ನವದೆಹಲಿ, ಜನವರಿ 17: ಭಾರತದಲ್ಲಿ ತಯಾರಿಸಲಾಗುತ್ತಿರುವ ಆರ್ಟಿಲರಿ ಗನ್ ಸಿಸ್ಟಂ ಅನ್ನು ಆರ್ಮೇನಿಯಾ ದೇಶ ಆಮದು ಮಾಡಿಕೊಳ್ಳುತ್ತಿದೆ. ಭಾರತದ ಎಲ್ ಅಂಡ್ ಟಿ ಹಾಗೂ ಫ್ರಾನ್ಸ್ನ ಕೆಎನ್ಡಿಎಸ್ ಸಂಸ್ಥೆಗಳು ಜಂಟಿಯಾಗಿ ಭಾರತದಲ್ಲಿ ಈ ಗನ್ಗಳನ್ನು ತಯಾರಿಸುತ್ತಿವೆ. 52-ಕ್ಯಾಬರ್ನ ಈ ಗನ್ ಸಿಸ್ಟಂ ಕ್ಲಿಷ್ಟ ವಾತಾವರಣಗಳಲ್ಲಿ ಕಾರ್ಯನಿರ್ವಹಿಸಬಲ್ಲುದು. ಭಾರತೀಯ ಸೇನೆ ಖುದ್ದಾಗಿ ಈ ಗನ್ಗಳನ್ನು ಪರೀಕ್ಷಿಸಿದೆ. ಎಲ್ಲಾ ರೀತಿಯ ಗುಣಮಟ್ಟ ಪರೀಕ್ಷೆಗಳಲ್ಲಿ ಈ ಗನ್ ತೇರ್ಗಡೆಯಾಗಿದೆ.
ಫ್ರೆಂಚ್ ಕಂಪನಿಯ ಸಹಯೋಗದೊಂದಿಗೆ ಎಲ್ ಅಂಡ್ ಟಿ ತಯಾರಿಸಿರುವ ಈ ಗನ್ನ ಆಕ್ಸಿಲಿಯರಿ ಪವರ್ ಯುನಿಟ್, ಕಂಟ್ರೋಲ್ ಪೆನಲ್, ರೋಲಿಂಗ್ ಗೇರ್ ಅಸೆಂಬ್ಲಿ ಇತ್ಯಾದಿ ಸಬ್ಸಿಸ್ಟಂಗಳೆಲ್ಲವನ್ನೂ ಭಾರತದಲ್ಲೇ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವುದು ವಿಶೇಷ.
ಇದನ್ನೂ ಓದಿ: H-1B Visa: ಅಮೆರಿಕದ ಎಚ್1ಬಿ ವೀಸಾ ಸ್ಕೀಮ್; ಇಂದಿನಿಂದ ಹೊಸ ನಿಯಮಗಳು ಜಾರಿ
ಪಕ್ಕದ ಅಜರ್ಬೈಜಾನ್ನೊಂದಿಗೆ ತಿಕ್ಕಾಟದಲ್ಲಿರುವ ಆರ್ಮೇನಿಯಾ ದೇಶ ಭಾರತದಿಂದ ಸಾಕಷ್ಟು ಮಿಲಿಟರಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈಗಾಗಲೇ ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್ಗಳು, ಆರ್ಟಿಲರಿ ಗನ್ಗಳು, ಸಾಕಷ್ಟು ಮದ್ದುಗುಂಡುಗಳು ಮೊದಲಾದವನ್ನು ಭಾರತದಿಂದ ಆರ್ಮೇನಿಯಾಗೆ ಸರಬರಾಜು ಮಾಡಲಾಗಿದೆ. ಪಿನಾಕಾ ರಾಕೆಟ್ ಲಾಂಚರ್ ಅನ್ನು ಈಗಾಗಲೇ ಆರ್ಮೇನಿಯಾ ಸೇನೆಯಲ್ಲಿ ನಿಯೋಜಿಸಲಾಗಿದೆ. ಆರ್ಟಿಲರಿ ಗನ್ ಸಿಸ್ಟಂಗಳೂ ಕೂಡ ಅಳವಡಿಕೆ ಆಗಿವೆ.
ಭಾರತದ ನೌಕಾ ಪಡೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮಧ್ಯಮ ಶ್ರೇಣಿ ಸರ್ಫೇಸ್ ಟು ಏರ್ ಮಿಸೈಲ್ಗಳನ್ನು ಪಡೆಯಲು ನಿಶ್ಚಯಿಸಿದೆ. ಈ ಸಂಬಂಧ ಭಾರತ್ ಡೈನಾಮಿಕ್ಸ್ ಲಿ ಎಂಬ ಕಂಪನಿಯೊಂದಿಗೆ 2,960 ಕೋಟಿ ರೂ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
ಇದನ್ನೂ ಓದಿ: ಹತ್ತಿ ಬೆಳೆಗಾರರಿಗೆ ಡ್ರಿಪ್ ಇರಿಗೇಶನ್ ಸಿಸ್ಟಂ; ಬಜೆಟ್ನಲ್ಲಿ 500 ಕೋಟಿ ರೂ ನೀಡಲು ಒತ್ತಾಯ
MRSAM ಕ್ಷಿಪಣಿಗಳು ನೌಕಾಪಡೆಯ ಬತ್ತಳಿಕೆಯಲ್ಲಿ ಪ್ರಬಲ ಅಸ್ತ್ರಗಳೆನಿಸಲಿವೆ. ನೆಲದಿಂದ ಆಗಸಕ್ಕೆ ಚಿಮ್ಮಿ ಹೋಗುವ ಈ ಕ್ಷಿಪಣಿಗಳು (MRSAM) ಶತ್ರುಗಳ ಫೈಟರ್ ಜೆಟ್ಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳ ದಾಳಿಗಳನ್ನು ಎದುರಿಸಲು ಸಮರ್ಥವಾಗಿವೆ. ಮುಂಬರುವ ದಿನಗಳಲ್ಲಿ ಇಂಥ ಕ್ಷಿಪಣಿಗಳ ಬಳಕೆಯನ್ನು ಭಾರತೀಯ ನೌಕಾ ಪಡೆ ಹೆಚ್ಚಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ