‘ಕೆಲಸ ಬಿಡಿ, 4 ಲಕ್ಷ ಹಣ ಪಡೆಯಿರಿ’- ಅಮೇಜಾನ್ ಉದ್ಯೋಗಿಗಳಿಗೆ ಪೇ ಟು ಕ್ವಿಟ್ ಆಫರ್; ವರ್ಕೌಟ್ ಆಗುತ್ತಾ ಈ ತಂತ್ರ?

|

Updated on: Nov 08, 2023 | 4:29 PM

Amazon Pay to Quit Scheme: ಅಮೇಜಾನ್​ನಲ್ಲಿ ಈ ‘ಪೇ ಟು ಕ್ವಿಟ್’ ಸ್ಕೀಮ್ ಇವತ್ತು, ನಿನ್ನೆ ಆರಂಭವಾಗಿದ್ದಲ್ಲ. 2014ರಿಂದಲೂ ಇದೆಯಂತೆ. ಪ್ರತೀ ವರ್ಷವೂ ಕಂಪನಿ ತನ್ನ ಉದ್ಯೋಗಿಗಳಿಗೆ ಈ ಅವಕಾಶ ನೀಡುತ್ತದೆ. 2014ರಲ್ಲಿ, ಕೆಲಸ ಬಿಡುವ ಉದ್ಯೋಗಿಗಳಿಗೆ 2,000 ಡಾಲರ್ ಆಫರ್ ಮಾಡಲಾಗುತ್ತಿತ್ತು. ಈಗ ಆ ಮೊತ್ತ 5,000 ಡಾಲರ್​ಗೆ ಏರಿಸಲಾಗಿದೆ. ಈ ಆಫರ್​ನ ಜೊತೆಗೆ ‘ದಯವಿಟ್ಟು ಈ ಆಫರ್ ಸ್ವೀಕರಿಸಬೇಡಿ’ ಎಂಬ ಮನವಿಯನ್ನೂ ಸೇರಿಸಲಾಗಿರುತ್ತದೆ.

‘ಕೆಲಸ ಬಿಡಿ, 4 ಲಕ್ಷ ಹಣ ಪಡೆಯಿರಿ’- ಅಮೇಜಾನ್ ಉದ್ಯೋಗಿಗಳಿಗೆ ಪೇ ಟು ಕ್ವಿಟ್ ಆಫರ್; ವರ್ಕೌಟ್ ಆಗುತ್ತಾ ಈ ತಂತ್ರ?
ಅಮೇಜಾನ್
Follow us on

ವಾಷಿಂಗ್ಟನ್, ನವೆಂಬರ್ 8: ಯಾವುದೇ ಕಂಪನಿಗಳಿಗೆ ದಕ್ಷ ಕೆಲಸಗಾರರೇ ಆಧಾರಸ್ತಂಭಗಳಾಗಿರುತ್ತಾರೆ. ಅಂಥವರನ್ನು ಉಳಿಸಿಕೊಳ್ಳಲು ಆದ್ಯತೆ ಕೊಡಲಾಗುತ್ತದೆ. ಅಮೇಜಾನ್ ಕೂಡ ಈ ನಿಟ್ಟಿನಲ್ಲಿ ಒಂದು ವಿಶೇಷ ಯೋಜನೆ ಹೊಂದಿದೆ. ಅದು ಪೇ ಟು ಕ್ವಿಟ್ ಸ್ಕೀಮ್ (Pay to Quit). ಕೆಲಸ ಬಿಟ್ಟರೆ 5,000 ಡಾಲರ್ ಹಣವನ್ನು ಆ ಉದ್ಯೋಗಿಗೆ ಅಮೇಜಾನ್ ನೀಡುತ್ತದೆ. ಅಂದರೆ ಸುಮಾರು 4 ಲಕ್ಷ ರೂ ಹಣವನ್ನು ಕೆಲಸ ಬಿಡುವವರಿಗೆ ನೀಡಲಾಗುತ್ತದೆ. ಇಂಥದ್ದೊಂದು ಸ್ಕೀಮ್​ನಿಂದ ಕಂಪನಿಗೆ ಏನು ಲಾಭ ಎಂದು ಯಾರಿಗಾದರೂ ಅಚ್ಚರಿ ಆದೀತು. ಆದರೆ, ಅಮೇಜಾನ್​ಗೆ ಮತ್ತು ಕೆಲಸಕ್ಕೆ ನಿಷ್ಠರಾಗಿರುವ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಅಮೇಜಾನ್​ಗೆ ಈ ಸ್ಕೀಮ್ ವರ್ಕೌಟ್ ಆಗುತ್ತದಂತೆ.

ಅಮೇಜಾನ್​ನಲ್ಲಿ ಈ ‘ಪೇ ಟು ಕ್ವಿಟ್’ ಸ್ಕೀಮ್ ಇವತ್ತು, ನಿನ್ನೆ ಆರಂಭವಾಗಿದ್ದಲ್ಲ. 2014ರಿಂದಲೂ ಇದೆಯಂತೆ. ಪ್ರತೀ ವರ್ಷವೂ ಕಂಪನಿ ತನ್ನ ಉದ್ಯೋಗಿಗಳಿಗೆ ಈ ಅವಕಾಶ ನೀಡುತ್ತದೆ. 2014ರಲ್ಲಿ, ಕೆಲಸ ಬಿಡುವ ಉದ್ಯೋಗಿಗಳಿಗೆ 2,000 ಡಾಲರ್ ಆಫರ್ ಮಾಡಲಾಗುತ್ತಿತ್ತು. ಈಗ ಆ ಮೊತ್ತ 5,000 ಡಾಲರ್​ಗೆ ಏರಿಸಲಾಗಿದೆ. ಈ ಆಫರ್​ನ ಜೊತೆಗೆ ‘ದಯವಿಟ್ಟು ಈ ಆಫರ್ ಸ್ವೀಕರಿಸಬೇಡಿ’ ಎಂಬ ಮನವಿಯನ್ನೂ ಸೇರಿಸಲಾಗಿರುತ್ತದೆ. ಒಟ್ಟಿನಲ್ಲಿ ಅದು ಉದ್ಯೋಗಿಯನ್ನು ದೂರ ಮಾಡುವ ತಂತ್ರವಾಗದೇ, ಕಂಪನಿಯಲ್ಲಿ ಉಳಿಸಿಕೊಳ್ಳುವ ಯೋಜನೆ ಎನ್ನುತ್ತಾರೆ ಅಮೇಜಾನ್ ಸಂಸ್ಥಾಪಕ ಜೆಫ್ ಬೇಜೋಸ್.

ಇದನ್ನೂ ಓದಿ: ಯಾಕೆ ದಾನ ಧರ್ಮ ಮಾಡುತ್ತೀರಿ? ಮಕ್ಕಳು ಮಂದಿಗೆ ದುಡ್ಡಿಡಲ್ವಾ? ಈ ಪ್ರಶ್ನೆಗೆ ಯುವ ಉದ್ಯಮಿ ಕೊಟ್ಟ ಉತ್ತರ ನೋಡಿ..!

ಇಷ್ಟವಿಲ್ಲದೇ ಕೆಲಸ ಮಾಡುತ್ತಿರುವವರಿಗೆ ಈ ಆಫರ್..!

ಜನರು ತಮಗೆ ನಿಜಕ್ಕೂ ಏನು ಬೇಕು ಎಂಬುದನ್ನು ಕಂಡುಕೊಳ್ಳಲು ಈ ಐಡಿಯಾ ಮಾಡಲಾಗಿದೆ. ಇಷ್ಟವಿಲ್ಲದ ಸ್ಥಳದಲ್ಲಿ ಒಬ್ಬ ಉದ್ಯೋಗಿ ಕೆಲಸ ಮಾಡಿದರೆ ಅದರಿಂದ ಕಂಪನಿಗೂ ಕಷ್ಟ, ಆ ವ್ಯಕ್ತಿಗೂ ಕಷ್ಟ ಎಂಬುದು ಜೆಫ್ ಬೇಜೋಸ್ ಅನಿಸಿಕೆ. ಅಮೆರಿಕದ ಮನಃಶಾಸ್ತ್ರಜ್ಞ ಯೂರಿ ನೀಜಿ ಎಂಬುವವರು ಈ ರೀತಿಯ ತಂತ್ರಕ್ಕೆ ಸಮ್ಮತ ವ್ಯಕ್ತಪಡಿಸುತ್ತಾರೆ. ಕೆಲಸ ಬಿಡಲು ಹಣದ ಅಫರ್ ಕೊಡುವುದರಿಂದ ಅಸಂತುಷ್ಟ ಉದ್ಯೋಗಿಗಳು ಹೊರಗೆ ಹೋಗುವುದು ಸುಲಭವಾಗುತ್ತದೆ. ಇದರಿಂದ ತೃಪ್ತ ಉದ್ಯೋಗಿಗಳು ಕಂಪನಿಯಲ್ಲಿ ಉಳಿದುಕೊಳ್ಳುತ್ತಾರಂತೆ.

‘ಈ ಆಫರ್ ನಿರಾಕರಿಸಿ, ಯಾರು ಕೆಲಸದಲ್ಲಿ ಉಳಿದುಕೊಳ್ಳುತ್ತಾರೋ ಅವರು ಹೆಚ್ಚು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ಕಂಪನಿಯಲ್ಲಿ ತಮ್ಮ ಭವಿಷ್ಯಕ್ಕೆ ಬುನಾದಿ ಗಟ್ಟಿ ಮಾಡುತ್ತಾರೆ,’ ಎಂದು ಯೂರಿ ನೀಜಿ ಹೇಳುತ್ತಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ನೇತೃತ್ವದ ಡಬ್ಲ್ಯುಸಿಟಿ ಪೋರ್ಟ್ ಟರ್ಮಿನಲ್ ಪ್ರಾಜೆಕ್ಟ್​ಗೆ ಅಮೆರಿಕದ ಹಣಕಾಸು ನೆರವು

ಅಂದಹಾಗೆ, ಕೊನೆಯಲ್ಲಿ ಒಂದು ವಿಚಾರ ಸ್ಪಷ್ಟಪಡಿಸಬೇಕು. ಅಮೇಜಾನ್​ನ ಪೇ ಟು ಕ್ವಿಟ್ ಆಫರ್ ಎಲ್ಲಾ ಉದ್ಯೋಗಿಗಳಿಗೂ ಅನ್ವಯ ಆಗುವುದಿಲ್ಲ. ಅಮೇಜಾನ್​ನ ಕರಿಯರ್ ಚಾಯ್ಸ್ (Amazon Career Choice) ಎಂಬ ಪ್ಲಾಟ್​ಫಾರ್ಮ್​ನಲ್ಲಿ ಪದವಿ ಪಡೆದು ಕೆಲಸಕ್ಕೆ ಸೇರಿದ ಉದ್ಯೋಗಿಗಳಿಗೆ ಮಾತ್ರವಂತೆ ಈ ಆಫರ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ