EPF Balance Check: ನಿಮ್ಮ ಇಪಿಎಫ್ ಖಾತೆಗೆ ಸರ್ಕಾರ ಹಾಕಿದ ಬಡ್ಡಿ ಹಣ ಬಂದಿದೆಯಾ? ಖಚಿತಪಡಿಸಿಕೊಳ್ಳುವುದು ಹೇಗೆ?
4 Ways to Check PF Balance: ದೇಶಾದ್ಯಂತ ಕೋಟ್ಯಂತರ ಉದ್ಯೋಗಿಗಳ ಇಪಿಎಫ್ ಖಾತೆಯ ಹಣಕ್ಕೆ ಕೇಂದ್ರ ಸರ್ಕಾರ ಬಡ್ಡಿ ಹಣ ಜಮೆ ಮಾಡಿದೆ. ನಿಮ್ಮ ಇಪಿಎಫ್ ಪಾಸ್ಬುಕ್ನಲ್ಲಿ ಎಷ್ಟು ಹಣ ಇದೆ ಎಂದು ತಿಳಿಯಲು ನಾಲ್ಕು ಸುಲಭ ವಿಧಾನಗಳುಂಟು.
ಪ್ರತಿಯೊಬ್ಬ ಉದ್ಯೋಗಿಯ ಹಣಕಾಸು ಭದ್ರತೆ ಮತ್ತು ಪಿಂಚಣಿಗೆಂದು ಇಪಿಎಫ್ ಸ್ಕೀಮ್ ರೂಪಿಸಲಾಗಿದೆ. ಈ ಉದ್ಯೋಗಿ ಭವಿಷ್ಯ ನಿಧಿ ಯೋಜನೆಯಲ್ಲಿ (EPF- Employee Provident Fund) ಉದ್ಯೋಗಿ, ಸಂಸ್ಥೆ ಮತ್ತು ಸರ್ಕಾರ ಈ ಮೂರು ಕೂಡ ಸೇರಿ ಉದ್ಯೋಗಿಯ ಇಪಿಎಫ್ ಖಾತೆಗೆ ಹಣ ಹಾಕುತ್ತಾರೆ. ಈ ಖಾತೆಯಲ್ಲಿ ಜಮೆಯಾಗಿರುವ ಹಣಕ್ಕೆ ಸರ್ಕಾರ ಪ್ರತೀ ವರ್ಷವೂ ಬಡ್ಡಿ ತುಂಬುತ್ತದೆ. ಈ ವರ್ಷ ಶೇ. 8.10ರಷ್ಟು ಬಡ್ಡಿ ಹಾಕಲಾಗುತ್ತಿದೆ. ಇಪಿಎಫ್ ಸ್ಕೀಮ್ ಅಳವಡಿಸಿಕೊಂಡಿರುವ ಶೇ. 98ರಷ್ಟು ಸಂಸ್ಥೆಗಳಲ್ಲಿನ ಪಿಎಫ್ ಖಾತೆಗಳಿಗೆ ಬಡ್ಡಿ ಹಾಕಲಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸಚಿವ ರಾಮೇಶ್ವರ್ ತೇಳಿ ಸ್ಪಷ್ಟಪಡಿಸಿದ್ದರು. ಬಾಕಿ ಉಳಿದಿರುವ ಖಾತೆಗಳಿಗೆ ಇಷ್ಟರಲ್ಲಾಗಲೀ ಬಡ್ಡಿ ಜಮೆಯಾಗಿರಬಹುದು.
ಇಪಿಎಫ್ ಸದಸ್ಯರ ಪಾಸ್ಬುಕ್ನಲ್ಲಿ ಬಡ್ಡಿ ಹಣ ಜಮೆಯಾಗಿರುವುದನ್ನು ಅಪ್ಡೇಟ್ ಮಾಡಲಾಗುತ್ತಿದೆ. ಪಾಸ್ಬುಕ್ನಲ್ಲಿ ಯಾವುದೇ ದಿನದಲ್ಲಾದರೂ ಬಡ್ಡಿ ದಿನಾಂಕ ನಮೂದಾದರೂ ವಾಸ್ತವವಾಗಿ ಇಡೀ ವರ್ಷಕ್ಕೆ ಅದು ಅನ್ವಯ ಆಗುತ್ತದೆ.
ನಿಮ್ಮ ಎಪಿಎಫ್ ಖಾತೆಯಲ್ಲಿನ ಹಣಕ್ಕೆ ಬಡ್ಡಿ ಹಣ ಜಮೆ ಆಗಿದೆಯಾ ಎಂಬುದನ್ನು ತಿಳಿಯಲು ನಾಲ್ಕು ವಿಧಾನಗಳುಂಟು. ಆನ್ಲೈನ್ ವೆಬ್ಸೈಟ್ ಮೂಲಕ ಒಂದು, ಎಸ್ಸೆಮ್ಮೆಸ್ ಮೂಲಕ ಇನ್ನೊಂದು, ಮಿಸ್ಡ್ ಕಾಲ್ ಮೂಲಕ ಮಗದೊಂದು, ಉಮಂಗ್ ಆ್ಯಪ್ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿಯಲು ಮತ್ತಿನ್ನೊಂದು ವಿಧಾನ ಇದೆ.
ಇದನ್ನೂ ಓದಿ: PMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ
ಆನ್ಲೈನ್ನಲ್ಲಿ ಇಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ?
ಇಪಿಎಫ್ನ ಅಧಿಕೃತ ವೆಬ್ಸೈಟ್ಗೆ epfindia.gov.in ಹೋಗಿ ನಮ್ಮ ಇಪಿಎಫ್ ಖಾತೆಯ ವಿವರ ಪರಿಶೀಲಿಸಲು ಸಾಧ್ಯ.
ಇಪಿಎಫ್ ವೆಬ್ಸೈಟ್ನಲ್ಲಿ ನಮ್ಮ ಯುಎಎನ್ ನಂಬರ್, ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬೇಕು.
ಇ–ಪಾಸ್ಬುಕ್ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಕೇಳಲಾಗುವ ವಿವರ ತುಂಬಿದ ಬಳಿಕ ಹೊಸ ಪುಟ ತೆರೆದುಕೊಳ್ಳುತ್ತದೆ.
ಈಗ ಮೆಂಬರ್ ಐಡಿ ತೆರೆಯಿರಿ.
ಇಲ್ಲಿ ನಿಮ್ಮ ಖಾತೆಯಲ್ಲಿರುವ ಒಟ್ಟು ಇಪಿಎಫ್ ಬಾಕಿ ಮೊತ್ತ ಎಷ್ಟಿದೆ ಎಂಬುದು ತಿಳಿಯುತ್ತದೆ.
ಉಮಂಗ್ ಆ್ಯಪ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯುವ ವಿಧಾನ
ನಿಮ್ಮ ಫೋನ್ನಲ್ಲಿ ಉಮಂಗ್ ಆ್ಯಪ್ ತೆರೆಯಿರಿ
ಇಪಿಎಫ್ಒ ಮೇಲೆ ಕ್ಲಿಕ್ ಮಾಕ್ ಮಾಡಿ
ಎಂಪ್ಲಾಯೀ ಸೆಂಟ್ರಿಕ್ ಸರ್ವಿಸಸ್ ಮೇಲೆ ಕ್ಲಿಕ್ ಮಾಡಿ
ವೀವ್ ಪಾಸ್ಬುಕ್ ಆಯ್ಕೆ ಮಾಡಿಕೊಳ್ಳಿ
ಅಲ್ಲಿ ನಿಮ್ಮ ಯುಎಎನ್ ನಂಬರ್ ಮತ್ತು ಪಾಸ್ವರ್ಡ್ ಹಾಕಿರಿ.
ಬಳಿಕ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಇಲ್ಲಿ ನಮೂದಿಸಿ
ಈಗ ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯಬಹುದು.
ಇದನ್ನೂ ಓದಿ: Crorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?
ಎಸ್ಸೆಮ್ಮೆಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯುವ ವಿಧಾನ
ಎಸ್ಸೆಮ್ಮೆಸ್ ಮೂಲಕ ಇನ್ನೂ ಸುಲಭವಾಗಿ ನಾವು ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿಯಬಹುದು. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ ಮೆಸೇಜ್ ಮೂಲಕ ಈ ಕೆಲಸ ನೆರವೇರಿಸಬಹುದು. EPFOHO UAN ಎಂದು ಟೈಪ್ ಮಾಡಿ 7738299899 ನಂಬರ್ಗೆ ಮೆಸೇಜ್ ಕಳುಹಿಸಿದರೆ ಪ್ರತಿಯಾಗಿ ಇಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬ ಎಸ್ಸೆಮ್ಮೆಸ್ ಬರುತ್ತದೆ.
ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಮಿಸ್ಡ್ ಕಾಲ್ ಸೌಲಭ್ಯ
ಪಿಎಫ್ ಬಾಕಿ ಹಣ ಎಷ್ಟಿದೆ ಎಂದು ನೋಡಲು ಎಸ್ಸೆಮ್ಮೆಸ್ಗಿಂತಲೂ ಸುಲಭವಾದ ವಿಧಾನ ಎಂದರೆ ಮಿಸ್ಡ್ ಕಾಲ್. ಯುಎಎನ್ಗೆ ನೊಂದಾಯಿಸಲಾಗಿರುವ ನಿಮ್ಮ ಮೊಬೈಲ್ ನಂಬರ್ನಿಂದ 011-22901406 ಗೆ ಕರೆ ಮಾಡಿದರೆ ಸಾಕು. ಇದು ಟಾಲ್ ಫ್ರೀ ಆಗಿದ್ದು, ನಿಮ್ಮ ಕರೆ ತನ್ನಂತಾನೆ ಕಟ್ ಆಗುತ್ತದೆ. ಬಳಿಕ ನಿಮ್ಮ ಮೊಬೈಲ್ಗೆ ಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂಬ ಮೆಸೇಜ್ ಬರುತ್ತದೆ.
ಇದನ್ನೂ ಓದಿ: Loan Rates: BoMನಲ್ಲಿ ಸಾಲಕ್ಕೆ ಬಡ್ಡಿ ದರ ಕೇವಲ ಶೇ. 8.4; ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಬ್ಯಾಂಕುಗಳಿವು…
ಇವೆಲ್ಲಾ ಸೌಲಭ್ಯ ಬಳಸಿಕೊಳ್ಳುವ ಮುನ್ನ ಯುಎಎನ್ ನಂಬರ್ಗೆ ನಿಮ್ಮ ಮೊಬೈಲ್ ನಂಬರ್ ಜೋಡಣೆ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ನೀವು ಕೆಲಸ ಮಾಡು ಕಚೇರಿಯವರೇ ಯುಎಎನ್ ರಚನೆ ವೇಳೆ ಮೊಬೈಲ್ ನಂಬರ್ ಅನ್ನೂ ಸೇರಿಸಿರುತ್ತಾರೆ. ನೀವು ಕಂಪನಿ ಬದಲಿಸಿದಾಗ ಪಿಎಫ್ ಖಾತೆ ಬದಲಾದರೂ ಅದೇ ಯುಎಎನ್ ನಂಬರ್ ಅನ್ನೇ ಮುಂದುವರಿಸಿ. ಆಗ ಒಂದೇ ಯುಎಎನ್ ಅಡಿಯಲ್ಲಿ ಎಲ್ಲಾ ಪಿಎಫ್ ಖಾತೆಗಳೂ ಗ್ರೂಪ್ ಆಗುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:34 am, Fri, 17 March 23