AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rich: ಭಾರತದ ಟಾಪ್ ಶೇ 10ರಷ್ಟು ಶ್ರೀಮಂತರ ಬಳಿ ಶೇ 50ಕ್ಕೂ ಹೆಚ್ಚು ಸಂಪತ್ತು ಸಂಗ್ರಹ ಎಂದಿದೆ ಈ ಸಮೀಕ್ಷೆ

ಸಮೀಕ್ಷೆಯೊಂದರ ಪ್ರಕಾರ ಭಾರತದ ಟಾಪ್ ಶೇ 10ರಷ್ಟು ಶ್ರೀಮಂತರ ಬಳಿ ದೇಶದ ಒಟ್ಟಾರೆ ಆಸ್ತಿಯ ಶೇ 50ರಷ್ಟಿದೆ. ಏನು ಆ ಸಮೀಕ್ಷೆ ಹಾಗೂ ವಿಧಾನ ಎಂಬ ಮಾಹಿತಿ ಇಲ್ಲಿದೆ.

Rich: ಭಾರತದ ಟಾಪ್ ಶೇ 10ರಷ್ಟು ಶ್ರೀಮಂತರ ಬಳಿ ಶೇ 50ಕ್ಕೂ ಹೆಚ್ಚು ಸಂಪತ್ತು ಸಂಗ್ರಹ ಎಂದಿದೆ ಈ ಸಮೀಕ್ಷೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Sep 15, 2021 | 7:36 PM

Share

ಭಾರತದ ಟಾಪ್​ 10ರಲ್ಲಿ ಇರುವ ಶ್ರೀಮಂತರು ದೇಶದ ಆಸ್ತಿಯ ಪೈಕಿ ಶೇ 50ಕ್ಕೂ ಹೆಚ್ಚು ಹೊಂದಿದ್ದಾರೆ, ಇನ್ನು ತಳಮಟ್ಟದಲ್ಲಿ ಇರುವ ಶೇ 50ರಷ್ಟು ಜನರ ಶೇ 10ರಷ್ಟು ಹಣಕಾಸು ಮತ್ತು ಭೌತಿಕ ಆಸ್ತಿಯನ್ನು ಹೊಂದಿದ್ದಾರೆ ಎಂಬುದು ರಾಷ್ಟ್ರೀಯ ಮಾದರಿ ಸಮೀಕ್ಷೆಯಿಂದ (NSS) ನಡೆಸಿದ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯಿಂದ ಗೊತ್ತಾಗಿದೆ. ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಅತ್ಯಧಿಕ ಅಸಮಾನತೆಯು ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾಗಿದೆ. ಅಲ್ಲಿನ ಶೇ 10ರಷ್ಟು ಟಾಪ್ ಶ್ರೀಮಂತರು ಶೇ 80.8ರಷ್ಟು ಆಸ್ತಿಗಳನ್ನು ಹೊಂದಿದ್ದಾರೆ ಮತ್ತು ತಳಮಟ್ಟದಲ್ಲಿ ಇರುವ ಶೇ 50ರಷ್ಟು ಮಂದಿ ಕೇವಲ ಶೇ 2.1ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ದೆಹಲಿ ಮತ್ತು ನೆರೆಹೊರೆಯ ಗ್ರಾಮೀಣ ಭಾಗಗಳಲ್ಲಿ ಭೂಮಿಯ ಹೆಚ್ಚಿನ ಮೌಲ್ಯಮಾಪನದ ಪರಿಣಾಮವಾಗಿ ಈ ಆರ್ಥಿಕ ಅಸಮಾನತೆಯು ಆಗಿರಬಹುದು ಎಂದು ವರದಿಯಲ್ಲಿ ಸೇರಿಸಲಾಗಿದೆ.

ರಾಷ್ಟ್ರೀಯ ರಾಜಧಾನಿಯ ನಂತರ ಎರಡನೆಯದಾಗಿ ಅತಿ ಹೆಚ್ಚು ಆದಾಯದ ಅಸಮಾನತೆಯನ್ನು ಹೊಂದಿರುವ ರಾಜ್ಯವೆಂದರೆ ಪಂಜಾಬ್. ಇಲ್ಲಿನ ಅಗ್ರ ಶೇ 10ರಷ್ಟು ಶ್ರೀಮಂತರು ರಾಜ್ಯದ ಆರ್ಥಿಕ ಮತ್ತು ಭೌತಿಕ ಆಸ್ತಿಗಳ ಶೇ 65ಕ್ಕಿಂತ ಹೆಚ್ಚು ಹೊಂದಿದ್ದಾರೆ. ಪಂಜಾಬಿನ ತಳಮಟ್ಟದ ಶೇ 50ರಷ್ಟು ಜನರು ಕೇವಲ ಶೇ 5ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ಗಮನಾರ್ಹ ಆರ್ಥಿಕ ಅಸಮಾನತೆ ಹೊಂದಿರುವ ಇತರ ರಾಜ್ಯಗಳೆಂದರೆ ಹರ್ಯಾಣ, ಮಧ್ಯಪ್ರದೇಶ ಮತ್ತು ಉತ್ತರಾಖಂಡ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಮ್ಮು ಮತ್ತು ಕಾಶ್ಮೀರವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲಿ ಟಾಪ್ ಶೇ 10ರಷ್ಟು ಜನರು ಆರ್ಥಿಕ ಮತ್ತು ಭೌತಿಕ ಆಸ್ತಿಗಳ ಶೇ 32 ಮತ್ತು ತಳಮಟ್ಟದ ಶೇ 50ರಷ್ಟು ಮಂದಿ ಕೇವಲ ಶೇ 18ರಷ್ಟು ಮಾಲೀಕತ್ವ ಹೊಂದಿದ್ದಾರೆ.

ಸಮೀಕ್ಷೆಯ ವಿಧಾನ ಶ್ರೀಮಂತ ಮತ್ತು ಬಡ ಭಾರತೀಯರ ಮಧ್ಯದ ಈ ಅಸಮಾನತೆಯು ಭೂಮಿ, ಕಟ್ಟಡಗಳು, ಜಾನುವಾರುಗಳು, ವಾಹನಗಳು ಹಾಗೂ ಬ್ಯಾಂಕ್ ಠೇವಣಿಗಳು, ಕಂಪೆನಿ ಷೇರುಗಳು ಮತ್ತು ಅಂಚೆ ಕಚೇರಿ ಖಾತೆಗಳಂತಹ ಎಲ್ಲ ವಸ್ತುಗಳ ಮೇಲೆ ಹಣಕಾಸಿನ ಮೌಲ್ಯವನ್ನು ನೀಡುವ ಸಮೀಕ್ಷೆಯನ್ನು ಆಧರಿಸಿದೆ. ಈ ಸಮೀಕ್ಷೆಯನ್ನು 2019ರಲ್ಲಿ ನಡೆಸಲಾಗಿದೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಭೌತಿಕ ಮತ್ತು ಆರ್ಥಿಕ ಆಸ್ತಿಗಳ ಮೌಲ್ಯ ರೂ. 274.16 ಲಕ್ಷ ಕೋಟಿಗಳಾಗಿದ್ದು, ಅದರಲ್ಲಿ ಅರ್ಧಕ್ಕಿಂತ ಕಡಿಮೆ ಅಂದರೆ 139.6 ಲಕ್ಷ ಕೋಟಿ ರೂಪಾಯಿ ಅಗ್ರ ಶೇ 10ರಷ್ಟು ಶ್ರೀಮಂತ ಜನರ ಒಡೆತನದಲ್ಲಿದೆ. ತಳಮಟ್ಟದ ಶೇ 50ರಷ್ಟು ಮಂದಿ ಕೇವಲ 10.2ರಷ್ಟು ಆಸ್ತಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Radhakishan Damani: ವಿಶ್ವದ ಟಾಪ್ 100 ಶ್ರೀಮಂತರ ಪಟ್ಟಿಯೊಳಗೆ ರಾಧಾಕಿಶನ್ ದಮಾನಿಗೆ ಸ್ಥಾನ

(India’s 50 Percent Of Wealth With Top 10 Percent Of Rich People According To Survey

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ