ನವದೆಹಲಿ: 50ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಾಹನ ಕ್ಷೇತ್ರದಲ್ಲಿ ಕಾಂಪೆನ್ಸೇಶನ್ ತೆರಿಗೆ (Compensation Cess) ವಿಚಾರದಲ್ಲಿ ಸ್ಪಷ್ಟತೆ ನೀಡಲಾಗಿದೆ. ವಾಹನಗಳಿಗೆ ಇರುವ ಶೇ. 28ರಷ್ಟು ಜಿಎಸ್ಟಿಗೆ ಹೆಚ್ಚುವರಿಯಾಗಿ ಕಾಂಪೆನ್ಸೇಶನ್ ಸೆಸ್ ಅನ್ನು ಶೇ. 22ರಷ್ಟರವರೆಗೂ ವಿಧಿಸಲಾಗುತ್ತಿತ್ತು. ಇದೀಗ ಎಸ್ಯುವಿಯೂ ಒಳಗೊಂಡಂತೆ ಎಲ್ಲಾ ಮಲ್ಟಿ ಯುಟಿಲಿಟಿ ವಾಹನಗಳಿಗೆ (MUV) ಶೇ. 22ಎಷ್ಟು ಕಾಂಪೆನ್ಸೇಶನ್ ಸೆಸ್ ವಿಧಿಸಲು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ (GST Council Meeting) ನಿರ್ಣಯಿಸಲಾಗಿದೆ. ಇಲ್ಲಿ ಮಹತ್ವದ ಸಂಗತಿ ಎಂದರೆ ಯಾವುದು ಎಸ್ಯುವಿ ಕಾರೆಂದು ಪರಿಗಣಿಸಲಾಗುತ್ತದೆ ಎಂಬುದಕ್ಕೆ ಮೂರು ಮಾನದಂಡಗಳನ್ನು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: GST Council Meeting: ಹಲವು ವಸ್ತುಗಳ ಜಿಎಸ್ಟಿ ಭಾರ ಇಳಿಸಿದ ನಿರ್ಮಲಾ ಸೀತಾರಾಮನ್; ಇಲ್ಲಿದೆ ವಿವರ
ಇಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಎಂದರೆ ಕಾರಿನ ಅತ್ಯಂತ ಕೆಳ ಭಾಗ (ಚಾಸಿಸ್) ಹಾಗು ನೆಲದ ನಡುವಿನ ಅಂತರ. ಇದು 170 ಮಿಲಿಮೀಟರ್ ಹಾಗೂ ಅದಕ್ಕಿಂತ ಹೆಚ್ಚು ಎತ್ತರವಾಗಿದ್ದರೆ ಅಂಥದು ಎಸ್ಯುವಿ ಕಾರಿನ ಒಂದು ಪ್ಯಾರಾಮೀಟರ್ ಎಂದು ಪರಿಗಣಿಸಲಾಗಿದೆ.
ಈಗ ಎಸ್ಯುವಿ, ಎಂಯುವಿ ಮತ್ತು ಎಕ್ಸ್ಯುವಿ ಕಾರುಗಳೆಲ್ಲವಕ್ಕೂ ಏಕರೀತಿಯ ಜಿಎಸ್ಟಿ ದರ ಅನ್ವಯ ಆಗುತ್ತದೆ. ಇದರೊಂದಿಗೆ ಕಾರುಗಳಿಗೆ ವಿಧಿಸಲಾಗುವ ತೆರಿಗೆ ದರ ವಿಚಾರದಲ್ಲಿ ಸ್ಪಷ್ಟತೆ ಸಿಕ್ಕಂತಾಗಿದೆ.
ಇದೀಗ 22 ಪ್ರತಿಶತದಷ್ಟು ಕಾಂಪೆನ್ಸೇಶನ್ ಸೆಸ್ ಅನ್ನು ವಿಧಿಸಲಾಗುವುದರಿಂದ ಹಲವು ವಾಹನಗಳ ಬೆಲೆ ಹೆಚ್ಚಳವಾಗಲಿದೆ. ಎಸ್ಯುವಿಗಳಿಗೆ ಜಿಎಸ್ಟಿ ಮತ್ತು ಕಾಂಪೆನ್ಸೇಶನ್ ಸೆಸ್ ಸೇರಿ ಶೇ. 50ರಷ್ಟು ತೆರಿಗೆ ಬೀಳುತ್ತದೆ. ವಾಹನ ತಯಾರಕರು ಈ ಸೆಸ್ ಅನ್ನು ಸಹಜವಾಗಿ ಗ್ರಾಹಕರಿಗೆ ವರ್ಗಾಯಿಸುತ್ತಾರೆ.
ಇದನ್ನೂ ಓದಿ: Strict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ
ಕಾಂಪೆನ್ಸೇಶನ್ ಸೆಸ್ ಎಂಬುದು ರಾಜ್ಯಗಳಿಗೆ ಸಿಗುವ ಪರಿಹಾರ ತೆರಿಗೆ. ಜಿಎಸ್ಟಿ ಜಾರಿಯಾಗುವ ಮುನ್ನ ರಾಜ್ಯಗಳು ಪ್ರತ್ಯೇಕವಾಗಿ ವಿವಿಧ ತೆರಿಗೆಗಳನ್ನು ವಿಧಿಸಿ ಆದಾಯ ಪಡೆಯುತ್ತಿದ್ದವು. ಜಿಎಸ್ಟಿ ಜಾರಿಯಾದ ಬಳಿಕ ಆ ತೆರಿಗೆಗಳೆಲ್ಲವೂ ರದ್ದಾಗಿ ಏಕರೂಪದ ತೆರಿಗೆ ಬಂದಿತು. ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆಯಾಗುತ್ತದೆ. ಇದರಿಂದ ರಾಜ್ಯಗಳಿಗೆ ಸಿಗುತ್ತಿದ್ದ ಹೆಚ್ಚುವರಿ ತೆರಿಗೆ ನಿಂತಂತಾಗಿದೆ. ಇದನ್ನು ಸರಿದೂಗಿಸಲು ಕೆಲ ವಸ್ತುಗಳ ಮೇಲೆ ಜಿಎಸ್ಟಿ ಜೊತೆಗೆ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ನ ಹಣವನ್ನು ರಾಜ್ಯಗಳಿಗೆ ಹಂಚಲಾಗುತ್ತದೆ.
ತಂಬಾಕು ಉತ್ಪನ್ನಗಳು, ಸೋಡಾ, ಕೋಲಾ, ಲೆಮೊನೇಡ್ ಇತ್ಯಾದಿ ಕಾರ್ಬೊನೇಟೆಡ್ ಪಾನೀಯಗಳು, 350 ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್, ಖಾಸಗಿ ಬಳಕೆಯ ವಿಮಾನ, ಯಾಚ್, ಸಣ್ಣ ಸಾರಿಗೆ ವಾಹನಗಳು ಇತ್ಯಾದಿಗಳಿಗೆ ವಿವಿಧ ದರಗಳ ಕಾಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ