ಬ್ಯಾಂಕ್​ನಿಂದ ತಪ್ಪಾಗಿ ವರ್ಗಾವಣೆ ಆಗಿದ್ದ 5.50 ಲಕ್ಷ ರೂ. ಹಿಂತಿರುಗಿಸಲು ನಿರಾಕರಿಸಿದ ವ್ಯಕ್ತಿ ಜೈಲು ಪಾಲು

TV9 Digital Desk

| Edited By: Srinivas Mata

Updated on: Sep 15, 2021 | 11:56 PM

ತಪ್ಪಾಗಿ ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಆಗಿದ್ದ ಮೊತ್ತವನ್ನು ಹಿಂತಿರುಗಿಸಲು ಒಪ್ಪದ ವ್ಯಕ್ತಿಯನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್​ನಿಂದ ತಪ್ಪಾಗಿ ವರ್ಗಾವಣೆ ಆಗಿದ್ದ 5.50 ಲಕ್ಷ ರೂ. ಹಿಂತಿರುಗಿಸಲು ನಿರಾಕರಿಸಿದ ವ್ಯಕ್ತಿ ಜೈಲು ಪಾಲು
ಪ್ರಾತಿನಿಧಿಕ ಚಿತ್ರ

ಉತ್ತರ ಬಿಹಾರ ಜಿಲ್ಲೆಯ ನಿವಾಸಿಯೊಬ್ಬ ಈಗ ಜೈಲು ಸೇರುವಂತಾಗಿದೆ. ಹೀಗಾಗಿರುವುದು ಏಕೆ ಎಂಬುದು ಆಸಕ್ತಿಕರವಾಗಿದೆ. ತನ್ನ ಖಾತೆಗೆ ತಪ್ಪಾಗಿ ಬಂದ 5 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತವನ್ನು ಬ್ಯಾಂಕ್​ಗೆ ಮರಳಿಸಲು ನಿರಾಕರಿಸಿದ್ದಕ್ಕಾಗಿ ಮತ್ತು ಅದು ಪ್ರಧಾನಿ ನರೇಂದ್ರ ಮೋದಿಯವರ ಉಡುಗೊರೆ ಎಂದು ಆತ ಹೇಳಿದ್ದಕ್ಕಾಗಿ ಈಗ ಜೈಲಿನ ಕಂಬಿ ಹಿಂದೆ ಇದ್ದಾನೆ. ರಂಜಿತ್ ದಾಸ್ ಎಂಬಾತ ಬಕ್ತಿಯಾರ್​ಪುರ್​ನ ನಿವಾಸಿ.​ ಈ ಸ್ಥಳವು ಉತ್ತರ ಬಿಹಾರ ಜಿಲ್ಲೆಯ ಮಾನ್ಸಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಗ್ರಾಮೀಣ್​ ಬ್ಯಾಂಕ್​ನಿಂದ ಇತ್ತೀಚೆಗೆ ಕಣ್ತಪ್ಪಿನಿಂದಾಗಿ ರಂಜಿತ್​ ದಾಸ್​ ಖಾತೆಗೆ 5.50 ಲಕ್ಷ ರೂಪಾಯಿ ವರ್ಗಾವಣೆ ಆಗಿತ್ತು. ಮಾನ್ಸಿ ಎಸ್‌ಎಚ್‌ಒ ದೀಪಕ್ ಕುಮಾರ್ ಅವರ ಪ್ರಕಾರ, ಬ್ಯಾಂಕ್​ಗೆ ಆಗಿರುವ ತಪ್ಪು ಗೊತ್ತಾಗಿ, ಅದಾಗಲೇ ಹಣವನ್ನು ಹಿಂಪಡೆದಿದ್ದ ದಾಸ್​ನನ್ನು ಹಿಂಪಡೆಯುವಂತೆ ಕೇಳಿದ್ದಾರೆ.

“ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಪ್ರಕಾರ, ಪದೇ ಪದೇ ನೋಟಿಸ್ ನೀಡಿದರೂ ಹಣವನ್ನು ಹಿಂದಿರುಗಿಸಲು ದಾಸ್ ನಿರಾಕರಿಸಿದ್ದಾನೆ. ಈ ಹಣವನ್ನು ಪಿಎಂ ಮೋದಿ ಕಳುಹಿಸಿದ್ದಾರೆ ಎಂದು ದಾಸ್ ವಾದ ಮಾಡಿದ್ದಾನೆ. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ. ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ,” ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

2014ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿಯವರು, “ಒಂಂದು ವೇಳೆ ವಿದೇಶದಲ್ಲಿ ಇರುವ ಭಾರತೀಯರ ಕಪ್ಪು ಹಣವನ್ನು ಭಾರತಕ್ಕೆ ವಾಪಸ್​ ತಂದಲ್ಲಿ ಪ್ರತಿ ಬ್ಯಾಂಕ್​ ಖಾತೆಗೆ 15 ಲಕ್ಷ ರೂಪಾಯಿ ಹಾಕಬಹುದು,” ಎಂದು ಕಾಳಧನದ ಅಗಾಧತೆ ಬಗ್ಗೆ ಹೇಳುವ ರೂಪಕವಾಗಿ ಬಳಸಿದ್ದರು. ಆ ನಂತರ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಆಗ ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಿ, ಇದು ಚುನಾವಣೆ ಜುಮ್ಲಾ (ಪದೇ ಪದೇ ಬಳಕೆ ಆಗುವಂಥದ್ದು), ಅದನ್ನು ಯಥಾವತ್ ಅರ್ಥದಲ್ಲಿ ತೆಗೆದುಕೊಳ್ಳಬಾರದು ಎಂದು ಹೇಳಿದ್ದರು.

ಕಾನೂನಿನ ಪ್ರಕಾರ, ಬ್ಯಾಂಕ್​ನಿಂದ ಒಬ್ಬರ ಖಾತೆಗೆ ತಪ್ಪಾಗಿ ವರ್ಗಾವಣೆಯಾದ ಹಣವನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಹಣಕಾಸು ಸಂಸ್ಥೆಗಳು ಅಪರಾಧಿಯಿಂದ ಮೊತ್ತವನ್ನು ವಸೂಲಿ ಮಾಡುವ ಹಕ್ಕನ್ನು ಹೊಂದಿರುತ್ತವೆ.

ಇದನ್ನೂ ಓದಿ: ರಾಘವೇಂದ್ರ ಬ್ಯಾಂಕ್ ವಂಚನೆ: ಸರ್ಕಾರವೇ ಶಾಮೀಲಾಗಿರುವ ಅನುಮಾನ ಮೂಡ್ತಿದೆ – ಪರಿಷತ್​​ನಲ್ಲಿ ಯು ಬಿ ವೆಂಕಟೇಶ್

(Person Arrested In Bihar For Refusing To Return Money Back To Bank Which Erroneously Credited To His Account)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada