
ಬೆಂಗಳೂರು, ಮಾರ್ಚ್ 5: ಆಂಥ್ರೋಪಿಕ್ (Anthropic) ಕಂಪನಿಯ ಎಐ ಟೆಕ್ನಾಲಜಿ ಶಕ್ತ ಉತ್ಪನ್ನಗಳು ದೈನಂದಿನ ಕೆಲಸಗಳನ್ನು ಸಲೀಸುಗೊಳಿಸಲು ಬಹಳ ನೆರವಾಗುತ್ತವೆ. ಅದರ ಕ್ಲಾಡ್ನಂತಹ ಎಐ ಟೂಲ್ಗಳು ಹೆಚ್ಚೆಚ್ಚು ಕೆಲಸಗಳನ್ನು ಆಟೊಮೇಟ್ಗೊಳಿಸಬಲ್ಲುವು. ಆದರೆ, ಈ ಟೂಲ್ಗಳನ್ನು ಹೇಗೆ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು ಅಷ್ಟೇ. ಸಾಫ್ಟ್ವೇರ್ಗಳು ಬಹಳಷ್ಟು ಕೆಲಸಗಳನ್ನು ಆಟೊಮೇಟ್ ಮಾಡಿದ್ದವು. ಆದರೆ, ಸಾಫ್ಟ್ವೇರ್ ಅನ್ನು ಹೇಗೆ ಬಳಸಬೇಕೆಂದು ಎನ್ನುವ ಜ್ಞಾನ ಇರಬೇಕು. ಹಾಗೆಯೇ, ಎಐ ಟೂಲ್ಗಳ ಬಳಕೆ ಬಗ್ಗೆ ಜ್ಞಾನ ಅಗತ್ಯ.
ಇದನ್ನು ಮನಗಂಡೇ ಆಂಥ್ರೋಪಿಕ್ ಸಂಸ್ಥೆ ಅಕಾಡೆಮಿ ತೆರೆದಿದೆ. ಆಂಥ್ರೋಪಿಕ್ ಅಕಾಡೆಮಿಯಲ್ಲಿ ಆನ್ಲೈನ್ನಲ್ಲಿ ಉಚಿತವಾಗಿ ಎಐ ಕೋರ್ಸ್ಗಳನ್ನು ಆಫರ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ವೃತ್ತಿಪರರು, ಡೆವಲಪರ್ಗಳು ಹೀಗೆ ಎಲ್ಲಾ ವರ್ಗದ ಜನರಿಗೆ ವಿನ್ಯಾಸ ಮಾಡಲಾದ ಕೋರ್ಸ್ಗಳಿವೆ. ಕ್ಲಾಡ್ ಎಐ ಮಾಡಲ್ಗಳನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಈ ಕೋರ್ಸ್ಗಳಲ್ಲಿ ಕಲಿಸಲಾಗುತ್ತದೆ.
ಆಂಥ್ರೋಪಿಕ್ ಸಂಸ್ಥೆ ಹಲವು ಕೋರ್ಸ್ಗಳನ್ನು ಆರಂಭಿಸಿದೆ. ಸ್ಕಿಲ್ಜಾರ್ ಪ್ಲಾಟ್ಫಾರ್ಮ್ನಲ್ಲಿ ಇವು ಉಚಿತವಾಗಿ ಲಭ್ಯ ಇವೆ. ಕೋರ್ಸೆರಾ ಮೂಲಕ ಇನ್ನಷ್ಟು ಪ್ರೀಮಿಯಮ್ ಕಂಟೆಂಟ್ ಲಭ್ಯ ಇರುತ್ತದೆ. ಕೋರ್ಸ್ ಕಲಿತು ಮುಗಿಸಿದರೆ ಸರ್ಟಿಫಿಕೇಶನ್ ಕೂಡ ನೀಡಲಾಗುತ್ತದೆ.
ಇದನ್ನೂ ಓದಿ: ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು?
ಎಐನಲ್ಲಿ ಏನೂ ಗೊತ್ತಿಲ್ಲದ ಬಿಗನರ್ಸ್ನಿಂದ ಹಿಡಿದು, ಎಐ ಆ್ಯಪ್ಗಳನ್ನು ತಯಾರಿಸುವ ವೃತ್ತಿಪರರವರೆಗೆ ಎಲ್ಲರಿಗೂ ಸೂಕ್ತವಾಗುವ ಎಐ ಸ್ಕಿಲ್ಗಳನ್ನು ಈ ಕೋರ್ಸ್ಗಳಲ್ಲಿ ಕಲಿಯಬಹುದು.
ಇದನ್ನೂ ಓದಿ: 25,000 ರೂನಷ್ಟು ಕಡಿಮೆ ಸಂಬಳ ಇದ್ದರೆ ಹಣದ ನಿರ್ವಹಣೆ ಹೇಗಿರಬೇಕು? ಇಲ್ಲಿದೆ ಟಿಪ್ಸ್
ಈ ಎಲ್ಲಾ ಕೋರ್ಸ್ಗಳು ಉಚಿತವಾಗಿ ಲಭ್ಯ ಇರುತ್ತವೆ. ಪ್ರೀಮಿಯಮ್ ಸಬ್ಸ್ರಿಪ್ಷನ್ನ ಅಗತ್ಯ ಇರುವುದಿಲ್ಲ. ಕಲಿಕೆ ಮುಗಿದ ಬಳಿಕ ಡಿಜಿಟಲ್ ಸರ್ಟಿಫಿಕೇಟ್ ಸಿಗುತ್ತದೆ. ಇದನ್ನು ಲಿಂಕ್ಡ್ಇನ್ ಇತ್ಯಾದಿ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳಬಹುದು. ಈ ಮೂಲಕ ನಿಮಗೆ ಎಐ ಜ್ಞಾನವಿರುವುದನ್ನು ತೋರ್ಪಡಿಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ