ಹಿರಿಯ ಉದ್ಯಮಿ ಅಶ್ವಿನ್ ದಾನಿ ನಿಧನ; ಏಷ್ಯನ್ ಪೇಂಟ್ಸ್ ಎಂಬ ಮಹಾ ಬ್ರ್ಯಾಂಡ್ ಬೆಳೆಸಿದ ಧೀಮಂತರಿವರು

|

Updated on: Sep 28, 2023 | 5:31 PM

Asian Paints Ex Chairman Ashwin Dani Passes Away: ಭಾರತದ ಅತಿದೊಡ್ಡ ಪೇಂಟ್ ಕಂಪನಿ ಏಷ್ಯನ್ ಪೇಂಟ್ಸ್ ಸಂಸ್ಥಾಪಕರ ಎರಡನೇ ತಲೆಮಾರಿಗೆ ಸೇರಿದ ಅಶ್ವಿನ್ ದಾನಿ ನಿಧನರಾಗಿದ್ದಾರೆ. 2021ರವರೆಗೂ ಕಂಪನಿಯ ಛೇರ್ಮನ್ ಆಗಿದ್ದ ದಾನಿ ಅವರು ಪತ್ನಿ ಹಾಗು ಮೂವರು ಮಕ್ಕಳನ್ನು ಅಗಲಿದ್ದಾರೆ. 79 ವರ್ಷದ ಅವರು ಕೆಲ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಛೇರ್ಮನ್ ಸ್ಥಾನದಿಂದ ನಿಯುಕ್ತಗೊಂಡ ಬಳಿಕ ಬೋರ್ಡ್​ನಲ್ಲಿ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಮುಂದುವರಿದಿದ್ದರು.

ಹಿರಿಯ ಉದ್ಯಮಿ ಅಶ್ವಿನ್ ದಾನಿ ನಿಧನ; ಏಷ್ಯನ್ ಪೇಂಟ್ಸ್ ಎಂಬ ಮಹಾ ಬ್ರ್ಯಾಂಡ್ ಬೆಳೆಸಿದ ಧೀಮಂತರಿವರು
ಅಶ್ವಿನ್ ದಾನಿ
Follow us on

ನವದೆಹಲಿ, ಸೆಪ್ಟೆಂಬರ್ 28: ಏಷ್ಯಾದ ಅತ್ಯಂತ ದೊಡ್ಡ ಪೇಂಟಿಂಗ್ ಕಂಪನಿಗಳಲ್ಲಿ ಒಂದಾದ ಏಷ್ಯನ್ ಪೇಂಟ್ಸ್​ನ ಸಹ-ಸಂಸ್ಥಾಪಕ ಅಶ್ವಿನ್ ದಾನಿ (Ashwin Dani) ಅವರು ಇಂದು ಗುರುವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯ್ಸಾಗಿತ್ತು. ಅನಾರೋಗ್ಯ ಕಾರಣದಿಂದ ಅವರು ಮೃತಪಟ್ಟಿದ್ದು, ಪತ್ನಿ ಇನ್ನಾ ದಾನಿ ಮತ್ತು ಮೂವರು ಮಕ್ಕಳನ್ನೊಳಗೊಂಡ ದೊಡ್ಡ ಕುಟುಂಬವನ್ನು ಅಗಲಿದ್ದಾರೆ.ಸ್ಟಾಕ್ ಎಕ್ಸ್​ಚೇಂಜ್​ಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಅಶ್ವಿನ್ ದಾನಿ ಮೃತಪಟ್ಟಿರುವುದನ್ನು ಏಷ್ಯನ್ ಪೇಂಟ್ಸ್ ಕಂಪನಿ (Asian Paints) ದೃಢಪಡಿಸಿದೆ.

‘ಕಂಪನಿಯ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ಅಶ್ವಿನ್ ದಾನಿ ಅವರು ಅನಾರೋಗ್ಯದಿಂದಾಗಿ ಇಂದು ಸ್ವರ್ಗಸ್ತರಾದರೆಂದು ಬಹಳ ನೋವಿನಿದ ತಿಳಿಸುತ್ತಿದ್ದೇವೆ,’ ಎಂದು ಸ್ಟಾಕ್ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಏಷ್ಯನ್ ಪೇಂಟ್ಸ್ ಆಡಳಿತ ಮಂಡಳಿ ಹೇಳಿಕೆ ನೀಡಿದೆ.

ಅಶ್ವಿನ್ ದಾನಿ ಅವರು 2009ರಿಂದಲೂ ಕಂಪನಿಯ ಆಡಳಿತ ಮಂಡಳಿಯಲ್ಲಿ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. 2018ರ8ಂದ 2021ರವರೆಗೆ ಅವರು ಏಷ್ಯನ್ ಪೇಂಟ್ಸ್ ಅಧ್ಯಕ್ಷರೂ ಆಗಿದ್ದರು. ಅವರ ಮಗ ಮಲವ್ ದಾನಿ ಅವರು ಕಂಪನಿಯ ಮಂಡಳಿಯ ನಿರ್ದೇಶಕರಲ್ಲೊಬ್ಬರಾಗಿದ್ದಾರೆ.

ಇದನ್ನೂ ಓದಿ: MS Swaminathan: ಖ್ಯಾತ ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರ ಎಂಎಸ್ ಸ್ವಾಮಿನಾಥನ್ ನಿಧನ

ಏಷ್ಯನ್ ಪೇಂಟ್ಸ್ ಕಟ್ಟಿದ ನಾಲ್ವರು ಗೆಳೆಯರು

ಏಷ್ಯನ್ ಪೇಂಟ್ಸ್ ಸ್ಥಾಪನೆಯಾಗಿದ್ದು 1942ರಲ್ಲಿ. ನಾಲ್ವರು ಗುಜರಾತಿ ಸ್ನೇಹಿತರು ಸೇರಿ ಕಟ್ಟಿದ ಕಂಪನಿ ಇದು. ಅವರಲ್ಲಿ ಒಬ್ಬರು ಅಶ್ವಿನ್ ದಾನಿ ಅವರ ತಂದೆ ಸೂರ್ಯಕಾಂತ್ ದಾನಿ. ಇವರಲ್ಲದೇ ಚಂಪಕಲಾಲ್ ಚೋಕ್ಸಿ, ಚಿಮನ್​ಲಾಲ್ ಚೋಕ್ಸಿ ಮತ್ತು ಅರವಿಂದ್ ವಕೀಲ್ ಅವರು ಈ ಕಂಪನಿಯ ಇತರ ಮೂವರು ಸಹ-ಸಂಸ್ಥಾಪಕರು. ಈ ನಾಲ್ವರು ಮೂಲ ಸಂಸ್ಥಾಪಕರ ಕುಟುಂಬ ಸದಸ್ಯರೇ ಈಗಲೂ ಆಡಳಿತದ ಚುಕ್ಕಾಣಿ ಹೊಂದಿದೆ.

ಏಷ್ಯನ್ ಪೇಂಟ್ಸ್ ಆರಂಭವಾದ 2 ವರ್ಷದ ಬಳಿಕ, ಅಂದರೆ 1944ರಲ್ಲಿ ಅಶ್ವಿನ್ ದಾನಿ ಹುಟ್ಟಿದ್ದು. ಮುಂಬೈ ಯೂನಿವರ್ಸಿಟಿಯಲ್ಲಿ ಕೆಮಿಸ್ಟ್ರಿಯಲ್ಲಿ ಬಿಎಸ್​​ಸಿ ಮತ್ತು ಅಮೆರಿಕದ ಆಕ್ರೋನ್ ಯೂನಿವರ್ಸಿಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್​ನಲ್ಲಿ ಮಾಸ್ಟರ್ಸ್ ಡಿಗ್ರೀ ಮಾಡಿ 1968ರಲ್ಲಿ ದಾನಿ ಅವರು ಏಷ್ಯನ್ ಪೇಂಟ್ಸ್ ಸೇರಿದರು.

ಇದನ್ನೂ ಓದಿ: ಟೆಕ್ ಸಿಟಿ ಬೆಂಗಳೂರಲ್ಲಿ ತಾಂತ್ರಿಕ ತೊಂದರೆಯಿಂದ ಕಾಮಿಡಿಯನ್ ಟ್ರೆವೊರ್ ನೋವಾ ಶೋ ರದ್ದು; ಮಜುಮ್ದಾರ್ ಷಾ ರಿಯಾಕ್ಷನ್ ಹೀಗಿತ್ತು

ಏಷ್ಯನ್ ಪೇಂಟ್ಸ್ 21,700 ಕೋಟಿ ಟರ್ನೋವರ್ ಕಾಣುವ ಕಂಪನಿಯಾಗಿ ಬೆಳೆಯಲು ಅಶ್ವಿನ್ ದಾನಿ ಅವರ ಕೊಡುಗೆ ಬಹಳಷ್ಟಿದೆ. ಹಲವು ಸ್ತರಗಳಲ್ಲಿ ಕಂಪನಿಯಲ್ಲಿ ಕೆಲಸ ಮಾಡಿ ಛೇರ್ಮನ್ ಸ್ಥಾನವನ್ನೂ ಅವರು ನಿಭಾಯಿಸಿದ್ದರು. ಒಂದು ಅಂದಾಜು ಪ್ರಕಾರ ಅಶ್ವಿನ್ ದಾನಿ ಅವರ ಆಸ್ತಿ ಮೌಲ್ಯ 7.7 ಬಿಲಿಯನ್ ಡಾಲರ್​ನಷ್ಟಿದೆ. 64,000 ಕೋಟಿ ರೂ ಮೌಲ್ಯದ ಸಂಪತ್ತಿನ ಒಡೆಯರಾಗಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ