Radhakishan Damani: ವಿಶ್ವದ ಟಾಪ್ 100 ಶ್ರೀಮಂತರ ಪಟ್ಟಿಯೊಳಗೆ ರಾಧಾಕಿಶನ್ ದಮಾನಿಗೆ ಸ್ಥಾನ

ಡಿಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ವಿಶ್ವದ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿ ಮೌಲ್ಯ ಎಷ್ಟು ಮತ್ತಿತರ ವಿವರ ಇಲ್ಲಿದೆ.

Radhakishan Damani: ವಿಶ್ವದ ಟಾಪ್ 100 ಶ್ರೀಮಂತರ ಪಟ್ಟಿಯೊಳಗೆ ರಾಧಾಕಿಶನ್ ದಮಾನಿಗೆ ಸ್ಥಾನ
ರಾಧಾಕಿಶನ್ ದಮಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Aug 18, 2021 | 11:11 PM

ಭಾರತದ ಪ್ರಮುಖ ರೀಟೇಲ್ ಜಾಲ ಡಿಮಾರ್ಟ್​ನ ಮಾಲೀಕ ರಾಧಾಕಿಶನ್ ದಮಾನಿ 19.2 ಬಿಲಿಯನ್ ಅಮೆರಿಕನ್ ಡಾಲರ್ (1920 ಕೋಟಿ ಅಮೆರಿಕ ಡಾಲರ್- ಭಾರತದ ರೂಪಾಯಿ ಮೌಲ್ಯದಲ್ಲಿ ಇಂದಿಗೆ 1,42,639.39 ಕೋಟಿ) ನಿವ್ವಳ ಮೌಲ್ಯದೊಂದಿಗೆ ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪಟ್ಟಿಯಲ್ಲಿ ದಮಾನಿ 98ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು 117ನೇ ಸ್ಥಾನದಲ್ಲಿದ್ದರು. ಮುಕೇಶ್ ಅಂಬಾನಿ, ಗೌತಮ್ ಅದಾನಿ, ಅಜೀಂ ಪ್ರೇಮ್‌ಜಿ, ಪಲ್ಲೊಂಜಿ ಮಿಸ್ತ್ರಿ, ಶಿವ ನಾಡಾರ್ ಮತ್ತು ಲಕ್ಷ್ಮಿ ಮಿತ್ತಲ್ ಮೊದಲ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿರುವ ಇತರ ಭಾರತೀಯರು.

ಬಿಲಿಯನೇರ್ ದಮಾನಿ ಅವರು ಮುಂಬೈನ ಒಂದೇ ಕೊಠಡಿಯ ಅಪಾರ್ಟ್​ಮೆಂಟ್​ನ ಮಾರ್ವಾಡಿ ಕುಟುಂಬದಲ್ಲಿ ಬೆಳೆದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಷಯವನ್ನು ಅಧ್ಯಯನ ಮಾಡಿ, ಒಂದು ವರ್ಷದ ನಂತರ ಆ ಕೋರ್ಸ್ ಕೈಬಿಟ್ಟರು. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆಯ ಮರಣದ ನಂತರ ದಮಾನಿ ತನ್ನ ಬಾಲ್ ಬೇರಿಂಗ್ ವ್ಯಾಪಾರವನ್ನು ತೊರೆದು, ಸ್ಟಾಕ್ ಮಾರ್ಕೆಟ್ ಬ್ರೋಕರ್ ಮತ್ತು ಹೂಡಿಕೆದಾರ ಆದರು.

2000ನೇ ಇಸವಿಯಲ್ಲಿ ಸ್ಟಾಕ್ ಮಾರುಕಟ್ಟೆಯನ್ನು ತೊರೆದು, ತಮ್ಮದೇ ಹೈಪರ್ ಮಾರುಕಟ್ಟೆ ಜಾಲ ಡಿಮಾರ್ಟ್ ಅನ್ನು ಆರಂಭಿಸಿದರು. 2002ರಲ್ಲಿ ಪೊವೈಯಲ್ಲಿ ಮೊದಲ ಮಳಿಗೆಯನ್ನು ಸ್ಥಾಪಿಸಿದರು. 2010ರಲ್ಲಿ ಈ ಜಾಲದ 25 ಮಳಿಗೆಗಳನ್ನು ಹೊಂದಿತ್ತು. ಅದರ ನಂತರ ಕಂಪೆನಿಯು ವೇಗವಾಗಿ ಬೆಳೆಯಿತು ಮತ್ತು 2017ರಲ್ಲಿ ಕಂಪೆನಿಯ ಷೇರುಗಳನ್ನು ಸಾರ್ವಜನಿಕ ವಿತರಣೆ ಮಾಡಲಾಯಿತು. ದಮಾನಿ ಸಾಮಾನ್ಯವಾಗಿ ಲೋ ಪ್ರೊಫೈಲ್ ಇಟ್ಟುಕೊಳ್ಳುತ್ತಾರೆ. ವಿರಳವಾಗಿಯೂ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ. ಅಂದಹಾಗೆ ಭಾರತೀಯ ಬಿಲಿಯನೇರ್ ರಾಕೇಶ್ ಜುನ್​ಜುನ್​ವಾಲಾಗೆ ತಮ್ಮ ಸ್ಟಾಕ್ ಟ್ರೇಡಿಂಗ್ ತಂತ್ರಗಳನ್ನು ಕಲಿಸಿದ್ದರು ರಾಧಾಕಿಶನ್ ದಮಾನಿ.

ಇದನ್ನೂ ಓದಿ: Hurun Global Rich List: Hurunನಿಂದ ಭಾರತದ ಅತ್ಯಂತ ಸಿರಿವಂತರ ಟಾಪ್ 10 ಪಟ್ಟಿ ಬಿಡುಗಡೆ: ಮುಕೇಶ್ ಅಂಬಾನಿ ನಂಬರ್ ಒನ್

(DMart Owner Radhakishan Damani Now In Worlds Top 100 Rich List)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ