Video : ಕನ್ನಡದಲ್ಲಿ ಪ್ರಶ್ನೆ ಕೇಳಿ : ತೆಲುಗು ಸಂದರ್ಶಕನಿಗೆ ಬುದ್ಧಿ ಹೇಳಿದ ಬೆಂಗಳೂರಿನ ಯುವತಿ
ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸಿ ಎನ್ನುವ ಕೂಗು ಕೇಳಿ ಬರುತ್ತಿದೆ. ಇದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿನ ಬಗ್ಗೆ ಬೆಂಗಳೂರಿನ ಯುವತಿಯ ಬಳಿ ಸಂದರ್ಶಕರೊಬ್ಬರು ತೆಲುಗಿನಲ್ಲಿ ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆಗಿದ್ದು ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬೆಂಗಳೂರು, ಜೂನ್ 11 : ಕರ್ನಾಟಕದಲ್ಲಿರುವವರೇ ಕನ್ನಡ ಭಾಷೆ (Kannada language) ಯನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಮಾತಿದೆ. ಇನ್ನೊಂದೆಡೆ. ಅನ್ಯರಾಜ್ಯದ ಹಿಂದಿ ಭಾಷಿಕರು ಮತ್ತು ಕನ್ನಡಿಗರ ಮಧ್ಯೆ ಆಗಾಗ ಇದೇ ವಿಚಾರವಾಗಿ ವಿವಾದಗಳು ನಡೆಯುತ್ತಲೇ ಇದೆ. ಹೌದು ಇತ್ತೀಚೆಗಷ್ಟೇ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್ ಕನ್ನಡವನ್ನು ಅವಮಾನಸಿದ್ದು, ಆಟೋ ಚಾಲಕರ ಮೇಲೆ ದರ್ಪ ತೋರಿದ ಹಿಂದಿ ಮಹಿಳೆ ಹೀಗೆ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇದೆ. ಇದೀಗ ಇಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್‌ಸಿಬಿ ತಂಡ (RCB Team)ವು ಗೆಲುವು ಸಾಧಿಸಿದ್ದು ಜನರ ಅಭಿಪ್ರಾಯಗಳನ್ನು ಕಲೆ ಹಾಕುವ ಪ್ರಯತ್ನ ಮಾಡಿದ್ದಾರೆ. ಹೌದು ಬೆಂಗಳೂರಿ (Bengaluru) ನ ರಸ್ತೆಯಲ್ಲಿ ತೆಲುಗು ಸಂದರ್ಶಕರೊಬ್ಬರು ಈ ಬಗ್ಗೆ ಯುವತಿಯ ಬಳಿ ಪ್ರಶ್ನೆ ಕೇಳುತ್ತಿದ್ದಂತೆ ಕನ್ನಡದಲ್ಲಿ ಮಾತನಾಡಿ ಎಂದು ಒತ್ತಾಯಿಸಿದ್ದು, ಈ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ? @Aaladamara ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಯೂಟ್ಯೂಬ್ ಚಾನೆಲ್ ಸಂದರ್ಶಕರೊಬ್ಬರು ತೆಲುಗಿನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ್ದರ ಬಗ್ಗೆ ಅಭಿಪ್ರಾಯವನ್ನು ಕಲೆ ಹಾಕುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಯುವತಿಯ ಬಳಿ ತೆಲುಗಿನಲ್ಲಿಯೇ ಪ್ರಶ್ನೆ ಕೇಳಲಾಗಿದೆ. ಆದರೆ ಈ ಯುವತಿ ಪ್ರಶ್ನೆ ಉತ್ತರಿಸುವ ಬದಲು ನೀವು ಕನ್ನಡದಲ್ಲಿಯೇ ಪ್ರಶ್ನೆ ಕೇಳಬೇಕು ಎಂದು ಹೇಳಿರುವುದನ್ನು ಕಾಣಬಹುದು. ಇದಕ್ಕೆ ಸಂದರ್ಶಕರು ನನಗೆ ಸ್ವಲ್ಪ ಕನ್ನಡ ಬರುತ್ತದೆ ಎಂದು ಹೇಳುತ್ತಿದ್ದಂತೆ, ನಿಮಗೆಎಷ್ಟು ಕನ್ನಡ ಬರುತ್ತದೋ, ಅಷ್ಟರಲ್ಲೇ ನೀವು ಮಾತನಾಡಿದ್ರೆ ಸಾಕು ಎಂದು ನೇರವಾಗಿ ಹೇಳಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
You should first speak in Kannada!
Actually swalpa swalpa barutthe(Actually i know a little bit of Kannada)
Swalpa swlapane mathadi paravagilla (that’s okay you can converse in a little bit of Kannada only)
That’s Kannadathi for you 🙌🙌🙌 pic.twitter.com/YVbzXMDUTL
— ರವಿ-Ravi ಆಲದಮರ (@AaladaMara) June 7, 2025
ಈ ವಿಡಿಯೋವೊಂದು ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಖಾರವಾಗಿಯೇ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಅಜ್ಞಾನ ಹಾಗೂ ದುರಹಂಕಾರ ಬೆಳಕಿಗೆ ಬಂದ ನಂತರ, ಸ್ವಂತ ಕರ್ನಾಟಕದಲ್ಲಿಯೇ ನೀವು ಕಡೆಗಣಿಸಲ್ಪಟ್ಟಿದ್ದೀರಿ ಎಂದು ಕೆಲವು ಜನರ ವರ್ತನೆಯಲ್ಲಿ ತಿಳಿದ ಬಳಿಕ ಕನ್ನಡಿಗರು ಎಚ್ಚರಗೊಳ್ಳುತ್ತಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು, ಕನ್ನಡಿಗರಲ್ಲಿ ಈ ಅಭದ್ರತೆ ಏಕೆ? ಇದು ಇತರರ ಮೇಲೆ ಒಂದು ಭಾಷೆಯ ಹೇರಿಕೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಅಯ್ಯೋ ಬೆಂಗಳೂರಿನಲ್ಲಿ ಭಾಷಾಭಿಮಾನದ ಘಟನೆ ನಡೆಯದ ದಿನವೇ ಇಲ್ಲ ಎನ್ನುವಂತಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ