Patanajali: ಭಾರತದ ಪತಂಜಲಿ ಸಂಸ್ಥೆಗೆ ಜಾಗತಿಕ ಗರಿಮೆ; ಡಬ್ಲ್ಯುಸಿಒದಿಂದ ಅಂತಾರಾಷ್ಟ್ರೀಯ ಎಇಒ ಪ್ರಮಾಣಪತ್ರ

Patanali Foods among few Indian companies to have AEO Tier-2 certification: ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಪತಂಜಲಿ ಫುಡ್ಸ್ ಸಂಸ್ಥೆಗೆ ಎಇಒ ಟಯರ್-2 ಸರ್ಟಿಫಿಕೇಶನ್ ಸಿಕ್ಕಿದೆ. ವರ್ಲ್ಡ್ ಕಸ್ಟಮ್ಸ್ ಆರ್ಗನೈಸೇಶನ್ ಇಂಥದ್ದೊಂದು ಅಂತರರಾಷ್ಟ್ರೀಯ ಪ್ರಮಾಣಪತ್ರವನ್ನು ಪತಂಜಲಿ ಸಂಸ್ಥೆಗೆ ನೀಡಿದೆ. ಜಾಗತಿಕ ವ್ಯಾಪಾರದಲ್ಲಿ ವಿಶ್ವಾಸಾರ್ಯವೆನಿಸಿರುವ ಕಂಪನಿಗಳಿಗೆ ಈ ಸರ್ಟಿಫಿಕೇಶನ್ ನೀಡಲಾಗುತ್ತದೆ.

Patanajali: ಭಾರತದ ಪತಂಜಲಿ ಸಂಸ್ಥೆಗೆ ಜಾಗತಿಕ ಗರಿಮೆ; ಡಬ್ಲ್ಯುಸಿಒದಿಂದ ಅಂತಾರಾಷ್ಟ್ರೀಯ ಎಇಒ ಪ್ರಮಾಣಪತ್ರ
ಪತಂಜಲಿ

Updated on: Aug 20, 2025 | 12:50 PM

ನವದೆಹಲಿ, ಆಗಸ್ಟ್ 20: ಭಾರತದಲ್ಲಿ ಬಹಳ ವೇಗವಾಗಿ ಎಫ್​ಎಂಸಿಜಿ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿರುವ ಪತಂಜಲಿ ಫುಡ್ಸ್ ಸಂಸ್ಥೆ (Patanjali) ಈಗ ಅಂತಾರಾಷ್ಟ್ರೀಯ ಸ್ಥಾನಮಾನ ಪಡೆದಿದೆ. ಪತಂಜಲಿ ಫುಡ್ಸ್​ಗೆ ಅಧಿಕೃತ ಆರ್ಥಿಕ ಆಪರೇಟರ್ (AEO- Authorized Economic Operator) ಟಯರ್-2 ಸರ್ಟಿಫಿಕೇಟ್ ಸಿಕ್ಕಿದೆ. ವಿಶ್ವ ಕಸ್ಟಮ್ಸ್ ಆರ್ಗನೈಸೇಶನ್ (WCO- World Customs Organization) ಮತ್ತು ಹಣಕಾಸು ಸಚಿವಾಲಯದ ಕಸ್ಟಮ್ಸ್ ವಿಭಾಗವು ಪತಂಜಲಿಗೆ ಈ ಅಂತಾರಾಷ್ಟ್ರೀಯ ಪ್ರಮಾಣ ಪತ್ರ ಕೊಟ್ಟಿವೆ.

ಪತಂಜಲಿ ಫೂಡ್ಸ್ ಸಂಸ್ಥೆ ಈ ಸುದ್ದಿಯನ್ನು ಹಂಚಿಕೊಂಡಿದೆ. ಈ ರೀತಿಯ ಎಇಒ ಸರ್ಟಿಫಿಕೇಶನ್ ಪಡೆದಿರುವ ಕೆಲವೇ ಭಾರತೀಯ ಉದ್ಯಮಗಳ ಸಾಲಿಗೆ ಪತಂಜಲಿ ಸೇರಿದೆ. ಈ ಸರ್ಟಿಫಿಕೇಟ್ ಪಡೆದಿರುವ ಎಫ್​ಎಂಸಿಜಿ ಕಂಪನಿಗಳ ಸಂಖ್ಯೆ ಇನ್ನೂ ಕಡಿಮೆ ಎನ್ನಲಾಗಿದೆ.

ಏನಿದು ಎಇಒ ಟಯರ್-2 ಸರ್ಟಿಫಿಕೇಶನ್?

ವಿಶ್ವದ ಸುಂಕ ಸಂಸ್ಥೆಯಿಂದ ಎಇಒ ಟಯರ್-2 ಸರ್ಟಿಫಿಕೇಟ್ ಸಿಕ್ಕಿದೆ ಎಂದರೆ ಆ ಸಂಸ್ಥೆಯು ಜಾಗತಿಕ ವ್ಯಾಪಾರದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ, ಸರಬರಾಜು ಸರಪಳಿ ಭದ್ರತೆ ಹೊಂದಿದೆ ಎಂದು ಪ್ರಮಾಣಪತ್ರ ಹೊಂದಿದಂತೆ. ಬಹಳ ಕಠಿಣ ಮಾನದಂಡಗಳನ್ನು ಮುಟ್ಟುವ ಕಂಪನಿಗಳಿಗೆ ಮಾತ್ರವೇ ಈ ಸರ್ಟಿಫಿಕೇಶನ್ ಕೊಡಲಾಗುತ್ತದೆ. ಭಾರತದ ಕೆಲವೇ ಕಂಪನಿಗಳಿಗೆ ಈ ಗೌರವ ಸಿಕ್ಕಿದೆ. ಇದರಲ್ಲಿ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಪತಂಜಲಿ ಸಂಸ್ಥೆಯೂ ಇರುವುದು ಗಮನಾರ್ಹ.

ಇದನ್ನೂ ಓದಿ: ವಾತ, ಪಿತ್ತ, ಕಫ ದೋಷಗಳು: ಬಾಬಾ ರಾಮದೇವ್​ರಿಂದ ಸುಲಭ ಪರಿಹಾರ

ಎಇಒ ಟಯರ್-2 ಸರ್ಟಿಫಿಕೇಟ್​ನಿಂದ ಏನು ಉಪಯೋಗ?

ಈ ಪ್ರಮಾಣಪತ್ರ ಪಡೆದಿರುವ ಪತಂಜಲಿ ಸಂಸ್ಥೆಗೆ 28ಕ್ಕೂ ಅಧಿಕ ಅಂತಾರಾಷ್ಟ್ರೀಯ ವ್ಯಾಪಾರ ಅನುಕೂಲತೆಗಳು ಸಿಕ್ಕಲಿವೆ. ಸುಂಕವನ್ನು ವಿಳಂಬವಾಗಿ ಪಾವತಿಸುವ ಅವಕಾಶ ಇರುತ್ತದೆ; ಬ್ಯಾಂಕ್ ಗ್ಯಾರಂಟಿಯಿಂದ ವಿನಾಯಿತಿ ಸಿಗುತ್ತದೆ; ಡೈರೆಕ್ಟ್ ಪೋರ್ಟ್ ಡೆಲಿವರಿ, ನಿರಂತರ ಕಸ್ಟಮ್ಸ್ ಕ್ಲಿಯರೆನ್ಸ್ ಸೌಲಭ್ಯ ಇತ್ಯಾದಿ ಹಲವು ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ವ್ಯಾಪಾರದ ವೇಳೆ ಪತಂಜಲಿ ಪಡೆಯಬಹುದು. ಇದರಿಂದ ಪತಂಜಲಿಯ ಜಾಗತಿಕ ವ್ಯಾಪಾರ ವಹಿವಾಟು ಹೆಚ್ಚು ಸಮರ್ಪಕವಾಗಿ ಮತ್ತು ಸುಲಲಿತವಾಗಿ ಮಾಡಲು ಸಾಧ್ಯವಾಗುತ್ತದೆ.

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಹೇಳಿಕೆ

‘ಎಇಒ ಟಯರ್-2 ಸರ್ಟಿಫಿಕೇಶನ್ ಸಿಕ್ಕರುವುದು ಪತಂಜಲಿ ಮತ್ತು ಎಲ್ಲಾ ಭಾರತೀಯರಿಗೂ ಹೆಮ್ಮೆ ಪಡುವ ವಿಷಯ. ಸ್ವದೇಶಿ ಸೆ ಸ್ವಾಭಿಮಾನ್ ಎನ್ನುವ ನಮ್ಮ ಗುರಿಯನ್ನು ಇದು ಪ್ರತಿಫಲಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಕ್ ಇನ್ ಇಂಡಿಯಾದ ಆಶಯಕ್ಕೆ ಇದು ಪೂರಕವಾಗಿದೆ. ರಾಷ್ಟ್ರನಿರ್ಮಾಣದ ನಮ್ಮ ಬದ್ಧತೆಗೆ ಸಿಕ್ಕ ಮಾನ್ಯತೆ ಇದಾಗಿದೆ’ ಎಂದು ಪತಂಜಲಿ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಹೇಳಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ Cardiotoxicity ಅಡ್ಡಪರಿಣಾಮ; ಪತಂಜಲಿಯಲ್ಲಿ ಪರಿಹಾರ

ಪತಂಜಲಿ ಸಂಸ್ಥೆಯ ಮತ್ತೊಬ್ಬ ಸಹ-ಸಂಸ್ಥಾಪಕರಾದ ಆಚಾರ್ಯ ಬಾಲಕೃಷ್ಣ ಅವರು ಎಇಒ ಟಯರ್-2 ಪ್ರಮಾಣಪತ್ರ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಸಂಸ್ಥೆಯ ಸಿಬ್ಬಂದಿ, ಗ್ರಾಹಕರು ಮತ್ತು ಪಾರ್ಟ್ನರ್​ಗಳ ಸಾಂಘಿಕ ಕೆಲಸದ ಫಲ ಇದು ಎಂದು ಅವರು ಬಣ್ಣಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ