ ವಾಪಸ್ಸು ಸಿದ್ದರಾಮಯ್ಯ ಸೇರಬೇಕು ಎಂದು ಕಸರತ್ತು ನಡೆಸಿರುವಾಗಲೇ ಕಂಟಕ ಎದುರಾಗಿದೆ. ಬಳ್ಳಾರಿ ಸಂಸದ ಇ ತುಕಾರಾಂ ಅವರ ಸಂಡೂರು ಮನೆ ಸೇರಿದಂತೆ ನಗರದ ಶಾಸಕರ ಭವನದಲ್ಲಿರುವ ನಾಗೇಂದ್ರ ಅವರ ಕೊಠಡಿಯ ಮೇಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಕಡತ ಮತ್ತು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದಾರೆ. ನಿಮಗೆ ನೆನಪಿರಬಹುದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಬೆಳಕಿಗೆ ಬಂದು ₹187 ಕೋಟಿ ಹಣದ ದುರುಪಯೋಗವಾಗಿದೆ ಅಂತ ಗೊತ್ತಾದ ಬಳಿಕ ಕಳೆದ ವರ್ಷ ಜೂನ್ 6ರಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಿಗಮದ ಅಧೀಕ್ಷಕ ಪಿ ಚಂದ್ರಶೇಖರನ್ ಅವರ ಆತ್ಮಹತ್ಯೆಯ ನಂತರ ಹಗರಣ ಬಯಲಾಗಿತ್ತು
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ: ಬಿ ನಾಗೇಂದ್ರ ಫ್ಲ್ಯಾಟ್ನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಇಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಎಮರ್ಜೆನ್ಸಿ ಎಕ್ಸಿಟ್ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್

ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ

ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
