Qantas Airways: ಬೆಂಗಳೂರಿನಿಂದ ಸಿಡ್ನಿಗೆ ತಡೆರಹಿತ ವಿಮಾನ ಹಾರಾಟ! ಕ್ವಂಟಾಸ್‌ನಿಂದ ಇಂಡಿಗೊ ಸಹಯೋಗದಲ್ಲಿ ನೇರ ವಿಮಾನ
ಬೆಂಗಳೂರು: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಕ್ವಂಟಾಸ್ (Qantas Airways) ಬೆಂಗಳೂರಿನಿಂದ ಸಿಡ್ನಿಗೆ ತಡೆರಹಿತ ವಿಮಾನಗಳ ಹಾರಾಟ ನಡೆಸಿದ್ದು ಇಂಡಿಗೊ ಜೊತೆಯಲ್ಲಿ ಕೋಡ್‌ಶೇರ್ ಸಹಯೋಗವನ್ನು ಅಂತಿಮಗೊಳಿಸುತ್ತಿದ್ದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಯಾಣವನ್ನು ಸುಲಭಗೊಳಿಸಲಿದೆ. ಸೆಪ್ಟೆಂಬರ್ 14, 2022ರಿಂದ ಕ್ವಂಟಾಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಿಡ್ನಿಯ ಕಿಂಗ್ಸ್ಫೋರ್ಡ್ ಸ್ಮಿತ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಡುವೆ (Bangalore to Sydney direct flight) ವಾರಕ್ಕೆ ನಾಲ್ಕು ರಿಟರ್ನ್ ವಿಮಾನಗಳನ್ನು ತನ್ನ ಸುವಿಶಾಲ ದೇಹದ ಏರ್‌ಬಸ್ ಎ330 […]
ಬೆಂಗಳೂರು: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಕ್ವಂಟಾಸ್ (Qantas Airways) ಬೆಂಗಳೂರಿನಿಂದ ಸಿಡ್ನಿಗೆ ತಡೆರಹಿತ ವಿಮಾನಗಳ ಹಾರಾಟ ನಡೆಸಿದ್ದು ಇಂಡಿಗೊ ಜೊತೆಯಲ್ಲಿ ಕೋಡ್‌ಶೇರ್ ಸಹಯೋಗವನ್ನು ಅಂತಿಮಗೊಳಿಸುತ್ತಿದ್ದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಯಾಣವನ್ನು ಸುಲಭಗೊಳಿಸಲಿದೆ. ಸೆಪ್ಟೆಂಬರ್ 14, 2022ರಿಂದ ಕ್ವಂಟಾಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಿಡ್ನಿಯ ಕಿಂಗ್ಸ್ಫೋರ್ಡ್ ಸ್ಮಿತ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಡುವೆ (Bangalore to Sydney direct flight) ವಾರಕ್ಕೆ ನಾಲ್ಕು ರಿಟರ್ನ್ ವಿಮಾನಗಳನ್ನು ತನ್ನ ಸುವಿಶಾಲ ದೇಹದ ಏರ್‌ಬಸ್ ಎ330 ವಿಮಾನದ ಮೂಲಕ ಕಾರ್ಯಾಚರಿಸಲಿದೆ (Indigo Airlines).
ಇವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಭಾರತದ ನಡುವೆ ಯಾವುದೇ ವಿಮಾನ ನಿಲ್ದಾಣ ಹಾರಾಟ ನಡೆಸುತ್ತಿರುವ ಮೊದಲ ನೇರ ವಿಮಾನವಾಗಿದ್ದು ಸುಮಾರು ಮೂರು ಗಂಟೆಗಳಷ್ಟು ಕಡಿತಗೊಳಿಸಿ ಬೆಂಗಳೂರು ಮತ್ತು ಸಿಡ್ನಿ ನಡುವೆ ಅತ್ಯಂತ ವೇಗದ ಸಂಚಾರ ನೀಡುತ್ತಿದೆ. ಬೆಂಗಳೂರಿನ ಸಮುದಾಯವು ವಾಣಿಜ್ಯ ಪ್ರಯಾಣ ಮತ್ತು ಬಂಧುಮಿತ್ರರನ್ನು ಭೇಟಿಯಾಗುವ ಬಲವಾದ ಸಂಪರ್ಕಗಳನ್ನು ಆಸ್ಟೆçÃಲಿಯಾದೊಂದಿಗೆ ಹೊಂದಿದ್ದಾರೆ. ತನ್ನ ಸುಂದರ ಸಮುದ್ರತೀರಗಳು ಮತ್ತು ಸಿಡ್ನಿ ಹಾರ್ಬರ್ ಬ್ರಿಡ್ಜ್ ಮತ್ತು ಒಪೇರಾ ಹೌಸ್‌ಗಳಂತಹ ಆಕರ್ಷಕ ತಾಣಗಳಿಗೆ ಹೆಸರಾಗಿರುವ ಸಿಡ್ನಿ ವಿಶ್ವದ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಹೊಸ ಮಾರ್ಗಕ್ಕೆ ಪ್ರಶಸ್ತಿ ಪುರಸ್ಕೃತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬೆಂಬಲವಿದೆ.
ಕ್ವಂಟಾಸ್ ಮೆಲ್ಬೋರ್ನ್ ಮತ್ತು ದೆಹಲಿ ನಡುವೆ ವಾರಕ್ಕೆ ಐದು ವಿಮಾನಗಳ ಹಾರಾಟ ಮುಂದುವರಿಸುವ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಗೆ ನೇರ ವಿಮಾನಗಳನ್ನು ಒದಗಿಸುತ್ತಿರುವ ಏಕೈಕ ವಿಮಾನಯಾನ ಸಂಸ್ಥೆಯಾಗಿಸಿದೆ. ಕ್ವಂಟಾಸ್ ಮತ್ತು ಇಂಡಿಗೊ ನಡುವಿನ ಕೋಡ್‌ಶೇರ್ ಒಪ್ಪಂದದಿಂದ ಪ್ರಯಾಣಿಕರು 50ಕ್ಕೂ ಹೆಚ್ಚು ಭಾರತದ ನಗರಗಳಿಗೆ ಸುಧಾರಿಸಿದ ಒನ್-ಸ್ಟಾಪ್ ಅಕ್ಸೆಸ್ ಅನ್ನು ಸಿಡ್ನಿಯಿಂದ ಪಡೆಯಬಹುದು.
ಅಂತಿಗೊಂಡ ನಂತರ ಗ್ರಾಹಕರಿಗೆ ಪ್ರಮುಖ ನಗರಗಳಿಗೆ ಮಾತ್ರವಲ್ಲದೆ ಪುಣೆ ಮತ್ತು ಗೋವಾ ರೀತಿಯ ಟೈಯರ್ 2 ನಗರಗಳಿಗೂ ಅನುಕೂಲವಿರುತ್ತದೆ. ಪ್ರಸ್ತಾವಿತ ಹೊಸ ಕೋಡ್‌ಶೇರ್ ಒಪ್ಪಂದವು ಬೆಂಗಳೂರು, ದೆಹಲಿ ಅಥವಾ ಸಿಂಗಪೂರ್ ಮೂಲಕ ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ರಾಜಧಾನಿ ನಗರಗಳಿಗೆ ತಡೆರಹಿತವಾಗಿ ಸಂಪರ್ಕ ಕಲ್ಪಿಸುತ್ತದೆ. ಕ್ವಂಟಾಸ್ ಆಸ್ಟ್ರೇಲಿಯಾದ ಮುಂಚೂಣಿಯ ವಿಮಾನಯಾನ ಸಂಸ್ಥೆಯಾಗಿದ್ದು ಎಲ್ಲ ಗ್ರಾಹಕರೂ ಉಚಿತ ಆಹಾರ, ಪಾನೀಯ, ಬ್ಯಾಗೇಜ್ ಮತ್ತು ವಿಮಾನದೊಳಗಿನ ಮನರಂಜನೆ ಪಡೆಯುತ್ತಾರೆ.
ಈ ಪ್ರಸ್ತಾವಿತ ಒಪ್ಪಂದದ ಪ್ರಕಾರ ಕ್ವಂಟಾಸ್ ಫ್ರೀಕ್ವೆಂಟ್ ಫ್ಲೈರ‍್ಸ್ ಸೇರಿಕೊಳ್ಳುವ ಗ್ರಾಹಕರು ಇಂಡಿಗೊ ವಿಮಾನಗಳನ್ನು ಸಂಪರ್ಕಿಸುವಾಗ ಪಾಯಿಂಟ್‌ಗಳನ್ನು ಗಳಿಸುತ್ತಾರೆ ಮತ್ತು ಅವುಗಳನ್ನು ಮರುಬಳಕೆ ಮಾಡುತ್ತಾರೆ(ಕ್ಯೂಎಫ್ ಕೋಡ್ ಮಾತ್ರ) ಮತ್ತು ಇಂಡಿಗೊ ಕ್ವಂಟಾಸ್ ಫ್ರೀಕ್ವೆಂಟ್ ಫ್ಲೈಯರ್ ಅನುಕೂಲಗಳನ್ನು ಟೈರ‍್ಡ್ ಸದಸ್ಯರಿಗೆ(ಸಿಲ್ವರ್, ಗೋಲ್ಡ್, ಪ್ಲಾಟಿನಂ ಮತ್ತು ಪ್ಲಾಟಿನಂ ಒನ್) ಮಾನ್ಯತೆ ನೀಡುತ್ತದೆ ಅದರಲ್ಲಿ ಪ್ರಯಾರಿಟಿ ಚೆಕ್-ಒನ್, ಹೆಚ್ಚುವರಿ ಬ್ಯಾಗೇಜೆ ಅಲೋಯೆನ್ಸ್ ಮತ್ತು ಪ್ರಯಾರಿಟಿ ಬ್ಯಾಗೇಜ್ ಒಳಗೊಂಡಿರುತ್ತದೆ.
ಇಂಡಿಗೊದಲ್ಲಿ ಸಂಚರಿಸುವ ಕ್ವಂಟಾಸ್ ಗ್ರಾಹಕರು ಇಡೀ ಪ್ರಯಾಣದಾದ್ಯಂತ ಅದೇ ಬ್ಯಾಗೇಜ್ ಅಲೋಯೆನ್ಸ್ ಹಾಗೂ ಉಚಿತ ಆಹಾರ ಮತ್ತು ಪಾನೀಯಗಳನ್ನು ಆನಂದಿಸುತ್ತಾರೆ. ಈ ಸಹಯೋಗವು ಜೆಟ್‌ಸ್ಟಾರ್ ಗ್ರಾಹಕರಿಗೆ ವಿಸ್ತರಿಸಲಿದ್ದು ಅವರು ಜೆಟ್‌ಸ್ಟಾರ್.ಕಾಂನಲ್ಲಿ ಜೆಟ್‌ಸ್ಟಾರ್ ಕನೆಕ್ಟ್ ಪ್ಲಾಟ್‌ಫಾರಂ ಮೂಲಕ ಇಂಡೊಗೊ ಸರ್ವೀಸಸ್‌ನಲ್ಲಿ ಕನೆಕ್ಟಿಂಗ್ ವಿಮಾನಗಳನ್ನು ಬುಕ್ ಮಾಡಬಹುದು ಇದು ಏಪ್ರಿಲ್ ಅಂತ್ಯದಲ್ಲಿ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ. ಇಂಡಿಗೊ ತನ್ನ ಗ್ರಾಹಕರಿಗೆ ಭವಿಷ್ಯದಲ್ಲಿ ಕ್ವಂಟಾಸ್ ಮತ್ತು ಜೆಟ್‌ಸ್ಟಾರ್‌ಗಳ ಸಂಪರ್ಕಕ್ಕೆ ರೆಸಿಪ್ರೊಕಲ್ ಅನುಕೂಲಗಳನ್ನು ಪರಿಚಯಿಸಲಿದೆ. ಸಿಡ್ನಿ-ಬೆಂಗಳೂರು ವಿಮಾನಗಳ ಟಿಕೆಟ್ ಮಾರಾಟ ಇಂದಿನಿಂದ ಚಾಲನೆ ದೊರೆಯಲಿದ್ದು ರಿಟರ್ನ್ ₹78,380 ಬೆಲೆ ಪ್ರಾರಂಭಗೊಳ್ಳುತ್ತದೆ. ಕ್ವಂಟಾಸ್ ಗ್ರೂಪ್ ಸಿಇಒ ಅಲನ್ ಜಾಯ್ಸ್ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ವಿಮಾನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಅದಕ್ಕೆ ಎರಡೂ ದೇಶಗಳು ತಮ್ಮ ಗಡಿಗಳನ್ನು ತೆರೆದಿರುವುದು ಕಾರಣ ಎಂದರು.
ಮೊಟ್ಟಮೊದಲ ಬಾರಿಗೆ ದಕ್ಷಿಣ ಭಾರತವು ಆಸ್ಟ್ರೇಲಿಯಾಗೆ ನೇರ ಸಂಪರ್ಕ ಹೊಂದಿದ್ದು ಅದು ಎರಡೂ ದೇಶಗಳ ನಡುವೆ ಪ್ರಯಾಣವನ್ನು ಸರಳ, ಹೆಚ್ಚು ಅನುಕೂಲಕರ ಮತ್ತು ವೇಗವಾಗಿಸುತ್ತದೆ. ಆಸ್ಟ್ರೇಲಿಯಾ-ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಸಹಿಯು ಪ್ರಯಾಣದ ಬೇಡಿಕೆ ಹೆಚ್ಚಿಸುವಲ್ಲಿ ಉತ್ತೇಜಕವಾಗಿದ್ದು ಆಸ್ಟ್ರೇಲಿಯಾ ಮತ್ತು ಭಾರದ ಒಂದು ನೂರು ಕೋಟಿಗೂ ಹೆಚ್ಚು ಜನಸಂಖ್ಯೆಯ ನಡುವೆ ವ್ಯಾಪಾರ ಮತ್ತು ಹೂಡಿಕೆಯ ಸಂಪರ್ಕಗಳು ವಿಸ್ತರಿಸಲಿವೆ. ಬೆಂಗಳೂರಿನಿಂದ ಸಿಡ್ನಿಗೆ ನಮ್ಮ ಹೊಸ ನೇರ ವಿಮಾನಗಳು ಇಂಡಿಗೊದೊಂದಿಗೆ ಪ್ರಸ್ತಾವಿತ ಕೋಡ್‌ಶೇರ್ ಜೊತೆಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಹಲವು ಜನರು ಪ್ರಯಾಣಿಸುವ ಸಾಧ್ಯತೆಯನ್ನೇ ಮರು ರೂಪಿಸಲಿದೆ.
ಕ್ವಂಟಾಸ್ ಅನಿಯಮಿತ ವಿಮಾನದ ದಿನಾಂಕಗಳ ಬದಲಾವಣೆಯೊಂದಿಗೆ ಅನುಕೂಲಕರ ಹಾರಾಟದ ನೀತಿ ಹೊಂದಿದ್ದು ಜೂನ್ 30ಕ್ಕಿಂತ ಮುನ್ನ ಬುಕ್ ಮಾಡಲಾದ ಡಿಸೆಂಬರ್ 31ರವರೆಗೆ ಪ್ರಯಾಣಿಸಲು ಕಾಯ್ದಿರಿಸಿದ ವಿಮಾನಗಳಿಗೆ ಅನ್ವಯಿಸುತ್ತದೆ (ದರದ ವ್ಯತ್ಯಾಸ ಅನ್ವಯಿಸಬಹುದು). ಇಂಡಿಗೊದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀ ರೊನೊಜೊಯ್ ದತ್ತಾ: ಆಸ್ಟ್ರೇಲಿಯಾದ ಮುಂಚೂಣಿಯ ವಿಮಾನಯಾನ ಸಂಸ್ಥೆ ಕ್ವಂಟಾಸ್ ಏರ್‌ವೇಸ್ ಜೊತೆಯಲ್ಲಿ ಆಸ್ಟ್ರೇಲಿಯಾ-ಇಂಡಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ ಭಾಗವಾಗಿ ಪ್ರಸ್ತಾವಿತ ಕೋಡ್‌ಶೇರ್ ಸಹಯೋಗ ಪ್ರಕಟಿಸಲು ಬಹಳ ಸಂತೋಷ ಹೊಂದಿದ್ದೇವೆ. ಒಮ್ಮೆ ಅಂತಿಮಗೊಂಡ ನಂತರ ಈ ಸಹಯೋಗವು ಕ್ವಂಟಾಸ್ ಗ್ರಾಹಕರಿಗೆ ಬೆಂಗಳೂರು ಮೂಲಕ ಇಂಡಿಗೊದಲ್ಲಿ ಬೆಂಗಳೂರು, ದೆಹಲಿ ಮತ್ತು ಸಿಂಗಪೂರ್ ಒಳಗೊಂಡು 50ಕ್ಕೂ ಹೆಚ್ಚು ವಿಶಿಷ್ಟ ನಗರಗಳಿಗೆ ಹಾರಾಟ ನಡೆಸಲು ಕ್ರಮವಾಗಿ 41, 33 ಮತ್ತು 6 ತಾಣಗಳಿಗೆ ಸಂಪರ್ಕದೊಂದಿಗೆ ಸನ್ನದ್ಧವಾಗಿಸುತ್ತದೆ. ಸದೃಢ ಸಹಯೋಗವು ಭಾರತ ಮತ್ತು ಆಸ್ಟೆçÃಲಿಯಾ ನಡುವೆ ತಡೆರಹಿತ ಕನೆಕ್ಟಿವಿಟಿ ಸೃಷ್ಟಿಸುವುದೇ ಅಲ್ಲದೆ ಎರಡೂ ರಾಷ್ಟçಗಳಿಗೆ ಮತ್ತೆ ಪ್ರವಾಸಿಗರ ಹರಿವಿನ ಮೂಲಕ ವ್ಯಾಪಾರ ಮತ್ತು ಪ್ರವಾಸೋದ್ಯಮದ ಅವಕಾಶಗಳನ್ನೂ ಸೃಷ್ಟಿಸುತ್ತದೆ ಎಂದು ನಂಬಿದ್ದೇವೆ. ನಾವು ಕ್ವಂಟಾಸ್ ಗ್ರಾಹಕರಿಗೆ ನಮ್ಮ ಸಪೂರ, ಸ್ವಚ್ಛ ಹಾರಾಟದ ಯಂತ್ರದಲ್ಲಿ ಪ್ರಯಾಣಿಸಲು ನಮ್ಮ ಸಕಾಲಿಕ, ಕೈಗೆಟುಕುವ, ವಿನಯಪೂರ್ವಕ ಮತ್ತು ತಡೆರಹಿತ ಪ್ರಯಾಣದ ಅನುಭವ ಒದಗಿಸಲು ನಿರೀಕ್ಷಿಸುತ್ತಿದ್ದೇವೆ ಎಂದರು.