Bank Holidays: ಹೊಸ ವರ್ಷಾಚರಣೆಯಿಂದ ಹಿಡಿದು ನೇತಾಜಿ ಜಯಂತಿವರೆಗೆ 15 ಬ್ಯಾಂಕ್ ರಜಾದಿನಗಳು; ಇಲ್ಲಿದೆ ಪಟ್ಟಿ

|

Updated on: Dec 29, 2024 | 4:35 PM

2025 January Bank Holidays: 2025ರ ಜನವರಿ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 15 ದಿನ ರಜೆ ಇದೆ. ಪ್ರಾದೇಶಿಕವಾರು ರಜೆಗಳು ವ್ಯತ್ಯಯವಾಗುತ್ತವೆ. ಈ 15 ರಜಾ ದಿನಗಳಲ್ಲಿ 6 ರಜೆ ಶನಿವಾರ ಮತ್ತು ಭಾನುವಾರದ್ದಾಗಿದೆ. ಕರ್ನಾಟಕದಲ್ಲಿ ಒಟ್ಟು ಎಂಟು ರಜಾ ದಿನಗಳಿವೆ. ಇದರಲ್ಲಿ ಹೊಸ ವರ್ಷಾಚರಣೆ ಮತ್ತು ಸಂಕ್ರಾಂತಿ ಹಬ್ಬದ ರಜೆಗಳೂ ಸೇರಿವೆ.

Bank Holidays: ಹೊಸ ವರ್ಷಾಚರಣೆಯಿಂದ ಹಿಡಿದು ನೇತಾಜಿ ಜಯಂತಿವರೆಗೆ 15 ಬ್ಯಾಂಕ್ ರಜಾದಿನಗಳು; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾ ದಿನ
Follow us on

ನವದೆಹಲಿ, ಡಿಸೆಂಬರ್ 29: ಆರ್​ಬಿಐ ಕ್ಯಾಲಂಡರ್ ಪ್ರಕಾರ 2025ರ ಜನವರಿ ತಿಂಗಳಲ್ಲಿ ಬ್ಯಾಂಕುಗಳಿಗೆ 15 ರಜಾ ದಿನಗಳಿವೆ. ಇದರಲ್ಲಿ ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಸೇರಿವೆ. ಸಂಕ್ರಾಂತಿ, ಗುರುಗೋವಿಂದ್ ಜಯಂತಿ, ಸುಭಾಷ್ ಚಂದ್ರ ಬೋಸ್ ಜಯಂತಿ ಮೊದಲಾದ ರಜೆಗಳಿವೆ. ಜನವರಿ 26ರಂದಿನ ಗಣರಾಜ್ಯೋತ್ಸವ ದಿನಾಚರಣೆ ಈ ವರ್ಷ ಭಾನುವಾರ ಬಿದ್ದಿದೆ. ಜನವರಿ 11ರಿಂದ 16ರವರೆಗೆ ಸತತವಾಗಿ ರಜೆ ಇದೆ.

ಕರ್ನಾಟಕದಲ್ಲಿ ಜನವರಿಯಲ್ಲಿ ಎಂಟು ದಿನ ಬ್ಯಾಂಕುಗಳು ಬಂದ್ ಆಗಿರುತ್ತವೆ. ಇದರಲ್ಲಿ ಜನವರಿ 1ರಂದು ಹೊಸ ವರ್ಷಾಚರಣೆ ಮತ್ತು ಜನವರಿ 15ರಂದು ಸಂಕ್ರಾಂತಿ ಹಬ್ಬಕ್ಕೆ ಬಿಟ್ಟರೆ ಉಳಿದ ರಜೆಗಳು ಶನಿವಾರ ಮತ್ತು ಭಾನುವಾರದ ದಿನಗಳದ್ದಾಗಿವೆ.

ಇದನ್ನೂ ಓದಿ: ಈ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ. 6.5ರಿಂದ ಶೇ. 6.8ರ ಶ್ರೇಣಿಯಲ್ಲಿರುವ ಸಾಧ್ಯತೆ: ಡುಲಾಯ್ಟ್ ವರದಿ

2025ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

  • ಜನವರಿ 1, ಬುಧವಾರ: ಹೊಸ ವರ್ಷ
  • ಜನವರಿ 2, ಗುರುವಾರ: ಹೊಸ ವರ್ಷ (ಮಿಜೋರಾಮ್ ರಾಜ್ಯದಲ್ಲಿ ರಜೆ)
  • ಜನವರಿ 5: ಭಾನುವಾರದ ರಜೆ
  • ಜನವರಿ 6, ಸೋಮವಾರ: ಗುರು ಗೋವಿಂದ್ ಜಯಂತಿ (ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ರಜೆ)
  • ಜನವರಿ 11: ಎರಡನೇ ಶನಿವಾರ
  • ಜನವರಿ 12: ಭಾನುವಾರದ ರಜೆ
  • ಜನವರಿ 13, ಸೋಮವಾರ: ಲೋಹ್ರಿ ಹಬ್ಬ (ಪಂಜಾಬ್ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಜನವರಿ 14, ಮಂಗಳವಾರ: ಸಂಕ್ರಾಂತಿ, ಪೊಂಗಲ್ ಹಬ್ಬ (ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ರಜೆ)
  • ಜನವರಿ 15, ಬುಧವಾರ: ತಿರುವಳ್ಳುವರ್ ದಿನ, ಮಾಘ ಬಿಹು (ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಮ್​ನಲ್ಲಿ ರಜೆ)
  • ಜನವರಿ 16, ಗುರುವಾರ: ಕಾಣುಮಾ ಪಂಡುಗ (ಅರುಣಾಚಲ ಪ್ರದೇಶದಲ್ಲಿ ರಜೆ)
  • ಜನವರಿ 19: ಭಾನುವಾರದ ರಜೆ
  • ಜನವರಿ 23, ಗುರುವಾರ: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ (ಹಲವು ರಾಜ್ಯಗಳಲ್ಲಿ ರಜೆ)
  • ಜನವರಿ 25: ನಾಲ್ಕನೇ ಶನಿವಾರದ ರಜೆ
  • ಜನವರಿ 26: ಭಾನುವಾರದ ರಜೆ
  • ಜನವರಿ 30, ಗುರುವಾರ: ಸೋನಮ್ ಲೋಸರ್ ಹಬ್ಬ (ಸಿಕ್ಕಿಂನಲ್ಲಿ ರಜೆ)
  • ಕರ್ನಾಟಕದಲ್ಲಿ ಜನವರಿಯಲ್ಲಿನ ಬ್ಯಾಂಕ್ ರಜಾದಿನಗಳು

2025ರ ಜನವರಿಯಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು

  • ಜನವರಿ 1, ಬುಧವಾರ: ಹೊಸ ವರ್ಷ
  • ಜನವರಿ 5: ಭಾನುವಾರದ ರಜೆ
  • ಜನವರಿ 11: ಎರಡನೇ ಶನಿವಾರ
  • ಜನವರಿ 12: ಭಾನುವಾರದ ರಜೆ
  • ಜನವರಿ 14, ಮಂಗಳವಾರ: ಸಂಕ್ರಾಂತಿ ಹಬ್ಬ
  • ಜನವರಿ 19: ಭಾನುವಾರದ ರಜೆ
  • ಜನವರಿ 25: ನಾಲ್ಕನೇ ಶನಿವಾರದ ರಜೆ
  • ಜನವರಿ 26: ಭಾನುವಾರದ ರಜೆ

ಇದನ್ನೂ ಓದಿ: ವಿಮಾನ ಪ್ರಯಾಣಕ್ಕೆ ಕಠಿಣ ನಿಯಮ: ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅವಕಾಶ

ಬ್ಯಾಂಕುಗಳು ಬಾಗಿಲು ಮುಚ್ಚಿದರೂ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ಆನ್​ಲೈನ್​ನಲ್ಲಿ ಲಭ್ಯ ಇರುತ್ತವೆ. ಎಟಿಎಂಗಳೂ ಕೂಡ ದಿನದ 24 ಗಂಟೆ ತೆರೆದಿರುತ್ತವೆ. ಹೀಗಾಗಿ, ಬಹಪಾಲು ಜನರಿಗೆ ಬ್ಯಾಂಕ್ ರಜಾ ದಿನಗಳು ಪರಿಣಾಮ ಬೀರುವುದಿಲ್ಲ. ಡಿಮ್ಯಾಂಡ್ ಡ್ರಾಫ್ಟ್, ಚೆಕ್ ಇತ್ಯಾದಿ ಕೆಲ ಕಾರ್ಯಗಳಿಗೆ ಬ್ಯಾಂಕ್ ಕಚೇರಿಗೆ ಹೋಗುವುದು ಅನಿವಾರ್ಯವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ