AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕಾಚ್ ವಿಸ್ಕಿ; ಅಮೆರಿಕ, ಚೀನೀಯರಿಗಿಂತಲೂ ಭಾರತೀಯರು ಫಾಸ್ಟ್; ಭಾರತದಲ್ಲಿ ಯಾಕಿಷ್ಟು ಕಿಕ್?

Luxury Scotch Whiskey market: ಭಾರತದಲ್ಲಿ ದುಬಾರಿ ಬೆಲೆಯ ಲಕ್ಷುರಿ ಸ್ಕಾಚ್ ವಿಸ್ಕಿ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ಬಳಕೆ ಹೆಚ್ಚಳದಲ್ಲಿ ಭಾರತವು ಎಲ್ಲಾ ದೇಶಗಳನ್ನೂ ಮೀರಿಸಿದೆ. ಸ್ಕಾಚ್ ವಿಸ್ಕಿಗೆ ಭಾರತ ಐದನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಲಕ್ಷುರಿ ಸ್ಕಾಚ್ ವಿಸ್ಕಿ ಸೇಲ್ಸ್ ಕೈಗನ್ನಡಿ ಹಿಡಿದಿದೆ.

ಸ್ಕಾಚ್ ವಿಸ್ಕಿ; ಅಮೆರಿಕ, ಚೀನೀಯರಿಗಿಂತಲೂ ಭಾರತೀಯರು ಫಾಸ್ಟ್; ಭಾರತದಲ್ಲಿ ಯಾಕಿಷ್ಟು ಕಿಕ್?
ವಿಸ್ಕಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 23, 2024 | 4:28 PM

Share

ನವದೆಹಲಿ, ಸೆಪ್ಟೆಂಬರ್ 23: ಮದ್ಯಪಾನ ಮತ್ತು ಧೂಮಪಾನಕ್ಕೆ ಭಾರತ ಬಹಳ ದೊಡ್ಡ ಮಾರುಕಟ್ಟೆ ಹೌದು. ಆದರೆ, ದುಬಾರಿ ಎನಿಸುವ ಇಂಪೋರ್ಟೆಡ್ ಹೈ ಎಂಡ್ ಸ್ಕಾಚ್ ವಿಸ್ಕಿಯ (Scotch Whiskey) ಬಳಕೆಯಲ್ಲಿ ಅಮೆರಿಕ, ಚೀನಾ ದೇಶಗಳು ಮೊದಲು ಬರುತ್ತವೆ. ಭಾರತದಲ್ಲಿ ಕಡಿಮೆ ಬೆಲೆಯ ಮದ್ಯಪಾನಗಳಿಗೆ ಬೇಡಿಕೆ ಹೆಚ್ಚು. ಅಚ್ಚರಿ ಎಂಬಂತೆ, ಇದೀಗ ಸ್ಕಾಚ್ ವಿಸ್ಕಿ ಬಳಕೆ ಭಾರತದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಈ ವೇಗದಲ್ಲಿ ಅಮೆರಿಕ ಮತ್ತು ಚೀನಾ ದೇಶವನ್ನು ಭಾರತ ಮೀರಿಸಿದೆ. ಸ್ವಿಟ್ಜರ್​ಲ್ಯಾಂಡ್ ಮೂಲದ ಸಂಶೋಧಕ ಮತ್ತು ತಜ್ಞರಾದ ಸೈಮನ್ ಜೋಸೆಫ್ ಪ್ರಕಾರ ಕಳೆದ ಐದು ವರ್ಷದಲ್ಲಿ ಸ್ಕಾಚ್ ಲಕ್ಸುರಿ ವಿಸ್ಕಿ ಬಳಕೆಯ ದರದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಅಮೆರಿಕಕ್ಕಿಂತ ಎರಡು ಪಟ್ಟು ದರದಲ್ಲಿ ಭಾರತದಲ್ಲಿ ಸ್ಕಾಚ್ ವಿಸ್ಕಿ ಬಳಕೆ ಆಗುತ್ತಿದೆ.

ಅಂದರೆ, ಸ್ಕಾಚ್ ವಿಸ್ಕಿ ಬಳಕೆ ಪ್ರಮಾಣ ಹೆಚ್ಚಳದ ವೇಗ ಭಾರತದಲ್ಲೇ ಅಧಿಕ. ಜಾಗತಿಕವಾಗಿ ಸ್ಕಾಚ್ ವಿಸ್ಕಿ ಮಾರುಕಟ್ಟೆಯು ಶೇ. 16ರ ಸಿಎಜಿಆರ್​ನಲ್ಲಿ ಬೆಳೆಯುತ್ತಿದೆ. 2022ರವರೆಗೂ ಭಾರತಕ್ಕೆ ಸ್ಕಾಚ್ ವಿಸ್ಕಿ ರಫ್ತಾಗುತ್ತಿರುವ ಪ್ರಮಾಣ ಶೇ. 66ರ ಸಿಎಜಿಆರ್​ನಲ್ಲಿ ಹೆಚ್ಚಾಗುತ್ತಿದೆ. ಈ ವಿಚಾರದಲ್ಲಿ ಅಮೆರಿಕ, ಚೀನಾ ಮೊದಲಾದ ಪ್ರಮುಖ ಮಾರುಕಟ್ಟೆಗಿಂತಲೂ ಹೆಚ್ಚು ವೇಗದಲ್ಲಿ ಸ್ಕಾಚ್ ವಿಸ್ಕಿ ಭಾರತದಲ್ಲಿ ವಿಸ್ತಾರಗೊಳ್ಳುತ್ತಿದೆ.

ಇದನ್ನೂ ಓದಿ: Lalbaugcha Raja Ganeshotsav Auction: ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಸಿಕ್ಕ ಆದಾಯ ಎಷ್ಟು?

ಯುಕೆ ಮೂಲದ ಸ್ಕಾಚ್ ವಿಸ್ಕಿ ಅಸೋಸಿಯೇಶನ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರಲ್ಲಿ ಭಾರತಕ್ಕೆ 16.7 ಕೋಟಿ ಸ್ಕಾಚ್ ವಿಸ್ಕಿ ಬಾಟಲ್​ಗಳು ರಫ್ತಾಗಿವೆ. 2019ರ ವರ್ಷಕ್ಕೆ ಹೋಲಿಸಿದರೆ ಶೇ. 27ರಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿ ಐಷಾರಾಮಿ ವರ್ಗದವರಿಗೆ ಸೀಮಿತವಾಗಿದ್ದ ಸ್ಕಾಚ್ ಲಕ್ಸುರಿ ವಿಸ್ಕಿ ಗಣನೀಯವಾಗಿ ವಿಸ್ತರಣೆ ಆಗುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಹೆಜ್ಜೆ ಊರತೊಡಗಿದ್ದ ಈ ಕೆಟಗರಿ ಮದ್ಯಕ್ಕೆ ಭಾರತ ಈಗ ಐದನೇ ಅತಿದೊಡ್ಡ ಮಾರುಕಟ್ಟೆಯಾಗಿರುವುದು ಗಮನಾರ್ಹ. ಅಮೆರಿಕ, ಫ್ರಾನ್ಸ್, ಸಿಂಗಾಪುರ್ ಮತ್ತು ತೈವಾನ್ ದೇಶಗಳು ಲಕ್ಸುರಿ ಸ್ಕಾಚ್ ವಿಸ್ಕಿ ಬಳಕೆಯಲ್ಲಿ ಅಗ್ರ 4 ದೇಶಗಳಾಗಿವೆ.

ಇದನ್ನೂ ಓದಿ: ನಿದ್ದೆಗೆಟ್ಟು ಕೆಲಸ ಮಾಡಿದ್ರೆ ಯಶಸ್ಸು ಸಿಗುತ್ತೆ ಅನ್ನೋದು ಮೂರ್ಖತನ: ಟಾಪ್ ಸಿಇಒಗಳಿಗೆ ಝಾಡಿಸಿದ ಮೆಲಿಂಡಾ ಗೇಟ್ಸ್

ಭಾರತದಲ್ಲಿ ಸ್ಕಾಚ್ ವಿಸ್ಕಿ ಜನಪ್ರಿಯವಾಗುತ್ತಿರುವುದು ಯಾಕೆ?

ಲಕ್ಸುರಿ ಸ್ಕಾಚ್ ವಿಸ್ಕಿ ಬಳಕೆ ಸಾಮಾನ್ಯವಾಗಿ ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರಿಗೆ ಸೀಮಿತವಾಗಿರುತ್ತದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರು, ಸ್ಥಿತಿವಂತರ ಸಂಖ್ಯೆ ಸಾಕಷ್ಟು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸ್ಕಾಚ್ ವಿಸ್ಕಿ ಬಳಕೆಯೂ ಹೆಚ್ಚುತ್ತಿರುವುದು ಸಹಜ ಎನಿಸಿದೆ. ತಜ್ಞರೂ ಕೂಡ ಇದನ್ನೇ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ