ರಾಘವೇಂದ್ರ ಬ್ಯಾಂಕ್ ವಂಚನೆ: ಸರ್ಕಾರವೇ ಶಾಮೀಲಾಗಿರುವ ಅನುಮಾನ ಮೂಡ್ತಿದೆ – ಪರಿಷತ್​​ನಲ್ಲಿ ಯು ಬಿ ವೆಂಕಟೇಶ್

ಗುರು ರಾಘವೇಂದ್ರ ಬ್ಯಾಂಕ್ ಆಡಿಟ್ ವಿಳಂಬ ಮಾಡಲಾಗ್ತಿದೆ. ಸರ್ಕಾರ ಇನ್ನೂ ಯಾಕೆ ಬ್ಯಾಂಕ್ ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಸರ್ಕಾರವೇ ಇವರೊಂದಿಗೆ ಶಾಮೀಲಾಗಿದ್ದಾರೆ ಎನ್ನೋ ಅನುಮಾನ ಮೂಡ್ತಿದೆ. -ಯು ಬಿ ವೆಂಕಟೇಶ್

ರಾಘವೇಂದ್ರ ಬ್ಯಾಂಕ್ ವಂಚನೆ: ಸರ್ಕಾರವೇ ಶಾಮೀಲಾಗಿರುವ ಅನುಮಾನ ಮೂಡ್ತಿದೆ - ಪರಿಷತ್​​ನಲ್ಲಿ ಯು ಬಿ ವೆಂಕಟೇಶ್
ಗುರು ರಾಘವೇಂದ್ರ ಬ್ಯಾಂಕ್

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣ ವಿಚಾರವನ್ನು ಯು ಬಿ ವೆಂಕಟೇಶ್ ವಿಧಾನ ಪರಿಷತ್ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಅವರು ಈ ಪ್ರಕರಣದಲ್ಲಿ ಸರ್ಕಾರವೇ ಶಾಮೀಲಾಗಿದೆ ಅನ್ನೋ ಅನುಮಾನ ಮೂಡ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಗುರು ರಾಘವೇಂದ್ರ ಬ್ಯಾಂಕ್ ಆಡಿಟ್ ವಿಳಂಬ ಮಾಡಲಾಗ್ತಿದೆ. ಸರ್ಕಾರ ಇನ್ನೂ ಯಾಕೆ ಬ್ಯಾಂಕ್ ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಸರ್ಕಾರವೇ ಇವರೊಂದಿಗೆ ಶಾಮೀಲಾಗಿದ್ದಾರೆ ಎನ್ನೋ ಅನುಮಾನ ಮೂಡ್ತಿದೆ. ಆರ್ಬಿಐ ಯಾಕೆ ಇದುವರೆಗೆ ಎಕ್ಸಪರ್ಟ್ ಕಮಿಟಿ ಮಾಡಿಲ್ಲ. ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣ ಸಿಬಿಐ ಗೆ ನೀಡಬೇಕು. 1500 ಕೋಟಿ ಹಣ ವಂಚನೆಯಾಗಿದೆ. 46 ಸಾವಿರ ಜನ ಠೇವಣಿದಾರರಿಗೆ ಇದುವರಗೆ ಹಣ ಸಿಕ್ಕಿಲ್ಲ. ಬಡವರಿಗೆ ಅನ್ಯಾಯ ಆಗಿದೆ ಎನ್ನೋದು ಗೊತ್ತಿದ್ದರೂ ಸರ್ಕಾರ ಮೌನವಾಗಿ ಕುಳಿತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಆರ್‌ಬಿಐ ಇದನ್ನು ಹ್ಯಾಂಡಲ್ ಮಾಡುತ್ತಿದೆ
ಇನ್ನು ಈ ಬಗ್ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದು ಸಹಕಾರ ಇಲಾಖೆಯಿಂದ ಆಡಳಿತಾಧಿಕಾರಿ ಹಾಕಿದ್ದೆವು. ಹೈಕೋರ್ಟ್ ಅದನ್ನು ತೆಗೆದುಹಾಕಿರುವ ಹಿನ್ನೆಲೆ ಈಗ ಆರ್‌ಬಿಐ ಇದನ್ನು ಹ್ಯಾಂಡಲ್ ಮಾಡುತ್ತಿದೆ. 2013-14ರಿಂದ 2020-21ರವರೆಗಿನ ಆಡಿಟ್ ಮಾಡಲು ಹೇಳಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಜೊತೆಯೂ ಮಾತನಾಡಿದ್ದೇನೆ. ಖಾಸಗಿ ಸಿಎಗಳೂ ವಂಚನೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಇಂತಹವರನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಿದ್ದೇವೆ.

ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗಳು RBIನಡಿ ಇರುತ್ತೆ. 17 ಸಾವಿರ ಠೇವಣಿದಾರರಿಗೆ ಹಣ ವಾಪಸ್ ನೀಡಲಾಗುತ್ತಿದೆ. 1,923 ಕೋಟಿ ರೂ. ನಷ್ಟದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸಹಕಾರ ಇಲಾಖೆ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿಯೊಂದನ್ನು ಹೈ ಕೋರ್ಟ್, ರಿಸರ್ವ್ ಬ್ಯಾಂಕ್ ಗಮನಿಸುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪರಿಷತ್‌ನಲ್ಲಿ ಯು ಬಿ ವೆಂಕಟೇಶ್ರ ಅನುಮಾನಕ್ಕೆ ಸ್ಪಷ್ಟನೆ ನೀಡಿದ್ರು.

ಇದನ್ನೂ ಓದಿ: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಶುಭಸುದ್ದಿ; ನವೆಂಬರ್​ ಒಳಗೆ ಠೇವಣಿ ಮೇಲಿನ ವಿಮಾ ಹಣ ಗ್ರಾಹಕರಿಗೆ ಲಭ್ಯ

Click on your DTH Provider to Add TV9 Kannada