ನವದೆಹಲಿ: ಜಾಗತಿಕ ಮಟ್ಟದಲ್ಲಿ 2022ರಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿದ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಎರಡನೇ ಸ್ಥಾನ ಪಡೆದುಕೊಂಡಿದೆ. ದೆಹಲಿಯ (Delhi) ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport) ಏಳನೇ ಸ್ಥಾನ ಪಡೆದಿರುವುದು ಪ್ರಯಾಣ ಮತ್ತು ವಿಮಾನಯಾನಕ್ಕೆ ಸಂಬಂಧಿಸಿದ ದತ್ತಾಂಶ ನಿರ್ವಹಣಾ ಕಂಪನಿ ‘ಸಿರಿಯಮ್ ಏವಿಯೇಷನ್ ಅನಾಲಿಟಿಕ್ಸ್ (Cirium Aviation Analytics)’ ವರದಿಯಿಂದ ತಿಳಿದುಬಂದಿದೆ. ವರದಿಯ ಪ್ರಕಾರ, ಬೆಂಗಳೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆದ 2,01,897 ವಿಮಾನಗಳ ಪೈಕಿ ಶೇ 84.08ರಷ್ಟು ನಿಗದಿತ ಸಮಯಕ್ಕೆ ತೆರಳಿವೆ. ದೆಹಲಿಯಿಂದ ಟೇಕಾಫ್ ಆದ 4,11,205 ವಿಮಾನಗಳ ಪೈಕಿ ಶೇಕಡಾ 81.84ರಷ್ಟು ನಿಗದಿತ ಸಮಯಕ್ಕೆ ನಿರ್ಗಮಿಸಿವೆ.
‘ಕೋವಿಡ್ ಸಾಂಕ್ರಾಮಿಕದಿಂದಾಗಿ ಹಲವು ಬಾರಿ ವಿಮಾನಯಾನ ಸಂಸ್ಥೆಗಳು ಹಿನ್ನಡೆ ಅನುಭವಿಸಿದ್ದವು. ವಿಮಾನಯಾನ ವಲಯ ಚೇತರಿಕೆ ಕಾಣುತ್ತಿದ್ದಂತೆಯೇ ಹೊಸ ಹೊಸ ಕೋವಿಡ್ ರೂಪಾಂತರಗಳು ಆತಂಕ ಸೃಷ್ಟಿಸಿದ್ದವು. ಹೀಗಾಗಿ 2022ರಲ್ಲಿ ಬೇಡಿಕೆಯಲ್ಲಿ ಹಠಾತ್ ಹೆಚ್ಚಳ ನಿರೀಕ್ಷಿಸಲು ವಿಮಾನಯಾನ ಸಂಸ್ಥೆಗಳಿಗೆ ಸಾಧ್ಯವಿರಲಿಲ್ಲ. ಅಂತಿಮವಾಗಿ 2022ರ ಕೊನೆಗಾಗುವಾಗ ಚೇತರಿಕೆ ಕಂಡಿತು’ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ITR U: ಗಡುವಿನ ಒಳಗೆ ಐಟಿಆರ್ ಸಲ್ಲಿಸಿಲ್ಲವೇ? ಅಪ್ಡೇಟ್ಗೆ ಇನ್ನೂ ಇದೆ ಅವಕಾಶ; ಆದರೆ…
ವಿಮಾನಯಾನ ಉದ್ಯಮ ಸದ್ಯ ಚೇತರಿಕೆ ಕಾಣುತ್ತಿದ್ದು, ಉದ್ಯೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2023ರಲ್ಲಿ ಇನ್ನಷ್ಟು ಚೇತರಿಕೆ ಕಾಣಲಿದೆ ಎಂದು ವರದಿ ತಿಳಿಸಿದೆ.
‘ಸಿರಿಯಮ್ ಏವಿಯೇಷನ್ ಅನಾಲಿಟಿಕ್ಸ್’ ವರದಿಯ ಪ್ರಕಾರ 2022ರಲ್ಲಿ ವಿಶ್ವದಾದ್ಯಂತ ಅತ್ಯುತ್ತಮ ನಿರ್ವಹಣೆ ತೋರಿದ 10 ವಿಮಾನ ನಿಲ್ದಾಣಗಳ ಪಟ್ಟಿ ಇಲ್ಲಿದೆ. ಯುರೋಪ್ನ ಯಾವುದೇ ವಿನಾ ನಿಲ್ದಾಣ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ