AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್‌ಗೆ ಹಣ ಕಡಿತಗೊಂಡ ಮೆಸೇಜ್ ಬಂದ್ರೂ ಎಟಿಎಂನಿಂದ ಹಣ ಬಂದಿಲ್ವಾ? ಹಾಗಾದ್ರೆ ಈ ಕೆಲಸ ಮಾಡಿ

ಎಟಿಎಂನಿಂದ ಹಣ ಬಾರದೆ ಖಾತೆಯಿಂದ ಹಣ ಕಡಿತಗೊಂಡ ಮೆಸೇಜ್ ಬಂದ ಕೂಡಲೇ ಹೆಚ್ಚಿನವರು ಗಾಬರಿಯಾಗುತ್ತಾರೆ. ಮುಂದೇನು ಮಾಡುವುದು ಎಂದು ತಿಳಿಯುವುದೇ ಇಲ್ಲ, ಆದರೆ ಆರ್‌ಬಿಐ ನಿಯಮಗಳ ಪ್ರಕಾರ, ವಿಫಲವಾದ ವಹಿವಾಟಿನ ಹಣವು ಐದು ದಿನಗಳ ಒಳಗೆ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮೊಬೈಲ್‌ಗೆ ಹಣ ಕಡಿತಗೊಂಡ ಮೆಸೇಜ್ ಬಂದ್ರೂ ಎಟಿಎಂನಿಂದ ಹಣ ಬಂದಿಲ್ವಾ? ಹಾಗಾದ್ರೆ ಈ ಕೆಲಸ ಮಾಡಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Aug 20, 2026 | 5:44 PM

Share

ಮುಖ್ಯಾಂಶಗಳು

  • ಮೊಬೈಲ್‌ಗೆ ಮೆಸೇಜ್ ಬಂದ್ರೂ ಎಟಿಎಂನಿಂದ ಹಣ ಬಂದಿರಲ್ಲ
  • ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿ ಹಣ ಖಾತೆಯಿಂದ ಕಡಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ
  • ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಈ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ನೀಡಿ

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಟ್ರಾನ್ಸಾಕ್ಷನ್ ಹಾಗೂ ಎಟಿಎಂ (ATM) ಬಳಕೆ ಹೆಚ್ಚಾಗಿವೆ. ಹಣ ಡ್ರಾ ಅಥವಾ ಡೆಪಾಸಿಟ್ ಮಾಡಲು ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವವರು ತುಂಬಾ ಕಡಿಮೆ ಎಂದೇಳಬಹುದು. ಆದರೆ ಕೆಲವೊಮ್ಮೆ ಎಟಿಎಂಗೆ ಹೋದಾಗ ಹಣ ಕಡಿತಗೊಂಡ ಮೆಸೇಜ್ ಬಂದಿರುತ್ತದೆ, ಆದರೆ ಎಟಿಎಂನಿಂದ ಹಣ ಮಾತ್ರ ಬಂದಿರಲ್ಲ. ಹೀಗಾದಾಗ ಗಾಬರಿಯಾಗೋದು ಸಹಜ. ತಕ್ಷಣವೇ ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಬಗ್ಗೆ ನೀಡಿ ದೂರು ದಾಖಲಿಸಿಕೊಳ್ಳಿ.

ಎಟಿಎಂನಿಂದ ಹಣ ಬರದೇ ಮೊಬೈಲ್‌ಗೆ ಮೆಸೇಜ್ ಬಂದಿದ್ರೆ ಏನು ಮಾಡ್ಬೇಕು?

  • ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿ ಹಣ ಖಾತೆಯಿಂದ ಕಡಿತವಾಗಿದೆಯೇ ಎಂದು ಒಮ್ಮೆ ಖಚಿತಪಡಿಸಿಕೊಳ್ಳಿ.
  • ಎಟಿಎಂ ರಶೀದಿ ಸಿಕ್ಕರೆ ಬಂದರೆ ಅದನ್ನು ಜೋಪಾನವಾಗಿ ಇಡಿ. ಎಟಿಎಂನಿಂದ ಹಣ ಡ್ರಾ ಮಾಡಿದ ದಿನ, ಸಮಯ, ಎಟಿಎಂ ಸ್ಥಳ ಹಾಗೂ ನಿಮ್ಮ ಕಾರ್ಡ್ ನಂಬರ್ ಗಮನಿಸಿಕೊಳ್ಳಿ.
  • ನಿಮ್ಮ ಬ್ಯಾಂಕ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ದೂರು ದಾಖಲಿಸಿ. ಅಥವಾ ಬ್ಯಾಂಕ್ ಶಾಖೆಗೆ ಹೋಗಿ ಈ ಬಗ್ಗೆ ಮಾಹಿತಿ ನೀಡಿ.
  • ಈ  ಹಣಕಾಸು ವಹಿವಾಟು ನಡೆದ ಐದು ದಿನಗಳೊಳಗೆ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಒಂದು ವೇಳೆ ವಿಳಂಬವಾದರೆ ಪ್ರತಿ ದಿನಕ್ಕೆ ಬ್ಯಾಂಕ್ ಪರಿಹಾರವಾಗಿ 100 ರೂ ನೀಡುತ್ತವೆ.

ಇದನ್ನೂ ಓದಿ: ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಎಟಿಎಂನಿಂದ ಹಣ ಬರದೇ ಹಣ ಕಡಿತಗೊಂಡ ಬಗ್ಗೆ ಮೊಬೈಲ್ ಗೆ ಮೆಸೇಜ್ ಬರುವುದು ಯಾಕೆ?

ಉತ್ತರ: ಬ್ಯಾಂಕ್ ಸರ್ವರ್ ನಿಮ್ಮ ಖಾತೆಯಿಂದ ಹಣ ಕಡಿತಗೊಳಿಸುವುದನ್ನು ಯಶಸ್ವಿ ಎಂದು ಮೊದಲೇ ದಾಖಲಿಸುತ್ತದೆ. ಆದರೆ, ಎಟಿಎಂ ಮೆಷಿನ್‌ನಲ್ಲಿ ತಾಂತ್ರಿಕ ಅಥವಾ ಯಂತ್ರದ ಸಮಸ್ಯೆ ಎದುರಾಗಿ ಹಣ ಬರುವುದಿಲ್ಲ.

ಪ್ರಶ್ನೆ: ಎಟಿಎಂನಿಂದ ಹಣ ಬರದೇ ಹಣ ಕಡಿತಗೊಂಡ ಬಗ್ಗೆ ಮೆಸೇಜ್ ಬಂದರೆ ಏನು ಮಾಡಬೇಕು?

ಉತ್ತರ: ಎಟಿಎಂನಲ್ಲಿ ಹಣ ಬರದೇ ಹಣ ಕಡಿತಗೊಂಡ ಬಗ್ಗೆ ಮೆಸೇಜ್ ಬಂದರೆ

ಪ್ರಶ್ನೆ: ಹಣಕಾಸು ವಹಿವಾಟು ನಡೆದ ಎಷ್ಟು ದಿನಗಳೊಳಗೆ ಹಣ ಖಾತೆಗೆ ಜಮಾ ಆಗುತ್ತದೆ?

ಉತ್ತರ: ಹಣಕಾಸು ವಹಿವಾಟು ನಡೆದ ಐದು ದಿನಗಳೊಳಗೆ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು