GST: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿಯೊಳಗೆ ತರಬಹುದಾ? ಶುಕ್ರವಾರದ ತನ ಕಾದು ನೋಡಬೇಕು

| Updated By: Srinivas Mata

Updated on: Sep 15, 2021 | 5:41 PM

ಇದೇ ಶುಕ್ರವಾರದಂದು ನಡೆಯುವ ಜಿಎಸ್​ಟಿ ಸಭೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಇ ಅಡಿ ತರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

GST: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿಯೊಳಗೆ ತರಬಹುದಾ? ಶುಕ್ರವಾರದ ತನ ಕಾದು ನೋಡಬೇಕು
ಸಾಂದರ್ಭಿಕ ಚಿತ್ರ
Follow us on

ಇದೇ ಶುಕ್ರವಾರ (ಸೆಪ್ಟೆಂಬರ್ 17, 2021) ಜಿಎಸ್​ಟಿ ಸಮಿತಿಯ 45ನೇ ಸಭೆ ನಿಗದಿ ಆಗಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ಒಳಗೆ ಸೇರ್ಪಡೆ ಮಾಡಬಹುದು ಎಂಬ ನಿರೀಕ್ಷೆ ಅಗಾಧವಾಗಿದೆ. ಈ ಹಿನ್ನೆಲೆಯಲ್ಲಿ, ಹೀಗಾದರೆ ಕೈಗಾರಿಕೆ ಮತ್ತು ಗ್ರಾಹಕರ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ. ತೈಲ ಅನ್ವೇಷಣೆ ಮಾಡುವಂಥ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ಒಎನ್​ಜಿಸಿ)ನಂಥವು ವಿವಿಧ ಇನ್​ಪುಟ್​ಗಳನ್ನು ಬಳಸುತ್ತವೆ. ಅವುಗಳಿಗೆ ಜಿಎಸ್​ಟಿ ಆಗುತ್ತದೆ. ಆದರೆ ಕಚ್ಚಾತೈಲ ಹಾಗೂ ನೈಸರ್ಗಿಕ ಅನಿಲ ಜಿಎಸ್​ಟಿ ಅಡಿ ಬರುವುದಿಲ್ಲವಾದ್ದರಿಂದ ಪರೋಕ್ಷ ತೆರಿಗೆ ನೀತಿಯ ಎರಡು ಪ್ರತ್ಯೇಕ ಹೆಡ್​ಗಳ ಅಡಿಯಲ್ಲಿ ಬರುತ್ತವೆ. ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲವನ್ನು ಜಿಎಸ್​ಟಿಯಲ್ಲಿ ಸೇರ್ಪಡೆ ಮಾಡುವುದರಿಂದ ಉದ್ಯಮವು ಹೆಚ್ಚು ತೆರಿಗೆ ಕ್ಷಮತೆಯಿಂದ ಇರುವಂತೆ ಆಗುತ್ತದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ರಿಲಯನ್ಸ್ ಇಂಡಸ್ಟ್ರೀಸ್​ನಂಥ ರಿಫೈನರ್​ಗಳು ಬಳಸುವಂಥ ಕಚ್ಚಾ ತೈಲ ಜಿಎಸ್​ಟಿಯಿಂದ ಹೊರಗಿದೆ. ಇತರ ಇನ್​ಪುಟ್​ಗಳಿಗೆ ಜಿಎಸ್​ಟಿ ಆಗುತ್ತದೆ. ಆಮೇಲೆ ಅವರು ಫಿನಿಷ್ಡ್ ಉತ್ಪನ್ನಗಳು, ಅಂದರೆ ಪೆಟ್ರೋಲ್, ಡೀಸೆಲ್ ಹಾಗೂ ವಿಮಾನದಲ್ಲಿ ಬಳಸುವ ತೈಲಗಳು ಜಿಎಸ್​ಟಿಯಿಂದ ಹೊರಗಿದ್ದು, ಕೇಂದ್ರ ಅಬಕಾರಿ ಸುಂಕ ಹಾಗೂ ರಾಜ್ಯ ಮಟ್ಟದ ವ್ಯಾಟ್​ ಬೀಳುತ್ತದೆ. ಇನ್ನು ನಾಫ್ತಾ, ಹಗುರ ಡೀಸೆಲ್ ತೈಲ, ವ್ಯಾಕ್ಸಸ್, ಬಿಟಮನ್ ಮತ್ತು ಇತರ ರಿಫೈನರಿ ಉಪ ಉತ್ಪನ್ನಗಳು ಜಿಎಸ್​ಟಿ ಅಡಿ ಬರುತ್ತವೆ. ಎಲ್ಲ ಪೆಟ್ರೋಲಿಯಂ ಉತ್ಪನ್ನಗಳನ್ನೂ ಜಿಎಸ್​ಟಿ ಅಡಿಯಲ್ಲೇ ತಂದಾಗ ತೆರಿಗೆ ರಚನೆ ಸರಳವಾಗುತ್ತದೆ ಮತ್ತು ಹೆಚ್ಚು ತೆರಿಗೆ ಕ್ಷಮತೆ ಬರುತ್ತದೆ.

ತೆರಿಗೆಯ ಅಸಮರ್ಥತೆಯನ್ನು ತೊಡೆದು ಹಾಕುವುದರಿಂದ ಗ್ರಾಹಕರಿಗೆ ಅನುಕೂಲ ಆಗುವ ಸಾಧ್ಯತೆ ಹೆಚ್ಚು ಮತ್ತು ಕಂಪೆನಿಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ. ಇದರ ಜತೆಗೆ ಪೆಟ್ರೋಲ್, ಡೀಸೆಲ್​ನಂಥ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಭಾರೀ ತೆರಿಗೆ ಬೀಳುತ್ತಿರುವಂಂಥದ್ದು ಜಿಎಸ್​ಟಿ ಅಡಿಯಲ್ಲಿ ಬಂದರೆ ತೆರಿಗೆ ಹೊರೆ ಕಡಿಮೆ ಆಗುತ್ತದೆ. ಗ್ರಾಹಕರಿಗೆ ಹೊರೆ ಕಡಿಮೆ ಆಗುವುದು ನಿಜ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಣಕಾಸಿನ ಅಗತ್ಯಕ್ಕೆ ತೀವ್ರ ಕೊರತೆ ಎದುರಾಗುತ್ತದೆ.

ಕೊವಿಡ್​ನಿಂದಾಗಿ ಸರ್ಕಾರದ ಆದಾಯ ಸಂಗ್ರಹಕ್ಕೆ ಭಾರೀ ಪೆಟ್ಟು ಬಿದ್ದಿರುವುದರಿಂದ ಜಿಎಸ್​ಟಿ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರ್ಪಡೆ ಮಾಡುವುದು ಅನುಮಾನ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: Bihar Panchayat Polls: ಪೆಟ್ರೋಲ್ ದರ ಏರಿಕೆ ಪ್ರತಿಭಟಿಸಿ ನಾಮಪತ್ರ ಸಲ್ಲಿಸಲು ಎಮ್ಮೆಯೇರಿ ಬಂದ ಅಭ್ಯರ್ಥಿ

(Are Petroleum Products Included Under GST On 45th Council Meeting)

Published On - 5:40 pm, Wed, 15 September 21