Akasa Airlines: ಮುಂಬೈನಿಂದ ಅಹಮದಾಬಾದ್ಗೆ ಹಾರಿತು ಆಕಾಶ ಏರ್ಲೈನ್ಸ್ನ ಮೊದಲ ವಿಮಾನ
Akasa Air: ವಿಮಾನಯಾನ ಸಂಸ್ಥೆಯು ದೇಶದಲ್ಲೇ ಅತ್ಯಂತ ಅಗ್ಗದ ವಿಮಾನಯಾನ ದರವನ್ನು ಹೊಂದಿರಲಿದೆ ಎಂಬ ಭರವಸೆ ನೀಡಿದೆ.
ಮುಂಬೈ: ಭಾರತೀಯ ಷೇರುಪೇಟೆಯ ‘ವಾರನ್ ಬಫೆಟ್’ ಎಂದು ಖ್ಯಾತರಾಗಿರುವ ರಾಕೇಶ್ ಜುಂಜುನ್ವಾಲಾ ಪ್ರವರ್ತಕರಾಗಿರುವ ‘ಆಕಾಶ ಏರ್’ ಕಂಪನಿಯ ಮೊದಲ ವಿಮಾನವು ಭಾನುವಾರ ಮುಂಬೈನ ಛದ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು.
QP ಏರ್ಲೈನ್ ಕೋಡ್ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಯು ಕಳೆದ ಜುಲೈ 7ರಂದು ನಾಗರಿಕ ವಿಮಾನಯಾನಗಳ ಮಹಾ ನಿರ್ದೇಶಕರ ಕಚೇರಿಯಿಂದ (Directorate General of Civil Aviation – DGCA) ವಿಮಾನ ಸಂಚಾರಕ್ಕೆ ಅನುಮತಿ ಪಡೆದುಕೊಂಡಿತ್ತು. ಮುಂಬೈ-ಅಹಮದಾಬಾದ್ ಮತ್ತು ಬೆಂಗಳೂರು-ಕೊಚ್ಚಿ ಮಾರ್ಗಗಳಲ್ಲಿ ಆಕಾಶ ಏರ್ಲೈನ್ಸ್ನ ವಿಮಾನಗಳು ಸಂಚರಿಸಲಿದೆ. ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ ಆಗಸ್ಟ್ 13ರಿಂದ ವಿಮಾನ ಸಂಚಾರವನ್ನು ಕಂಪನಿ ಆರಂಭಿಸಲಿದೆ. ಬೆಂಗಳೂರಿನಿಂದ ಕೊಚ್ಚಿಗೆ ಬೆಳಿಗ್ಗೆ 7.15 ಮತ್ತು 11 ಗಂಟೆಗೆ ವಿಮಾನಗಳು ಟೇಕಾಫ್ ಆಗಲಿವೆ. ಕೊಚ್ಚಿಯಿಂದ ಬೆಂಗಳೂರಿಗೆ ಬರುವ ವಿಮಾನಗಳು ಬೆಳಿಗ್ಗೆ 10.25 ಮತ್ತು ಮಧ್ಯಾಹ್ನ 2.15ಕ್ಕೆ ಟೇಕಾಫ್ ಆಗಲಿವೆ.
ಆಗಸ್ಟ್ 19ರಿಂದ ಬೆಂಗಳೂರು-ಮುಂಬೈ, ಸೆಪ್ಟೆಂಬರ್ 15ರಿಂದ ಚೆನ್ನೈ-ಮುಂಬೈ ಮಾರ್ಗದಲ್ಲಿ ಆಕಾಶ ಏರ್ಲೈನ್ಸ್ ವಿಮಾನಗಳು ಸಂಚರಿಸಲಿವೆ. ಆಕಾಶ್ ಏರ್ಲೈನ್ಸ್ ನವೆಂಬರ್ 26, 2021ರಂದು 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಜೂನ್ ವೇಳೆಗೆ ಮೊದಲ ವಿಮಾನ ವಿತರಣೆಯನ್ನು ನಿರೀಕ್ಷಿಸಲಾಗಿದೆ. ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ಭಾರತೀಯ ವಿಮಾನಯಾನ ಮಾಡುವವರಿಗೆ ಹೊಂದಿಕೊಳ್ಳುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಈ ಬ್ರಾಂಡ್ ಹೊಂದಿದೆ. ಐದು ದಿನಗಳ ದುಬೈ ಏರ್ ಶೋನಲ್ಲಿ ಬೋಯಿಂಗ್ ಜೊತೆಗಿನ ಕಂಪನಿಯ ಇತ್ತೀಚಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.
We can’t wait to finally check you in to Your Sky! #OurFirstAkasa pic.twitter.com/LHjNmZoV2q
— Akasa Air (@AkasaAir) August 7, 2022
ವಿಮಾನಯಾನ ಸಂಸ್ಥೆಯು ದೇಶದಲ್ಲೇ ಅತ್ಯಂತ ಅಗ್ಗದ ವಿಮಾನಯಾನ ದರವನ್ನು ಹೊಂದಿರಲಿದೆ ಎಂಬ ಭರವಸೆ ನೀಡಿದೆ. ಆದ್ದರಿಂದ ಇದು ನಿಮ್ಮ ಆಕಾಶ ಟ್ಯಾಗ್‌ಲೈನ್ ಅನ್ನು ಇಟ್ಟುಕೊಂಡಿದೆ.
Published On - 11:42 am, Sun, 7 August 22