ಭಾರತದಲ್ಲಿ ಚೊಚ್ಚಲ ಆ್ಯಪಲ್ ಆರ್ ಅಂಡ್ ಡಿ; ಅಮೆರಿಕ, ಚೀನಾ, ಜರ್ಮನಿ, ಇಸ್ರೇಲ್ ಸಾಲಿಗೆ ಭಾರತ

|

Updated on: Nov 10, 2024 | 2:54 PM

First Indian subsidiary of Apple Inc: ಭಾರತದಲ್ಲಿ ಆ್ಯಪಲ್​ನ ಪೂರ್ಣ ಸ್ವಾಮ್ಯದ ಅಂಗಸಂಸ್ಥೆಯೊಂದನ್ನು ಸ್ಥಾಪಿಸಲಾಗಿದೆ. ಆ್ಯಪಲ್ ಆಪರೇಶನ್ಸ್ ಇಂಡಿಯಾ ಎನ್ನುವ ಈ ಕಂಪನಿಯು ಭಾರತದಲ್ಲಿ ಆ್ಯಪಲ್ ಉತ್ಪನ್ನಗಳ ಆವಿಷ್ಕಾರಕ್ಕೆ ಬೇಕಾದ ಡಿಸೈನ್, ಟೆಸ್ಟಿಂಗ್ ಇತ್ಯಾದಿ ಕಾರ್ಯಗಳನ್ನು ಮಾಡಲಿದೆ. ಆ್ಯಪಲ್​ನ ಥರ್ಡ್ ಪಾರ್ಟಿ ತಯಾರಕರು ಮತ್ತು ಗುತ್ತಿಗೆದಾರರಿಗೆ ವಿವಿಧ ನೆರವು ಒದಗಿಸಲಿದೆ.

ಭಾರತದಲ್ಲಿ ಚೊಚ್ಚಲ ಆ್ಯಪಲ್ ಆರ್ ಅಂಡ್ ಡಿ; ಅಮೆರಿಕ, ಚೀನಾ, ಜರ್ಮನಿ, ಇಸ್ರೇಲ್ ಸಾಲಿಗೆ ಭಾರತ
ಆ್ಯಪಲ್
Follow us on

ನವದೆಹಲಿ, ನವೆಂಬರ್ 10: ಗುತ್ತಿಗೆ ಕಂಪನಿಗಳ ಮೂಲಕ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ತಯಾರಿಸಿಸುತ್ತಿರುವ ಆ್ಯಪಲ್ ಸಂಸ್ಥೆ ಇದೀಗ ಮೊದಲ ಬಾರಿಗೆ ಭಾರತದಲ್ಲಿ ತನ್ನ ಅಂಗಸಂಸ್ಥೆಯೊಂದನ್ನು ಹುಟ್ಟುಹಾಕಿದೆ. ಆ್ಯಪಲ್ ಆಪರೇಶನ್ಸ್ ಇಂಡಿಯಾ ಎನ್ನುವ ಈ ಕಂಪನಿಯು ಆ್ಯಪಲ್​ನ ಹೊಸ ಉತ್ಪನ್ನಗಳ ಆವಿಷ್ಕಾರಕ್ಕೆ ಅಗತ್ಯವಾಗಿರುವ ಸಂಶೋಧನೆ, ವಿನ್ಯಾಸ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಭಾರತದಲ್ಲಿ ನಿರ್ಮಿಸಲಿದೆ.

ಯಂತ್ರೋಪಕರಣಗಳ ಖರೀದಿ, ಲೀಸಿಂಗ್, ಹಾರ್ಡ್ ಎಂಜಿನಿಯರುಗಳ ನೇಮಕ, ಗ್ರೂಪ್ ಕಂಪನಿಗಳಿಗೆ ಫೇಲ್ಯೂರ್ ಅನಾಲಿಸಿಸ್ ಸರ್ವಿಸ್ ಇತ್ಯಾದಿ ಚಟುವಟಿಕೆಗಳನ್ನು ಮಾಡುವುದಾಗಿ ಆ್ಯಪಲ್ ಆಪರೇಶನ್ಸ್ ಇಂಡಿಯಾ ಸಂಸ್ಥೆ ಕಳೆದ ವಾರ ಪ್ರಾಧಿಕಾರಕ್ಕೆ ಮಾಹಿತಿ ನೀಡಿದೆ. ಆ್ಯಪಲ್ ಸಂಸ್ಥೆಯಿಂದ ಸದ್ಯೋಭವಿಷ್ಯದವರೆಗೆ ಕಾರ್ಯಾಚರಣಾತ್ಮಕ ಮತ್ತು ಹಣಕಾಸು ನೆರವು ಸಿಗಲಿದೆ ಎಂದೂ ಈ ಸಂಸ್ಥೆಯು ರಿಜಿಸ್ಟ್ರಾರ್ ಆಫ್ ಕಂಪನೀಸ್​ಗೆ ತಿಳಿಸಿದೆ.

ಇದನ್ನೂ ಓದಿ: ಗುಜರಿ ಅಂತ ಜರೀಬೇಡಿ… ಗುಜರಿ ಮಾರಿ ಸರ್ಕಾರ ಗಳಿಸಿದ್ದೆಷ್ಟು ನೋಡಿ

ಭಾರತದಲ್ಲಿ ಮೊದಲ ಆ್ಯಪಲ್ ಆರ್ ಅಂಡ್ ಡಿ; ಕೆಲವೇ ದೇಶಗಳ ಸಾಲಿನಲ್ಲಿ ಭಾರತ

ಒಂದು ವೇಳೆ ಆ್ಯಪಲ್ ಸಂಸ್ಥೆ ಭಾರತದಲ್ಲಿ ಹಾರ್ಡ್​ವೇರ್ ಡಿಸೈನ್ ಮತ್ತು ಟೆಸ್ಟಿಂಗ್ ಕಾರ್ಯಗಳನ್ನು ನಡೆಸಿದಲ್ಲಿ ಅದು ಐತಿಹಾಸಿಕ ಎನಿಸಲಿದೆ. ಅಮೆರಿಕ, ಚೀನಾ, ಜರ್ಮನಿ ಮತ್ತು ಇಸ್ರೇಲ್ ಬಿಟ್ಟರೆ ಆ್ಯಪಲ್ ಸಂಸ್ಥೆ ಬೇರೆ ಯಾವ ದೇಶದಲ್ಲೂ ಆರ್ ಅಂಡ್ ಡಿ ಹೊಂದಿಲ್ಲ. ಭಾರತವು ಈ ನಾಲ್ಕು ದೇಶಗಳ ಸಾಲಿಗೆ ಹೊಸ ಸೇರ್ಪಡೆಯಾಗಲಿದೆ.

ಆ್ಯಪಲ್ ಆಪರೇಶನ್ಸ್ ಇಂಡಿಯಾ ಸಂಸ್ಥೆಯು ಆ್ಯಪಲ್ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುತ್ತಿರುವ ಫಾಕ್ಸ್​ಕಾನ್, ಟಾಟಾ ಎಲೆಕ್ಟ್ರಾನಿಕ್ಸ್ ಇತ್ಯಾದಿ ಥರ್ಡ್ ಪಾರ್ಟಿ ತಯಾರಕರಿಗೆ ಅಗತ್ಯ ನೆರವು ನೀಡಲಿದೆ. ಹಾರ್ಡ್​ವೇರ್, ಸಾಫ್ಟ್​ವೇರ್ ಮತ್ತಿತರ ಸೇವೆಗಳನ್ನು ಇದು ಒದಗಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಒಳ್ಳೆಯ ಲಾಭದಲ್ಲಿದ್ದರೂ ಲೇ ಆಫ್ ಮಾಡ್ತಾರೆ… ಇದು ಅಪ್ಪಟ ದುರಾಸೆ… ಫ್ರೆಷ್​ವರ್ಕ್ಸ್​ಗೆ ತಿವಿದ ಜೋಹೋ ಸಿಇಒ ಶ್ರೀಧರ್ ವೆಂಬು

ಚೀನಾದಲ್ಲಿ ಸಾಕಷ್ಟು ತಯಾರಕರ ಬಳಗ ಹೊಂದಿರುವ ಆ್ಯಪಲ್ ಕಂಪನಿಗೆ ಭಾರತದ ನಂಟೂ ಕೂಡ ಗಾಢವಾಗಿದೆ. ಆ್ಯಪಲ್​ನ ಶೇ. 5ಕ್ಕಿಂತಲೂ ಹೆಚ್ಚು ಉತ್ಪನ್ನಗಳು ಭಾರತದಲ್ಲಿ ತಯಾರಾಗುತ್ತಿವೆ. ಭಾರತದಲ್ಲಿ 17,000 ಆ್ಯಪ್ ಡೆವಲಪರ್​ಗಳ ಬಳಗ ಆ್ಯಪಲ್​ಗೆ ಇದೆ. ಬೆಂಗಳೂರಿನಲ್ಲಿ ಡೆವಲಪರ್ ಸೆಂಟರ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ