
ದಾರ್ಶನಿಕರ ಮಾತುಗಳನ್ನು ಆಲಿಸಿ, ಉದ್ಯಮಿಗಳ ನಡೆಗಳನ್ನು ಗಮನಿಸಿ ಎನ್ನುವ ಹೊಸ ಮಾತಿದೆ. ಬಹಳ ಮಂದಿ ಶ್ರೀಮಂತರು ನಮಗೆ ಕಣ್ಣಿಗೆ ಐಷಾರಾಮಿ ಜೀವನಶೈಲಿ ಹೊಂದಿದವರಂತೆ ಕಾಣುತ್ತಾರೆ. ಆದರೆ, ಕೆಲಸದಲ್ಲಿ ಅವರಿಗಿರುವ ಶ್ರದ್ಧೆ, ಜಾಣ್ಮೆ ಇವು ಗಮನಿಸಬೇಕಾದ ಸಂಗತಿಗಳು. ಒಬ್ಬೊಬ್ಬ ಬಿಲಿಯನೇರ್ಗಳ ಜೀವನದಲ್ಲಿ ಕಲಿಯಬಹುದಾದ ನೂರೆಂಟು ವಿಷಯಗಳಿರುತ್ತವೆ. ವಿಶ್ವದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ ಜೆಫ್ ಬೇಜೋಸ್ (Jeff Bezos) ಅವರನ್ನೇ ನೋಡಿ, ಬಹಳ ಸೋಜಿಗದ ಮನುಷ್ಯ. ಲೈಫ್ ಅನ್ನು ಎಂಜಾಯ್ ಮಾಡುತ್ತಾ ಇರುವಂತೆ ಕಾಣುವ ಮನುಷ್ಯ.
ಅಮೇಜಾನ್ ಎನ್ನುವ ಇ-ಕಾಮರ್ಸ್ ದೈತ್ಯ ಕಂಪನಿಯ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಅಷ್ಟೊಂದು ದೊಡ್ಡ ಬ್ಯುಸಿನೆಸ್ ಹೇಗೆ ನಿಭಾಯಿಸುತ್ತಾರೆ?
ಇದನ್ನೂ ಓದಿ: ಜಿಯೋಬ್ಲ್ಯಾಕ್ರಾಕ್ ಮ್ಯುಚುವಲ್ ಫಂಡ್ನ ಎನ್ಎಫ್ಒಗೆ ಭರ್ಜರಿ ಸ್ಪಂದನೆ; 17,800 ಕೋಟಿ ರೂ ಹೂಡಿಕೆ ಸಂಗ್ರಹ
ಅಮೇಜಾನ್ ಮಾಲೀಕರು ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುತ್ತಾರಂತೆ. ಅವರಿಗೆ ದಿನಕ್ಕೆ 8 ಗಂಟೆಯಾದರೂ ನಿದ್ರೆ ಅವಶ್ಯಕ. ನಿದ್ರೆ ಚೆನ್ನಾಗಿ ಆದರೆ ಚೆನ್ನಾಗಿ ಯೋಚಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.
ಬೆಳಗಿನ ಹೊತ್ತು ಜೆಫ್ ಬೇಜೋಸ್ ಅವರು ಹೆಚ್ಚು ಶ್ರಮದ ಕೆಲಸ ಮಾಡುವುದಿಲ್ಲವಂತೆ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಪತ್ರಿಕೆ ಓದುತ್ತಾರೆ, ಕಾಫಿ ಕುಡಿಯುತ್ತಾರೆ. ಮಕ್ಕಳು ಶಾಲೆಗೆ ಹೋಗುವ ಮುನ್ನ ಅವರೊಂದಿಗೆ ತಿಂಡಿ ತಿನ್ನುತ್ತಾರೆ. ಈ ವಿಚಾರವನ್ನು ಜೆಫ್ ಬೇಜೋಸ್ ಹಿಂದೆ ಯಾವಾಗಲೋ ಹೇಳಿದ್ದ ವಿಡಿಯೊವೊಂದು ಇದೆ. ಈ ಬೆಳಗಿನ ಅವಧಿಯು ಬೇಜೋಸ್ ಅವರಿಗೆ ಬಹಳ ಮುಖ್ಯವಂತೆ.
ಇದನ್ನೂ ಓದಿ: Shubman Gill: ಟೀಮ್ ಇಂಡಿಯಾ ಕ್ಯಾಪ್ಟನ್ ಶುಬ್ಮನ್ ಗಿಲ್ ಆಸ್ತಿ, ಆದಾಯ, ಲಕ್ಷುರಿ ಕಾರುಗಳು…
ಜೆಫ್ ಬೇಜೋಸ್ ಅವರು ಬೆಳಗ್ಗೆ 10ಗಂಟೆಗೆ ಮೊದಲ ಮೀಟಿಂಗ್ ನಿಗದಿ ಮಾಡುತ್ತಾರೆ. ತಲೆಗೆ ಬಹಳ ಕೆಲಸ ಕೊಡುವ ಕೆಲಸವೇನೇ ಇದ್ದರೂ 10 ಗಂಟೆಯೊಳಗೆ ಮಾಡಲು ಬಯಸುತ್ತಾರೆ. ಮಧ್ಯಾಹ್ನ ಊಟದ ವೇಳೆಗೆ ಎಲ್ಲಾ ಪ್ರಮುಖ ಮೀಟಿಂಗ್ಗಳನ್ನು ಅಟೆಂಡ್ ಮಾಡುತ್ತಾರೆ. ಸಂಜೆ 5 ಗಂಟೆ ಬಳಿಕ ಯಾವುದಾದರೂ ಕೆಲಸ ಬಂದರೆ ಮರುದಿನ ಬೆಳಗ್ಗೆಗೆ ಅದನ್ನು ದೂಡುತ್ತಾರಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ