Bharat Bandh: ಸೆ.27ರ ಭಾರತ್​ ಬಂದ್​ಗೆ ಅಖಿಲ ಭಾರತ ಬ್ಯಾಂಕ್​ ಅಧಿಕಾರಿಗಳ ಒಕ್ಕೂಟದ ಬೆಂಬಲ

| Updated By: Srinivas Mata

Updated on: Sep 23, 2021 | 12:01 AM

ಸಂಯುಕ್ತ ಕಿಸಾನ್ ಮೋರ್ಚಾದಿಂದ ಸೆ. 27ರಂದು ಕರೆ ನೀಡಿರುವ ಭಾರತ್​ ಬಂದ್​ಗೆ ಬೆಂಬಲ ನೀಡುವುದಾಗಿ ಅಖಿಲ ಭಾರತ ಬ್ಯಾಂಕ್​ ಅಧಿಕಾರಿಗಳ ಒಕ್ಕೂಟವು ಬೆಂಬಲ ಘೋಷಣೆ ಮಾಡಿದೆ.

Bharat Bandh: ಸೆ.27ರ ಭಾರತ್​ ಬಂದ್​ಗೆ ಅಖಿಲ ಭಾರತ ಬ್ಯಾಂಕ್​ ಅಧಿಕಾರಿಗಳ ಒಕ್ಕೂಟದ ಬೆಂಬಲ
ಸಾಂದರ್ಭಿಕ ಚಿತ್ರ
Follow us on

ಸಂಯುಕ್ತ ಕಿಸಾನ್ ಮೋರ್ಚಾದಿಂದ ಸೆಪ್ಟೆಂಬರ್ 27ಕ್ಕೆ ಕರೆ ನೀಡಿರುವ ‘ಭಾರತ್ ಬಂದ್’ಗೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು (AIBOC) ಬುಧವಾರ ತನ್ನ ಬೆಂಬಲವನ್ನು ವಿಸ್ತರಿಸಿದೆ. ತಮ್ಮ ಬೇಡಿಕೆಗಳ ಕುರಿತು ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಮತ್ತೆ ಮಾತುಕತೆ ನಡೆಸಲು ಮತ್ತು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಮತ್ತೊಮ್ಮೆ ಆಲೋಚಿಸಲು ಸರ್ಕಾರವನ್ನು ಎಐಬಿಒಸಿ ವಿನಂತಿಸಿದೆ.

ದೇಶದಾದ್ಯಂತ ರೈತರ ಪ್ರತಿಭಟನಾ ಕ್ರಮಗಳಿಗೆ ಸೋಮವಾರ ಎಐಬಿಒಸಿ ಅಂಗಸಂಸ್ಥೆಗಳು ಮತ್ತು ರಾಜ್ಯ ಘಟಕಗಳು ಒಗ್ಗಟ್ಟಿನಿಂದ ಸೇರುತ್ತವೆ ಎಂದು ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ. ಎನ್‌ಎಸ್‌ಎಸ್ ಭೂಮಿ ಮತ್ತು ಜಾನುವಾರುಗಳ ಹಿಡುವಳಿಗಳು ಮತ್ತು ಕೃಷಿ ಕುಟುಂಬಗಳ ಪರಿಸ್ಥಿತಿ ಮೌಲ್ಯಮಾಪನ, ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಲಾದ 2018-19ರ ವರದಿಯನ್ನು ಉಲ್ಲೇಖಿಸಿ, 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಗುರಿಯು ದೂರದ ಕನಸಾಗಿ ಕಾಣುತ್ತದೆ ಎಂದು ಒಕ್ಕೂಟ ಹೇಳಿದೆ.

ಪ್ರತಿ ಕೃಷಿ ಕುಟುಂಬದ ಸರಾಸರಿ ಸಾಲವು 2013ರಲ್ಲಿ 47,000 ರೂಪಾಯಿಯಿಂದ 2018ರಲ್ಲಿ ರೂ. 74,121ಕ್ಕೆ ಹೆಚ್ಚಾಗಿದೆ. ಕೃಷಿ ಕುಟುಂಬಗಳ ಹೆಚ್ಚುತ್ತಿರುವ ಋಣಭಾರವು ಕೃಷಿ ಸಂಕಷ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ಅದು ಹೇಳಿದೆ.

(All India Bank Officers Confederation Announced Support To September 27th Bharath Bandh)

ಇದನ್ನೂ ಓದಿ: Farmer protests ನಾಳೆ ಹರ್ಯಾಣದಲ್ಲಿ ರೈತರ ಪ್ರತಿಭಟನೆ; ಕರ್ನಾಲ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ