ಇಂದಿನಿಂದ ಭಾರತದ ಅತಿದೊಡ್ಡ ಆನ್​ಲೈನ್ ಶಾಪಿಂಗ್ ತಾಣದಲ್ಲಿ 2,000 ರೂ ನೋಟುಗಳ ಬಳಕೆ ಬಂದ್

|

Updated on: Sep 19, 2023 | 1:14 PM

Amazon Stops Taking Rs. 2,000 Notes: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಸೆಪ್ಟೆಂಬರ್ 30ಕ್ಕೆ ಡೆಡ್​ಲೈನ್ ಎಂದು ಆರ್​ಬಿಐ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಅಮೇಜಾನ್ ಇಂಡಿಯಾ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಈ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ತನ್ನ ಕ್ಯಾಷ್ ಆನ್ ಡೆಲಿವರಿ ವ್ಯವಸ್ಥೆಯಲ್ಲಿ ಹಣ ಪಾವತಿಗೆ ಇಂದಿನಿಂದ 2,000 ರೂ ನೋಟುಗಳನ್ನು ಸ್ವೀಕರಿಸದೇ ಇರಲು ಅಮೇಜಾನ್ ನಿರ್ಧರಿಸಿದೆ.

ಇಂದಿನಿಂದ ಭಾರತದ ಅತಿದೊಡ್ಡ ಆನ್​ಲೈನ್ ಶಾಪಿಂಗ್ ತಾಣದಲ್ಲಿ 2,000 ರೂ ನೋಟುಗಳ ಬಳಕೆ ಬಂದ್
2,000 ರೂ ನೋಟು
Follow us on

ನವದೆಹಲಿ, ಸೆಪ್ಟೆಂಬರ್ 19: ಭಾರತದ ಅತಿದೊಡ್ಡ ಇಕಾಮರ್ಸ್ ಪ್ಲಾಟ್​ಫಾರ್ಮ್ ಆಗಿರುವ ಅಮೇಜಾನ್ ಇಂಡಿಯಾ (Amazon India) ಸಂಸ್ಥೆ 2,000 ರೂ ಸ್ವೀಕರಿಸುವುದನ್ನು ಇಂದಿನಿಂದ ನಿಲ್ಲಿಸಿದೆ. ಕ್ಯಾಷ್ ಆನ್ ಡೆಲಿವರಿಯಲ್ಲಿ (Cash on Delivery) ಅಮೇಜಾನ್ ತನ್ನ ಗ್ರಾಹಕರಿಂದ ಹಣಪಾವತಿಗೆ 2,000 ರೂ ನೋಟು ಪಡೆಯದಿರಲು ನಿರ್ಧರಿಸಿದೆ. ಇದು ಅಮೇಜಾನ್​ನಿಂದ ಅನುಮೋದಿಸಲ್ಪಟ್ಟ ಆರ್ಡರ್​ಗಳಿಗೆ ಮಾತ್ರ ಈ ನಿರ್ಬಂಧ ಇರುತ್ತದೆ. ಅಮೇಜಾನ್ ಪ್ಲಾಟ್​ಫಾರ್ಮ್​ನಲ್ಲಿರುವ ಥರ್ಡ್ ಪಾರ್ಟಿ ಕೊರಿಯರ್​ಗಳಿಗೆ ಈ ನಿರ್ಬಂಧ ಇರುವುದಿಲ್ಲ. ಅವುಗಳು 2,000 ರೂ ನೋಟುಗಳನ್ನು ಸ್ವೀಕರಿಸುವ ಅವಕಾಶಗಳಿರಬಹುದು. ಇದು ಆಯಾ ಕೊರಿಯರ್ ಕಂಪನಿಗಳ ನಿರ್ಧಾರಕ್ಕೆ ಬಿಟ್ಟಿದ್ದು.

ಆರ್​ಬಿಐ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳನ್ನು ಹಿಂದಿರುಗಿಸಲು ಸೆಪ್ಟೆಂಬರ್ 30ರವರೆಗೆ ಮಾತ್ರವೇ ಕಾಲಾವಕಾಶ ಇದೆ. ಈಗಾಗಲೇ ಬಹುಪಾಲು 2,000 ರೂ ಮುಖಬೆಲೆಯ ನೋಟುಗಳು ಬ್ಯಾಂಕ್​ಗಳಿಗೆ ಮರಳಿವೆ. ಇನ್ನು, ಕೆಲವೇ ಸಾವಿರ ರೂ ಮೊತ್ತದ ನೋಟುಗಳು ಮಾತ್ರವೇ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿರುವ ಅಂದಾಜಿದೆ.

ಇದನ್ನೂ ಓದಿ: ಹಣಕಾಸು ಕಷ್ಟ ಬಂದಾಗ ಲವ್ವಿ ಡವ್ವಿ ಜಾಸ್ತಿಯಾಗುತ್ತಾ? ಅಚ್ಚರಿ ಮೂಡಿಸುತ್ತೆ ಡೇಟಿಂಗ್ ಕಂಪನಿಗಳ ವ್ಯವಹಾರ ಅಂಕಿ ಅಂಶ

ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಮಾತ್ರವೇ ಹಿಂಪಡೆಯಲಾಗಿದೆಯೇ ಹೊರತು ಅದನ್ನು ನಿಷೇಧಿಸಿಲ್ಲ ಎಂದು ಆರ್​ಬಿಐ ಹೇಳಿದೆ. ಆದರೆ, ಸೆಪ್ಟೆಂಬರ್ 30ರ ಬಳಿಕ ಈ ನೋಟುಗಳನ್ನು ಏನು ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಸದ್ಯ, 2,000 ರೂ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಿಗೆ ಮರಳಿಸಬಹುದು. ಈ ನೋಟುಗಳನ್ನು ಮರಳಿಸಿ, ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಳ್ಳಬಹುದು. ಅಥವಾ ಈ ನೋಟುಗಳ ಬದಲಿಗೆ ಬೇರೆ ನೋಟುಗಳನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ