Lalbaugcha Raja Ganeshotsav Auction: ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಸಿಕ್ಕ ಆದಾಯ ಎಷ್ಟು?

Mumbai's Lalbaughcha Raja Ganeshotsav: ಮುಂಬೈನ ವಿಖ್ಯಾತ ಲಾಲ್​ಬಾಗ್​ಚ ರಾಜ ಗಣೇಶೋತ್ಸವದಲ್ಲಿ ಎರಡು ವಾರದಲ್ಲಿ 4.16 ಕಿಲೋ ಚಿನ್ನ, 64 ಕಿಲೋಗೂ ಹೆಚ್ಚು ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ಅನಂತ ಅಂಬಾನಿ ನೀಡಿದ ಕಿರೀಟವೂ ಸೇರಿಸಿದರೆ ಕಾಣಿಕೆಗೆ ಬಿದ್ದ ಚಿನ್ನದ ತೂಕ 24 ಕಿಲೋ ದಾಟುತ್ತದೆ. ಐದು ಕೋಟಿ ರೂಗೂ ಅಧಿಕ ಮೌಲ್ಯದ ನಗದು ಹಣವನ್ನೂ ಭಕ್ತರು ಈ ಬಾರಿ ಕಾಣಿಕೆಯಾಗಿ ಅರ್ಪಿಸಿದ್ದಾರೆ.

Lalbaugcha Raja Ganeshotsav Auction: ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಸಿಕ್ಕ ಆದಾಯ ಎಷ್ಟು?
ಲಾಲ್​ಬಾಗ್​ಚ ರಾಜ ಗಣೇಶ
Follow us
|

Updated on: Sep 23, 2024 | 2:21 PM

ಮುಂಬೈ, ಸೆಪ್ಟೆಂಬರ್ 23: ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಬಹಳ ವ್ಯಾಪಕವಾಗಿ ಆಚರಿಸಲಾಗುತ್ತದೆ. ಗಣಪತಿಯ ಮೆರವಣಿಗೆ ಎಂದರೆ ಅದರ ವೈಭವವೇ ಅದ್ಭುತ. ಅದರಲ್ಲೂ ಮುಂಬೈನಲ್ಲಿ ಗಣೇಶೋತ್ಸವ ಬೇರೆಯೇ ಮಟ್ಟದ್ದು. ಎಲ್ಲಾ ಗಣೇಶೋತ್ಸವಗಳೂ ಒಂದಕ್ಕಿಂತ ಒಂದು ಮಿಗಿಲು ಎನಿಸುವಂಥವು. ಲಾಲ್​ಬಾಗ್​ಚ ರಾಜ ಎಂದೇ ಸುಪ್ರಸಿದ್ಧಿ ಪಡೆದಿರುವ ಗಣೇಶೋತ್ಸವ ಮಂಡಲ ಜನರ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಗಿದೆ. ಪ್ರತೀ ವರ್ಷ ಲಾಲ್​ಬಾಗ್​ಚ ರಾಜನ ಉತ್ಸವ ಬಹಳ ಅದ್ಭುತವಾಗಿ ನಡೆಯುತ್ತದೆ. ಸಾವಿರ, ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದು ಹೋಗುತ್ತಾರೆ. ನಗದು ಹಣ, ಚಿನ್ನಾಭರಣ ಇತ್ಯಾದಿ ಕಾಣಿಕೆಗಳನ್ನು ಭಕ್ತರು ಈ ಗಣಪನಿಗೆ ಅರ್ಪಿಸಿ ಹೋಗುತ್ತಾರೆ. ಈ ಕಾಣಿಕೆಗಳ ಮೌಲ್ಯವೇ ಕೋಟಿಗಟ್ಟಲೆ ಇರುತ್ತದೆ. ಭಕ್ತರು ಕಾಣಿಕೆಯಾಗಿ ಸಲ್ಲಿಸಿರುವ ಆಭರಣಗಳಲ್ಲಿ ಕೆಲ ಭಾಗವನ್ನು ಹರಾಜಿನಲ್ಲಿ ಮಾರಲಾಗಿದೆ. ವರದಿ ಪ್ರಕಾರ ಈ ಹರಾಜಿನಲ್ಲಿ 2.35 ಕೋಟಿ ರೂ ಆದಾಯ ಸಿಕ್ಕಿದೆ.

ಸೆಪ್ಟೆಂಬರ್ 8ರಿಂದ 20ರವರೆಗೆ ಲಾಲ್​ಬಾಗ್​ಚ ರಾಜ ಗಣೇಶೋತ್ಸವ ನಡೆದಿತ್ತು. ಈ ವೇಳೆ ಪಂಡಾಲ್​ನಲ್ಲಿ ಇರಿಸಲಾಗಿದ್ದ ದೊಡ್ಡ ಹುಂಡಿಯಲ್ಲಿ 4.15 ಕಿಲೋ ಚಿನ್ನ, 64.3 ಕಿಲೋ ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದರು. ಸಣ್ಣ ವಿಗ್ರಹಗಳು, ಕಿರೀಟಗಳು, ಕಡಗಗಳು ಹೀಗೆ ನಾನಾ ರೀತಿಯ ವಸ್ತುಗಳು ಇದರಲ್ಲಿವೆ.

ಮುಕೇಶ್ ಅಂಬಾನಿ ಅವರ ಕೊನೆಯ ಮಗ ಹಾಗೂ ನವವಿವಾಹಿತ ಅನಂತ ಅಂಬಾನಿ 20 ಕಿಲೋ ತೂಕದ ಚಿನ್ನದ ಕಿರೀಟವನ್ನು ಲಾಲ್​ಬಾಗ್​ಚ ರಾಜನಿಗೆ ಅರ್ಪಿಸಿದ್ದರು. 16 ಕೋಟಿ ರೂ ಮೌಲ್ಯದ ಈ ಸ್ವರ್ಣ ಕಿರೀಟ ಖಾಯಂ ಆಗಿ ಉಳಿಯಲಿದೆ. ಇದು ಪ್ರತೀ ವರ್ಷವೂ ನಿರ್ಮಾಣವಾಗುವ ಲಾಲ್​ಬಾಗ್​ಚ ರಾಜ ಗಣಪನ ಶಿರದ ಮೇಲೆ ರಾರಾಜಿಸಲಿದೆ. ಇದು ಬಿಟ್ಟರೆ ಉಳಿದ ಭಕ್ತರ ಚಿನ್ನ, ಬೆಳ್ಳಿ ಕಾಣಿಕೆಗಳನ್ನು ಹರಾಜಿನಲ್ಲಿ ಮಾರಲಾಗುತ್ತಿದೆ. ಶನಿವಾರ (ಸೆ. 21) ಕೆಲ ಆಭರಣಗಳ ಮಾರಾಟ ಮಾತ್ರ ಸಾಧ್ಯವಾಗಿದೆ.

ಇದನ್ನೂ ಓದಿ: ಗಾಢಗೊಳ್ಳುತ್ತಿರುವ ಭಾರತ-ಫ್ರಾನ್ಸ್ ಮಿಲಿಟರಿ ಸಂಬಂಧ; ನ್ಯೂಕ್ಲಿಯಾರ್ ಅಟ್ಯಾಕ್ ಸಬ್​ಮರೀನ್, ನೀರೊಳಗಿನ ಡ್ರೋನ್ ಇತ್ಯಾದಿ ಶಸ್ತ್ರಾಸ್ತ್ರಗಳ ತಯಾರಿಕೆ ಬಗ್ಗೆ ಸದ್ಯದಲ್ಲೇ ಮಾತುಕತೆ

14 ದಿನಗಳ ಲಾಲ್​ಬಾಗ್​ಚ ರಾಜ ಗಣೇಶೋತ್ಸವದಲ್ಲಿ ಬರೋಬ್ಬರಿ 5.65 ಕೋಟಿ ರೂ ಮೊತ್ತದ ನಗದು ಹಣವೂ ಹುಂಡಿಯಲ್ಲಿ ಬಿದ್ದಿದೆ. ಶನಿವಾರ ಹರಾಜಿನಲ್ಲಿ ಮಾರಲಾಗಿರುವ ವಸ್ತುಗಳೂ ಸೇರಿದಂತೆ ಇಲ್ಲಿಯವರೆಗೆ ಎಂಟು ಕೋಟಿ ರೂ ಮೊತ್ತದ ಆದಾಯ ಸಿಕ್ಕಿದೆ. ಇನ್ನೂ ಹಲವು ಚಿನ್ನ, ಬೆಳ್ಳಿ ಕಾಣಿಕೆಗಳನ್ನು ಮಾರುವುದು ಬಾಕಿ ಇದೆ.

ಕಳೆದ ವರ್ಷ ತುಸು ಕಡಿಮೆ ಚಿನ್ನ

2023ರಲ್ಲಿ ನಡೆದ ಗಣೇಶೋತ್ಸವದಲ್ಲಿ ಲಾಲ್​ಬಾಗ್​ಚ ರಾಜನಿಗೆ ಜನರು ಕೊಟ್ಟಿದ್ದ ಚಿನ್ನದ ಕಾಣಿಕೆಗಳು 3.2 ಕಿಲೋನಷ್ಟಿದ್ದವು. ಎಂಟು ದಿನದಲ್ಲಿ 51.6 ಕಿಲೋ ಬೆಳ್ಳಿ ವಸ್ತುಗಳನ್ನು ಭಕ್ತರು ಕೊಟ್ಟಿದ್ದರು. ಒಂದು ಕಿಲೋ ಚಿನ್ನದ ಸರ, 100 ಗ್ರಾಮ್ ಚಿನ್ನದ ಗಟ್ಟಿಯೂ ಕಾಣಿಕೆಗಳ ಪೈಕಿ ಇದ್ದವು.

2008ರಲ್ಲಿ ಲಾಲ್​ಬಾಗ್​ಚ ರಾಜ ಗಣೇಶೋತ್ಸವದ ಅಮೃತ ಮಹೋತ್ಸವ ಆಗಿತ್ತು. ಅಂದರೆ 75ನೇ ವಾರ್ಷಿಕೋತ್ಸವ ನಡೆದಿತ್ತು. ಆಗ ಭಕ್ತರು ಕೊಟ್ಟ ಕಾಣಿಕೆಗಳನ್ನು ಹರಾಜು ಹಾಕಿ ಮಾರಿದ ಬಳಿಕ 11.5 ಕೋಟಿ ರೂ ಆದಾಯ ಸಿಕ್ಕಿತ್ತು. ಈವರೆಗೆ ಅತಿಹೆಚ್ಚು ಆದಾಯ ಬಂದಿದ್ದು ಆ ವರ್ಷವೇ.

ಇದನ್ನೂ ಓದಿ: ನಿದ್ದೆಗೆಟ್ಟು ಕೆಲಸ ಮಾಡಿದ್ರೆ ಯಶಸ್ಸು ಸಿಗುತ್ತೆ ಅನ್ನೋದು ಮೂರ್ಖತನ: ಟಾಪ್ ಸಿಇಒಗಳಿಗೆ ಝಾಡಿಸಿದ ಮೆಲಿಂಡಾ ಗೇಟ್ಸ್

ಕಾಂಬ್ಳಿ ಕುಟುಂಬದಿಂದ ನಿರ್ವಹಣೆ

ಮುಂಬೈನ ಪುತಲಬಾಯಿ ಚಾವಲ್​ನಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಲದಲ್ಲಿ ಲಾಲ್​ಬಾಗ್​ಚ ರಾಜ ಗಣಪ ಇದೆ. 80 ವರ್ಷಗಳಿಂದ ಈ ಗಣಪನು ಕಾಂಬ್ಳಿ ಮನೆತನದ ಸುಪರ್ದಿಯಲ್ಲಿದ್ದಾನೆ. ಪ್ರತೀ ವರ್ಷವೂ ಕಾಂಬ್ಳಿ ಕುಟುಂಬದ ಉಸ್ತುವಾರಿಯಲ್ಲಿ ಗಣಪನನ್ನು ಸಿದ್ಧಪಡಿಸಲಾಗುತ್ತದೆ. ಈ ಗಣಪನ ಚರ್ಚೆಯೇ ಅತ್ಯಾಕರ್ಷಕ. ಬಹಳಷ್ಟು ಜನರು ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೇ ಗಣಪನ ತಯಾರಿಕೆಯಲ್ಲಿ ಭಾಗಿಯಾಗುತ್ತಾರೆ.

ಈ ಗಣಪ ಜನಪ್ರಿಯವಾಗಲು ಕಾರಣ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಸ್ಥಳದ ಸುತ್ತಮುತ್ತ ಜವಳಿ ಉದ್ಯಮ ನೆಲಸಿತ್ತು. ಈ ಮಿಲ್​ಗಳು ನಷ್ಟಕ್ಕೆ ಸಿಲುಕಿದಾಗ ಜನರೂ ಸಂಕಷ್ಟಕ್ಕೆ ಈಡಾಗಿದ್ದರು. ಆಗ ಜನರು ಗಣಪನ ಮೊರೆ ಹೋದರು. ಒಳ್ಳೆಯ ಕಾಲ ಬಂದಿತು. ಅಂದಿನಿಂದ ಲಾಲ್​ಬಾಗ್​ಚ ರಾಜ ಗಣಪನ ಮಹಿಮೆಯು ಭಕ್ತರ ಬಳಗವನ್ನು ಹಿಗ್ಗಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಲಿತರು ಉದ್ಧಾರವಾಗುವುದು ಸಚಿವ ಸಂತೋಷ್​ ಲಾಡ್​ಗೆ ಬೇಕಿಲ್ಲ: ಗೋವಿಂದ ಕಾರಜೋಳ
ದಲಿತರು ಉದ್ಧಾರವಾಗುವುದು ಸಚಿವ ಸಂತೋಷ್​ ಲಾಡ್​ಗೆ ಬೇಕಿಲ್ಲ: ಗೋವಿಂದ ಕಾರಜೋಳ
ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್