Gold Price Today: ಇಂದು ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?
Gold Rate Today: ದೈನಂದಿನ ದರ ಬದಲಾವಣೆಯಲ್ಲಿ ಚಿನ್ನದ ದರ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಚಿನ್ನ ಖರೀದಿಸಬೇಕೆಂದು ಹಣ ಕೂಡಿಡುತ್ತಾ ಬಂದಿರುತ್ತೀರಿ, ನೀವು ಸಂಗ್ರಹ ಮಾಡಿಟ್ಟ ಹಣದಲ್ಲಿ ಆಭರಣ ಖರೀದಿಸಬಹುದು ಎಂದೆನಿಸಿದರೆ ಆ ಕುರಿತಂತೆ ಯೋಚಿಸಿ.
Gold Silver Price Today | ಬೆಂಗಳೂರು: ಇಂದು (ಸೆ.23, ಗುರುವಾರ) ಚಿನ್ನ, ಬೆಳ್ಳಿ ದರದಲ್ಲಿ (Silver Price) ಏರಿಕೆ ಕಂಡು ಬಂದಿದೆ. ನಿನ್ನೆಯೂ ಸಹ ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಚಿನ್ನಾಭರಣದ ಬೆಲೆ ಏರಿಕೆ ಆಗಿತ್ತು. ಅದೇ ರೀತಿ ಇಂದೂ ಸಹ ಹೆಚ್ಚಳವಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಚಿನ್ನದ ದರ (Gold Price) ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಚಿನ್ನ ಖರೀದಿಸಬೇಕೆಂದು ಹಣ ಕೂಡಿಡುತ್ತಾ ಬಂದಿರುತ್ತೀರಿ, ನೀವು ಸಂಗ್ರಹ ಮಾಡಿಟ್ಟ ಹಣದಲ್ಲಿ ಆಭರಣ ಖರೀದಿಸಬಹುದು ಎಂದೆನಿಸಿದರೆ ಆ ಕುರಿತಂತೆ ಯೋಚಿಸಿ. ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಬ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,850 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,38,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,500 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,840 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,78,400 ರೂಪಾಯಿ ನಿಗದಿಯಾಗಿದೆ. ಸುಮಾರು 3,800 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಕೊಂಚ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 60,900 ರೂಪಾಯಿ ಏರಿಕೆ ಆಗಿದೆ. ಸುಮಾರು 1,100 ರೂಪಾಯಿ ಏರಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,100 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,41,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 3,600 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,110 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,81,100 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 3,900 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಸಹ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 65,100 ರೂಪಾಯಿ ನಿಗದಿ ಆಗಿದೆ. ಸುಮಾರು 1,300 ರೂಪಾಯಿ ಏರಿಕೆ ಕಂಡು ಬಂದಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,000 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,60,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 3,500 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,180 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,01,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 3,800 ರೂಪಾಯಿ ಏರಿಕೆಯಾಗಿದೆ. ಕೆಜಿ ಬೆಳ್ಳಿಗೆ 60,900 ರೂಪಾಯಿ ಇದೆ. ಸುಮಾರು 1,100 ರೂಪಾಯಿ ಏರಿಕೆ ಆಗಿದೆ.
ಇದನ್ನೂ ಓದಿ:
Gold Price Today: ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್; ಮತ್ತಷ್ಟು ಇಳಿಕೆ ಕಂಡ ಚಿನ್ನ, ಬೆಳ್ಳಿ ದರ
Gold Price Today: ಆಭರಣ ಖರೀದಿಸುವ ಯೋಚನೆಯಿದೆಯೇ? ನಿನ್ನೆ ದರ ಇಳಿಕೆಯ ಬಳಿಕ ಇಂದು ಸ್ಥಿರತೆಯಲ್ಲಿದೆ ಚಿನ್ನದ ದರ
(Gold price increase today on 2021 September 23 check silver price in Bangalore Delhi Mumbai and minor city)
Published On - 8:16 am, Thu, 23 September 21