AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಆಸ್ತಿ ಮೌಲ್ಯ ಜೂನ್​ ತ್ರೈಮಾಸಿಕದಲ್ಲಿ ಇಳಿಕೆ

ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿನ ಪ್ರೈಮ್ ವಸತಿ ಆಸ್ತಿಗಳ ಮೌಲ್ಯದಲ್ಲಿ ಜೂನ್​ ತ್ರೈಮಾಸಿಕದಲ್ಲಿ ಇಳಿಕೆ ಆಗಿದೆ.

ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಆಸ್ತಿ ಮೌಲ್ಯ ಜೂನ್​ ತ್ರೈಮಾಸಿಕದಲ್ಲಿ ಇಳಿಕೆ
ವಿಧಾನಸೌಧ
Follow us
TV9 Web
| Updated By: Srinivas Mata

Updated on: Aug 18, 2021 | 11:52 PM

ಬೆಂಗಳೂರು, ದೆಹಲಿ ಮತ್ತು ಆರ್ಥಿಕ ರಾಜಧಾನಿ ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ನಗರಗಳಲ್ಲಿನ ಆಸ್ತಿ ಮೌಲ್ಯದಲ್ಲಿ ಇಳಿಕೆ ಆಗಿದೆ. ಅಂದಹಾಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ವಿಶ್ಲೇಷಕರು ಈ ಪಟ್ಟಿಯನ್ನು ತಯಾರು ಮಾಡುತ್ತಾರೆ. ಅವರು ತಯಾರಿಸಿದ ನಗರಗಳ ಜಾಗತಿಕ ಪಟ್ಟಿಯಲ್ಲಿ ಭಾರತದ ನಗರಗಳು ಶ್ರೇಯಾಂಕದಲ್ಲಿ ಕುಸಿದಿವೆ. ಒಂದು ವರ್ಷದ ಹಿಂದಿನ ಜೂನ್​ ತ್ರೈಮಾಸಿಕದ ಅವಧಿಗೆ ಹೋಲಿಸಿದರೆ ಈ ಬಾರಿ ಪ್ರಧಾನ ವಸತಿ ಆಸ್ತಿಗಳ ಬೆಲೆ ಇಳಿಕೆಯಾಗಿದೆ. ಮಾರ್ಚ್ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್​ ತನಕ) ಬೆಂಗಳೂರು ಆಸ್ತಿಗಳ ದರಗಳಲ್ಲಿ ಶೇ 2.7ರಷ್ಟು ಇಳಿಕೆ ಕಂಡು, 40ನೇ ಸ್ಥಾನದಿಂದ 43ನೇ ಸ್ಥಾನಕ್ಕೆ ಜಾರಿತ್ತು. ಇನ್ನು ಮುಂಬೈ ಶೇ 1.1ರಷ್ಟು ಇಳಿಕೆ ಕಂಡು,36ರಲ್ಲಿ ಇದ್ದದ್ದು 40ನೇ ಶ್ರೇಯಾಂಕಕ್ಕೆ ಕುಸಿತ ಕಂಡಿದೆ. ದರದಲ್ಲಿ ಶೇ 0.2ರಷ್ಟು ಕುಸಿಯುವುದರ ಜತೆಗೆ ದೆಹಲಿಯು ಐದು ಸ್ಥಾನ ಕೆಳಗಿಳಿದು 37ನೇ ಶ್ರೇಯಾಂಕಕ್ಕೆ ಬಂದಿದೆ. ಅಂದಹಾಗೆ ಪಟ್ಟಿಯನ್ನು ನೈಟ್ ಫ್ರಾಂಕ್ ಸಿದ್ಧಪಡಿಸಿದೆ.

ಬೆಂಗಳೂರಿನಲ್ಲಿ ಪ್ರೈಮ್ (ಪ್ರಮುಖ) ವಸತಿ ಮಾರುಕಟ್ಟೆಯ ಸರಾಸರಿ ಬೆಲೆ ಪ್ರತಿ ಚದರ ಅಡಿಗೆ 19,200 ರೂಪಾಯಿ ಮತ್ತು ಹಣಕಾಸಿನ ಬಂಡವಾಳದ ಬೆಲೆ ಚದರ ಅಡಿಗೆ ರೂ 63,697 ಮತ್ತು ದೆಹಲಿ ಪ್ರತಿ ಚದರ ಅಡಿಗೆ 33,572 ಎಂದು ವರದಿ ಹೇಳಿದೆ.

ಎಲ್ಲ ಭಾರತೀಯ ನಗರಗಳಲ್ಲೂ ಇಳಿಕೆ ಅಂತೇನೂ ಅಲ್ಲ ಆಸಕ್ತಿಕರ ಸಂಗತಿ ಏನೆಂದರೆ, ಎಲ್ಲ ಪ್ರಮುಖ ಭಾರತೀಯ ನಗರಗಳು ಜೂನ್ ತ್ರೈಮಾಸಿಕದಲ್ಲಿ ಏನೂ ಬೆಲೆ ಇಳಿಕೆ ಕಂಡಿಲ್ಲ. ಇದು ಕೊವಿಡ್-19 ಬಿಕ್ಕಟ್ಟಿನ ಎರಡನೇ ಅಲೆಯ ಭಾರೀ ಪರಿಣಾಮವನ್ನು ಕಂಡಿದೆ. ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕದ ಆಧಾರದಲ್ಲಿ ಬೆಲೆಗಳು ಸ್ಥಿರವಾಗಿವೆ. ಜಾಗತಿಕ ದೃಷ್ಟಿಕೋನದಿಂದ ಈ ತ್ರೈಮಾಸಿಕದಲ್ಲಿ 35 ನಗರಗಳ ಪ್ರಮುಖ ವಸತಿ ಬೆಲೆಗಳ ಏರಿಕೆಯನ್ನು ಕಂಡಿವೆ. ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 13 ನಗರಗಳು ಎರಡಂಕಿಯ ಬೆಳವಣಿಗೆಯನ್ನು ಸಾಧಿಸಿವೆ ಎಂದು ವರದಿ ಹೇಳಿದೆ.

“ಕೆಲವು ಮಾರುಕಟ್ಟೆಗಳಲ್ಲಿ ಪ್ರಯಾಣ ನಿಯಮಗಳನ್ನು ಸಡಿಲಗೊಳಿಸಿರುವುದು, ದೇಶೀಯ ಖರೀದಿದಾರರಿಂದ ಸುರಕ್ಷಿತ ಖರೀದಿ ಹೆಚ್ಚಳ, ಮುದ್ರಾಂಕ ಶುಲ್ಕ ವಿನಾಯಿತಿಗಳು ಮತ್ತು ಒಟ್ಟಾರೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಜೀವನಶೈಲಿಯ ಮರುಮೌಲ್ಯಮಾಪನ ಮಾಡಿದ್ದರಿಂದ ಪ್ರಮುಖ ವಿಭಾಗವು ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಬಲವಾದ ಬೆಳವಣಿಗೆಯನ್ನು ದಾಖಲಿಸಲು ಸಹಾಯ ಮಾಡಿದೆ. ಭಾರತದಲ್ಲಿನ ಪ್ರೈಮ್ ಪ್ರಾಪರ್ಟಿ ಬೆಲೆಗಳು ಈ ಜಾಗತಿಕ ಮಟ್ಟದ ಬೆಲೆಗಳ ಟ್ರೆಂಡ್​ ಅನ್ನು ಇನ್ನೂ ಹೊಂದಿಲ್ಲ,” ಎಂದು ಭಾರತೀಯ ಘಟಕದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಹೇಳಿದ್ದಾರೆ.

ಪ್ರೈಮ್ ರೆಸಿಡೆನ್ಷಿಯಲ್ ಆಸ್ತಿ ಅಂದರೆ, ಯಾವುದಾದರೂ ನಿರ್ದಿಷ್ಟ ಸ್ಥಳದಲ್ಲಿ ಎಲ್ಲರೂ ಅಪೇಕ್ಷಿಸುವಂಥ ಮತ್ತು ದುಬಾರಿ ಆಸ್ತಿ ಎಂಬ ವ್ಯಾಖ್ಯಾನ ಇದೆ. ಇದನ್ನು ಸಾಮಾನ್ಯವಾಗಿ ಪ್ರತಿ ಮಾರುಕಟ್ಟೆಯ ಟಾಪ್ ಶೇ 5ರಷ್ಟು ಎಂದು ಮೌಲ್ಯದಿಂದ ವ್ಯಾಖ್ಯಾನಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ನೆಲ ಕಚ್ಚಿದ ರಿಯಲ್​ಎಸ್ಟೇಟ್​ ಉದ್ಯಮ

(Including Bengaluru India’s Major Cities Prime Property Value Dip In June Quarter)

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ