ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು
ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ಹಣ ಡೆಪಾಸಿಟ್ ಅಥವಾ ಡ್ರಾ ಮಾಡುವವರು ತುಂಬಾನೇ ಕಡಿಮೆ. ಎಟಿಎಂಗೆ ಹೋದ್ರೆ ಈ ಕೆಲಸವು ಕ್ಷಣಾರ್ಧದಲ್ಲಿಯೇ ಮುಗಿದು ಹೋಗುತ್ತದೆ. ಆದರೆ ಇದರ ಜತೆಗೆ ಎಟಿಎಂನಲ್ಲೇ ಮಿನಿ ಸ್ಟೇಟ್ಮೆಂಟ್, ಪಿನ್ ಬದಲಾವಣೆ, ಬಿಲ್ ಪಾವತಿ ಸೇರಿದಂತೆ ಹೀಗೆ ಇನ್ನಿತ್ತರ ಕೆಲಸಗಳನ್ನು ದಿನದ 24 ಗಂಟೆಯೂ ಸುಲಭವಾಗಿ ಮಾಡಬಹುದು, ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಎಟಿಎಂನಲ್ಲಿ ಹಣ ಪಡೆಯಲು ಮಾತ್ರವಲ್ಲ ಇನ್ನಿತ್ತರ ಪ್ರಯೋಜನಗಳಿವೆ
- ಎಟಿಎಂಗಳಲ್ಲಿ ದಿನಕ್ಕೆ 20,000 ರೂಯಿಂದ 1,00,000 ರೂವರೆಗೆ ಹಣ ಪಡೆಯಬಹುದು
- ಎಟಿಎಂ ಕೆಲ ಕೆಲಸಗಳನ್ನು ಸುಲಭಗೊಳಿಸುವುದಲ್ಲದೇ ಸಮಯವನ್ನು ಉಳಿಸುತ್ತವೆ.
ಎಟಿಎಂ (ATM) ಯಂತ್ರಗಳು ಕೇವಲ ಹಣ ಪಡೆಯಲು ಹಾಗೂ ಜಮಾ ಮಾಡ್ಬಹುದು ಮಾತ್ರ ಅಂದುಕೊಂಡ್ರಾ, ನೀವು ತಪ್ಪು ತಿಳಿದುಕೊಂಡಿದ್ದೀರಾ. ಎಟಿಎಂನ್ನು ಬ್ಯಾಂಕ್ ಖಾತೆಯ (Bank Account) ಬಾಕಿ ಪರಿಶೀಲನೆ, ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಪಿನ್ ಬದಲಾವಣೆ ಸೇರಿದಂತೆ ಅನೇಕ ಪ್ರಮುಖ ಬ್ಯಾಂಕಿಂಗ್ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇದು ನಿಮ್ಮ ಈ ಕೆಲಸಗಳನ್ನು ಸುಲಭಗೊಳಿಸುವುದಲ್ಲದೆ ಸಮಯವನ್ನು ಉಳಿಸುತ್ತದೆ.
ಎಟಿಎಂನಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡ್ಬಹುದು?
ಹಣ ವಿಥ್ ಡ್ರಾ: ನೀವು ದಿನದ 24 ಗಂಟೆಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ಪಡೆಯಬಹುದು.
ಹಣ ಠೇವಣಿ: ಆಧುನಿಕ ಎಟಿಎಂ ಯಂತ್ರಗಳ ಮೂಲಕ ನೇರವಾಗಿ ಖಾತೆಗೆ ಹಣವನ್ನು ಜಮಾ ಮಾಡಲು ಬಹುದಾಗಿದೆ. ಹಣ ಜಮಾ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.
ಮಿನಿ ಸ್ಟೇಟ್‌ಮೆಂಟ್: ನಿಮ್ಮ ಕೊನೆಯ ಕೆಲವು ವಹಿವಾಟುಗಳ ಸ್ಟೇಟ್ ಮೆಂಟ್ ಪಡೆಯಲು ಅವಕಾಶವಿದೆ.
ಬ್ಯಾಲೆನ್ಸ್ ಪರಿಶೀಲನೆ: ಖಾತೆಯಲ್ಲಿ ಎಷ್ಟು ನಗದು ಅಥವಾ ಹಣ ಉಳಿದಿದೆ ಎಂಬುದನ್ನು ಎಟಿಎಂ ಬಳಸಿ ಸ್ಕ್ರೀನ್ ಮೇಲೆ ನೋಡಬಹುದು.
ಬಿಲ್ ಪಾವತಿ: ವಿದ್ಯುತ್ ಬಿಲ್, ಮೊಬೈಲ್ ಬಿಲ್ ಮತ್ತು ವಿಮಾ ಪ್ರೀಮಿಯಂ ಪಾವತಿಗಳನ್ನು ನೇರವಾಗಿ ಎಟಿಎಂ ಮೂಲಕ ಮಾಡಬಹುದು.
ಇತರ ಕೆಲಸಗಳು: ಮೊಬೈಲ್ ಬ್ಯಾಂಕಿಂಗ್ ನೋಂದಣಿ ಹಾಗೂ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಅವಕಾಶವಿದೆ.
ಪಿನ್ ಬದಲಾವಣೆ: ನಿಮ್ಮ ಎಟಿಎಂ ಕಾರ್ಡ್‌ನ ಪಿನ್ ಸಂಖ್ಯೆಯನ್ನು ಬದಲಾಯಿಸಬಹುದು.
ಹಣ ವರ್ಗಾವಣೆ: ನಿಮ್ಮ ಖಾತೆಯಿಂದ ಅದೇ ಬ್ಯಾಂಕ್ ಖಾತೆಗೆ ಅಥವಾ ಇತರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಬಹುದು.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ನೀವು ಬ್ಯಾಂಕ್‌ನಿಂದ ಹೀಗೆ ಸಾಲ ಪಡೆಯಿರಿ
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ಎಟಿಎಂ ಇದರ ಪೂರ್ಣರೂಪವೇನು?
ಉತ್ತರ: ಎಟಿಎಂ ಎಂದರೆ ಸ್ವಯಂಚಾಲಿತ ಟೆಲ್ಲರ್ ಯಂತ್ರ.
ಪ್ರಶ್ನೆ: ಎಟಿಎಂ ಮೂಲಕ ದಿನಕ್ಕೆ ಎಷ್ಟು ಹಣವನ್ನು ಪಡೆಯಬಹುದು?
ಉತ್ತರ: ಎಟಿಎಂಗಳಲ್ಲಿ ದಿನಕ್ಕೆ 20,000 ರೂಯಿಂದ 1,00,000 ರೂವರೆಗೆ ಹಣ ಪಡೆಯಬಹುದು.
ಪ್ರಶ್ನೆ: ಎಟಿಎಂನ ಪ್ರಯೋಜನಗಳೇನು?
ಉತ್ತರ: ಎಟಿಎಂನಿಂದ ನಗದು ಪಡೆಯಲು, ಬ್ಯಾಂಕ್ ಖಾತೆಯ ಬಾಕಿ ಪರಿಶೀಲಿಸಲು, ಹಣ ವರ್ಗಾವಣೆ, ಬಿಲ್ ಪಾವತಿ, ಪಿನ್ ಬದಲಾವಣೆ ಹೀಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:25 pm, Sun, 16 August 26




