ಅಮೇಜಾನ್ ಕಂಟೆಂಟ್ ಕ್ರಿಯೇಟರ್ಸ್​ಗೆ ಕಮಿಷನ್ ಎರಡು ಪಟ್ಟು ಹೆಚ್ಚಳ; ನೀವೂ ಆದಾಯ ಗಳಿಸುವ ಅವಕಾಶ; ಹೇಗೆ?

|

Updated on: Sep 23, 2024 | 5:31 PM

Amazon content creators: ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಹಾ ಮಾರಾಟ ಆರಂಭವಾಗುತ್ತಿರುವ ದಿನವೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಶುರುವಾಗುತ್ತಿದೆ. ಇದೇ ಹೊತ್ತಲ್ಲಿ ಸಾಕಷ್ಟು ಗ್ರಾಹಕರ ಮೇಲೆ ಪ್ರಭಾವ ಬೀರಬಲ್ಲ ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸರ್​ಗಳನ್ನು ಸೆಳೆಯಲು ಅಮೇಜಾನ್ ಯತ್ನಿಸಿದೆ. ಅಮೇಜಾನ್ ಉತ್ಪನ್ನಗಳನ್ನು ಪ್ರಚಾರ ಮಾಡುವ ಕಂಟೆಂಟ್ ಕ್ರಿಯೇಟರ್​ಗಳಿಗೆ ನೀಡಲಾಗುವ ಕಮಿಷನ್ ಮೊತ್ತವನ್ನು ಹೆಚ್ಚಿಸಲಾಗಿದೆ.

ಅಮೇಜಾನ್ ಕಂಟೆಂಟ್ ಕ್ರಿಯೇಟರ್ಸ್​ಗೆ ಕಮಿಷನ್ ಎರಡು ಪಟ್ಟು ಹೆಚ್ಚಳ; ನೀವೂ ಆದಾಯ ಗಳಿಸುವ ಅವಕಾಶ; ಹೇಗೆ?
ಅಮೇಜಾನ್
Follow us on

ನವದೆಹಲಿ, ಸೆಪ್ಟೆಂಬರ್ 23: ವಿಶ್ವದ ಅತಿದೊಡ್ಡ ಇಕಾಮರ್ಸ್ ಪ್ಲಾಟ್​ಫಾರ್ಮ್ ಆಗಿರುವ ಅಮೇಜಾನ್ ಇದೀಗ ವಿವಿಧ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವ ಕಂಟೆಂಟ್ ಕ್ರಿಯೇಟರ್​ಗಳಿಗೆ ನೀಡಲಾಗುವ ಕಮಿಷನ್ ದರವನ್ನು ಹೆಚ್ಚಿಸಿದೆ. ಇಪ್ಪತ್ತಕ್ಕೂ ಹೆಚ್ಚು ಸಬ್ ಕೆಟಗರಿಗಳಿಗೆ ಕಮಿಷನ್ ಹೆಚ್ಚಿಸಲಾಗಿದೆ. ಐವತ್ತು ಸಾವಿರಕ್ಕೂ ಅಧಿಕ ಕಂಟೆಂಟ್ ಕ್ರಿಯೇಟರ್ಸ್ ಅಥವಾ ಇನ್​ಫ್ಲುಯನ್ಸರ್​ಗಳಿಗೆ ಖುಷಿ ಸುದ್ದಿ ಇದು. ಫ್ಯಾಷನ್, ಅಡುಗೆ ಮನೆ ವಸ್ತು, ಆಟಿಕೆ, ಪುಸ್ತಕ, ಬ್ಯೂಟಿ ಪ್ರಾಡಕ್ಟ್ಸ್ ಇತ್ಯಾದಿ ಜನಪ್ರಿಯ ವಿಭಾಗಗಳಲ್ಲಿನ ಹಲವು ಉತ್ಪನ್ನಗಳಲ್ಲಿ ಈ ಕಂಟೆಂಟ್ ಕ್ರಿಯೇಟ್​​ಗಳಿಗೆ ಸಿಗುವ ಕಮಿಷನ್ ಒಂದೂವರೆಯಿಂದ ಎರಡು ಪಟ್ಟಿನವರೆಗೂ ಹೆಚ್ಚಳ ಮಾಡಲಾಗಿದೆ.

ಸೆಪ್ಟೆಂಬರ್ 27ರಂದು ದಿ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆರಂಭವಾಗಲಿದೆ. ಈ ಅವಧಿಯಲ್ಲಿ ಕಂಟೆಂಟ್ ಕ್ರಿಯೇಟರ್​ಗಳ ಪಾತ್ರ ಬಹಳ ದೊಡ್ಡದು. ಹೊಸ ಗ್ರಾಹಕರನ್ನು ಸೆಳೆಯಲು ಇವರು ಸಹಾಯವಾಗುತ್ತಾರೆ. ಕಂಟೆಂಟ್ ಕ್ರಿಯೇಟರ್​ಗಳಿಗೂ ಆದಾಯ ಹೆಚ್ಚಿಸಿಕೊಳ್ಳಲು ಇದು ಸರಿಯಾದ ಸೀಸನ್ ಆಗಿರುತ್ತದೆ.

ಇದನ್ನೂ ಓದಿ: Lalbaugcha Raja Ganeshotsav Auction: ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಸಿಕ್ಕ ಆದಾಯ ಎಷ್ಟು?

ಅಮೇಜಾನ್ ಲೈವ್ ಪ್ರೋಗ್ರಾಮ್ ಕೂಡ ಚಾಲನೆಯಲ್ಲಿದೆ. ಮೊಬೈಲ್, ಡೆಕೋರೇಶನ್, ಬ್ಯೂಟಿ, ಫ್ಯಾಷನ್ ಇತ್ಯಾದಿ ವಿಭಾಗಗಳಲ್ಲಿ ವಿವಿಧ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಲಾಗುತ್ತದೆ. ಆಯ್ದ ನೂರಾರು ಕಂಟೆಂಟ್ ಕ್ರಿಯೇಟರ್​ಗಳಿಂದ ಒಂದೂವರೆ ಸಾವಿರಕ್ಕೂ ಅಧಿಕ ಲೈವ್ ಸ್ಟ್ರೀಮ್​ಗಳು ನಡೆಯುತ್ತವೆ.

ಅಮೇಜಾನ್ ಕಂಟೆಂಟ್ ಕ್ರಿಯೇಟರ್ಸ್ ಆಗುವುದು ಹೇಗೆ?

ಯೂಟ್ಯೂಬ್, ಫೇಸ್​ಬುಕ್ ಅಥವಾ ಇನ್ಸ್​ಟಾಗ್ರಾಮ್​ನಲ್ಲಿ ಸಾಕಷ್ಟು ಫಾಲೋಯರ್ಸ್ ಬಳಗ ನಿಮಗೆ ಇದ್ದರೆ ಇನ್​ಫ್ಲುಯೆನ್ಸರ್ಸ್ ಆಗಿ ಹೋಗುತ್ತೀರಿ. ನಿಮಗೆ ಆ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ನಿಂದ ಆದಾಯ ಬರುತ್ತಿರುತ್ತದೆ. ಜೊತೆಗೆ, ವಿವಿಧ ಕಂಪನಿಗಳು ನಿಮ್ಮ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಿಸಲು ಮುಂದಾಗುತ್ತವೆ. ಅವುಗಳಿಂದಲೂ ನೀವು ಕಮಿಷನ್ ಪಡೆಯಬಹುದು.

ಇದನ್ನೂ ಓದಿ: ಸ್ಕಾಚ್ ವಿಸ್ಕಿ; ಅಮೆರಿಕ, ಚೀನೀಯರಿಗಿಂತಲೂ ಭಾರತೀಯರು ಫಾಸ್ಟ್; ಭಾರತದಲ್ಲಿ ಯಾಕಿಷ್ಟು ಕಿಕ್?

ನೀವು ಉತ್ತಮ ಸೋಷಿಯಲ್ ಮೀಡಿಯಾ ಫಾಲೋಯರ್ಸ್ ಹೊಂದಿದ್ದಲ್ಲಿ ಅಮೇಜಾನ್ ಕಂಟೆಂಟ್ ಕ್ರಿಯೇಟರ್ ಆಗಬಹುದು. ಅಮೇಜಾನ್​ನ ಉತ್ಪನ್ನಗಳನ್ನು ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದು. ಆ ಉತ್ಪನ್ನದ ಅಮೇಜಾನ್ ಲಿಂಕ್ ಅನ್ನು ಯಾರಾದರೂ ವೀಕ್ಷಕರು ಕ್ಲಿಕ್ ಮಾಡಿ ಆ ಪ್ರಾಡಕ್ಟ್ ಖರೀದಿಸಿದಲ್ಲಿ ನಿಮಗೆ ನೇರವಾಗಿ ಕಮಿಷನ್ ಸಿಗುತ್ತದೆ.

ಅಮೇಜಾನ್ ಪ್ಲಾಟ್​ಫಾರ್ಮ್​ನಲ್ಲಿ ನೀವು ಸೈನ್ ಅಪ್ ಆಗಿ ಅಮೇಜಾನ್ ಇನ್​ಫ್ಲುಯೆನ್ಸರ್ ಪ್ರೋಗ್ರಾಮ್​ನ ಮುಖ್ಯಪುಟಕ್ಕೆ ಹೋಗಿ ನೊಂದಣಿ ಮಾಡಿಕೊಳ್ಳಬೇಕು. ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​ಗಳನ್ನು ಲಿಂಕ್ ಮಾಡುವುದು ಹೀಗೆ ವಿವಿಧ ಕ್ರಮಗಳನ್ನು ನೀವು ಅನುಸರಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ