Sign In

By signing in or creating an account, you agree with Associated Broadcasting Company's Terms & Conditions and Privacy Policy.

GST ಆಗಸ್ಟ್ ತಿಂಗಳಲ್ಲಿ ₹1,43,612 ಕೋಟಿ ಜಿಎಸ್​​ಟಿ ಸಂಗ್ರಹ, 2021ರ ಆಗಸ್ಟ್​​ಗೆ ಹೋಲಿಸಿದರೆ ಶೇ.28 ರಷ್ಟು ಹೆಚ್ಚಳ

ಇಂದು (ಗುರುವಾರ) ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಆಗಸ್ಟ್ ಜಿಎಸ್‌ಟಿ ₹ 1,43,612 ಕೋಟಿ. ಅದರಲ್ಲಿ ಸಿಜಿಎಸ್‌ಟಿ ₹ 24,710 ಕೋಟಿ, ಎಸ್‌ಜಿಎಸ್‌ಟಿ ₹ 30,951 ಕೋಟಿ, ಐಜಿಎಸ್‌ಟಿ ₹ 77,782 ಕೋಟಿ...

GST ಆಗಸ್ಟ್ ತಿಂಗಳಲ್ಲಿ ₹1,43,612 ಕೋಟಿ ಜಿಎಸ್​​ಟಿ ಸಂಗ್ರಹ, 2021ರ ಆಗಸ್ಟ್​​ಗೆ ಹೋಲಿಸಿದರೆ ಶೇ.28 ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 01, 2022 | 2:17 PM

ಆಗಸ್ಟ್ 2022 ರಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​​ಟಿ (GST) ಆದಾಯವು ಹಿಂದಿನ ವರ್ಷದಿಂದ ಶೇ 28 ರಷ್ಟು ಹೆಚ್ಚಳವಾಗಿದೆ. ಇಂದು (ಗುರುವಾರ) ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಆಗಸ್ಟ್ ಜಿಎಸ್‌ಟಿ ₹ 1,43,612 ಕೋಟಿ. ಅದರಲ್ಲಿ ಸಿಜಿಎಸ್‌ಟಿ ₹ 24,710 ಕೋಟಿ, ಎಸ್‌ಜಿಎಸ್‌ಟಿ ₹ 30,951 ಕೋಟಿ, ಐಜಿಎಸ್‌ಟಿ ₹ 77,782 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹ 42,067 ಕೋಟಿ ಸೇರಿದಂತೆ) ಮತ್ತು ಸೆಸ್ ₹ 10,168 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹ 1,018 ಕೋಟಿ ಸೇರಿದಂತೆ) ಆಗಿದೆ. ಆಗಸ್ಟ್ 2022 ರ ಆದಾಯವು ಕಳೆದ ವರ್ಷದ ₹ 1,12,020 ಕೋಟಿಗಳ ಜಿಎಸ್‌ಟಿ ಆದಾಯಕ್ಕಿಂತ ಶೇ 28 ಹೆಚ್ಚಾಗಿದೆ.ಸತತ ಆರು ತಿಂಗಳಿನಿಂದ ಮಾಸಿಕ ಜಿಎಸ್‌ಟಿ ಆದಾಯ ₹ 1.4 ಲಕ್ಷ ಕೋಟಿಗಿಂತ ಹೆಚ್ಚಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಸ್ಟ್ 2022 ರವರೆಗಿನ ಜಿಎಸ್‌ಟಿ ಆದಾಯದ ಬೆಳವಣಿಗೆಯು ಶೇ 33 ಆಗಿದೆ. ಈ ಹಿಂದೆ ಕೌನ್ಸಿಲ್ ತೆಗೆದುಕೊಂಡ ವಿವಿಧ ಕ್ರಮಗಳ ಸ್ಪಷ್ಟ ಪರಿಣಾಮ ಇದಾಗಿದೆ. ಆರ್ಥಿಕ ಚೇತರಿಕೆಯೊಂದಿಗೆ ಉತ್ತಮವಾದ ವರದಿಯು ಸ್ಥಿರವಾದ ಆಧಾರದ ಮೇಲೆ ಜಿಎಸ್ಟಿ ಆದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಆಗಸ್ಟ್‌ನಲ್ಲಿ ಸರ್ಕಾರವು ಸಿಜಿಎಸ್‌ಟಿಗೆ ₹ 29,524 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ₹ 25,119 ಕೋಟಿಯನ್ನು ಐಜಿಎಸ್‌ಟಿಯಿಂದ ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ ಆಗಸ್ಟ್ 2022 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಜಿಎಸ್‌ಟಿಗಾಗಿ ₹ 54,234 ಕೋಟಿ ಮತ್ತು ಎಸ್‌ಜಿಎಸ್‌ಟಿ ಗಾಗಿ ₹ 56,070 ಕೋಟಿ ಆಗಿದೆ.

ತಿಂಗಳಿನಲ್ಲಿ, ಸರಕುಗಳ ಆಮದು ಆದಾಯವು ಶೇ57 ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ 19 ಹೆಚ್ಚಾಗಿದೆ.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ವರ್ಷದಿಂದ ವರ್ಷಕ್ಕೆ ಶೇ 13.5 ರಷ್ಟು ವಿಸ್ತರಿಸಿದೆ ಎಂದು ಬುಧವಾರ ಬಿಡುಗಡೆಯಾದ ಡೇಟಾ ತೋರಿಸಿದೆ. ಆದರೆ ಮುಂದಿನ ತ್ರೈಮಾಸಿಕಗಳಲ್ಲಿ ಹೆಚ್ಚಿನ ಬಡ್ಡಿದರಗಳು ಮತ್ತು ಜಾಗತಿಕ ನಿಧಾನಗತಿಯು ದೇಶೀಯ ಆರ್ಥಿಕ ಚಟುವಟಿಕೆಯನ್ನು ನಿಧಾನವಾಗಿಸುವುದರಿಂದ ಬೆಳವಣಿಗೆಯು ಆವೇಗವನ್ನು ಕಳೆದುಕೊಳ್ಳುತ್ತದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ತಿಂಗಳು 50 ಬೇಸಿಸ್ ಪಾಯಿಂಟ್‌ಗಳನ್ನು ಒಳಗೊಂಡಂತೆ ಮೇ ತಿಂಗಳಿನಿಂದ ಅದರ ಬೆಂಚ್‌ಮಾರ್ಕ್ ರೆಪೊ ದರವನ್ನು 140 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

Published On - 1:28 pm, Thu, 1 September 22

ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ