ಭಾರತದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸ್ಟಾರ್ಟಪ್​ಗಳು; ಅರ್ಧದಷ್ಟು ಕಂಪನಿಗಳಲ್ಲಿ ಮಹಿಳಾ ನಿರ್ದೇಶಕರು

Startups in India: 2024ರಲ್ಲಿ 13 ಸ್ಟಾರ್ಟಪ್​ಗಳು ಷೇರು ಮಾರುಕಟ್ಟೆಗೆ ಬಂದಿವೆ. ಇವು ಒಟ್ಟಾರೆ 30,000 ಕೋಟಿ ರೂ ಸಮೀಪದಷ್ಟು ಬಂಡವಾಳವನ್ನು ಐಪಿಒ ಮೂಲಕ ಪಡೆದಿವೆ. ಡಿಪಿಐಐಟಿಯಿಂದ ಮಾನ್ಯತೆ ಪಡೆದಿರುವ ಸ್ಟಾರ್ಟಪ್​ಗಳ ಸಂಖ್ಯೆ ಒಂದೂವರೆ ಲಕ್ಷಕ್ಕೂ ಅಧಿಕ ಇದೆ. ಮಹಿಳಾ ನಿರ್ದೇಶಕರಿರುವ ಸ್ಟಾರ್ಟಪ್​ಗಳ ಸಂಖ್ಯೆ 73 ಸಾವಿರಕ್ಕೂ ಅಧಿಕ ಇದೆ.

ಭಾರತದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸ್ಟಾರ್ಟಪ್​ಗಳು; ಅರ್ಧದಷ್ಟು ಕಂಪನಿಗಳಲ್ಲಿ ಮಹಿಳಾ ನಿರ್ದೇಶಕರು
ಸ್ಟಾರ್ಟಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 29, 2024 | 12:23 PM

ನವದೆಹಲಿ, ಡಿಸೆಂಬರ್ 29: ಭಾರತದಲ್ಲಿ ಡಿಪಿಐಐಟಿಯಿಂದ ಮಾನ್ಯಗೊಂಡಿರುವ ಸ್ಟಾರ್ಟಪ್​ಗಳ ಸಂಖ್ಯೆ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಇದೆ. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಡಿಪಿಐಐಟಿಯಿಂದ ಮಾನ್ಯತೆ ಹೊಂದಿರುವ 1,57,066ಕ್ಕೂ ಹೆಚ್ಚು ಸ್ಟಾರ್ಟಪ್​ಗಳಿವೆ. ಈ ಪೈಕಿ 73,000ಕ್ಕೂ ಅಧಿಕ ಸ್ಟಾರ್ಟಪ್​ಗಳಲ್ಲಿ ಕನಿಷ್ಠ ಒಬ್ಬರಾದರೂ ಮಹಿಳಾ ನಿರ್ದೇಶಕರಿದ್ದಾರೆ. ಅಂದರೆ, ಮಾನ್ಯತೆ ಪಡೆದ ಸ್ಟಾರ್ಟಪ್​ಗಳಲ್ಲಿ (Recognized startups) ಹೆಚ್ಚೂಕಡಿಮೆ ಅರ್ಧದಷ್ಟು ಕಂಪನಿಗಳಲ್ಲಿ ನಿರ್ದೇಶಕಿಯರಿದ್ದಾರೆ. ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜಕ ಇಲಾಖೆಯಾದ ಡಿಪಿಐಐಟಿಯಲ್ಲಿ ನೊಂದಾಯಿತರಾದ 7,59,303 ಬಳಕೆದಾರರಿದ್ದಾರೆ.

ಭಾರತದಲ್ಲಿ ಪ್ರಬಲ ಸ್ಟಾರ್ಟಪ್ ವ್ಯವಸ್ಥೆ

ಜಾಗತಿಕವಾಗಿ ಅತ್ಯಂತ ವೈಬ್ರೆಂಟ್ ಆಗಿರುವ ಸ್ಟಾರ್ಟಪ್ ಇಕೋಸ್ಟಂಗಳಿರುವ ದೇಶಗಳಲ್ಲಿ ಭಾರತವೂ ಒಂದು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಹಬ್ ಎನಿಸಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ನೊಂದಾಯಿತ ಸ್ಟಾರ್ಟಪ್​ಗಳಲ್ಲಿ ಯೂನಿಕಾರ್ನ್ ಎನಿಸಿದ ಕಂಪನಿಗಳ ಸಂಖ್ಯೆ 100ಕ್ಕೂ ಹೆಚ್ಚಿದೆ. ಯೂನಿಕಾರ್ನ್ ಎಂದರೆ ಒಂದು ಬಿಲಿಯನ್ ಡಾಲರ್​ಗೂ ಅಧಿಕ ಮೌಲ್ಯ ಹೊಂದಿರುವ, ಹಾಗೂ ಇನ್ನೂ ಷೇರುಪೇಟೆಯಲ್ಲಿ ಲಿಸ್ಟ್ ಆಗದಿರುವ ಸ್ಟಾರ್ಟಪ್.

ಇದನ್ನೂ ಓದಿ: ರಿಲಯನ್ಸ್ ಸಾಮ್ರಾಜ್ಯ ಕಟ್ಟಿದ ಧೀರೂಭಾಯಿ ಅಂಬಾನಿ ಸಾಗಿ ಬಂದ ಹಾದಿ ಹೇಗಿತ್ತು? ಇಲ್ಲಿದೆ ಕುತೂಹಲಕಾರಿ ಸಂಗತಿ

ಸ್ಟಾರ್ಟಪ್​ಗಳ ವಿಚಾರಕ್ಕೆ ಬಂದರೆ ಭಾರತಕ್ಕೆ ಬೆಂಗಳೂರು ಪ್ರಮುಖವಾದುದು. ಬೆಂಗಳೂರು ಭಾರತದ ಸ್ಟಾರ್ಟಪ್ ರಾಜಧಾನಿಯಂತಿದೆ. ಬಹಳಷ್ಟು ಸ್ಟಾರ್ಟಪ್​ಗಳು ಬೆಂಗಳೂರಿನಲ್ಲಿವೆ. ಹೈದರಾಬಾದ್ ಕೂಡ ಸಾಕಷ್ಟು ಸ್ಟಾರ್ಟಪ್​ಗಳನ್ನು ಸಲಹುತ್ತಿವೆ. ಮುಂಬೈ, ದೆಹಲಿ, ಪುಣೆಯಲ್ಲೂ ಉದ್ಯಮ ಹುಲುಸಾಗಿ ಬೆಳೆಯುತ್ತಿದೆ.

ಷೇರು ಮಾರುಕಟ್ಟೆಯಲ್ಲಿ ಸ್ಟಾರ್ಟಪ್​ಗಳ ಕಲರವ…

ಈ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಸ್ಟಾರ್ಟಪ್​ಗಳು ಐಪಿಒ ಮೂಲಕ ಸಾರ್ವಜನಿಕವಾಗಿ ಬಂಡವಾಳ ಸಂಗ್ರಹಿಸಿವೆ. 2024ರಲ್ಲಿ 13 ಹೊಸ ಸ್ಟಾರ್ಟಪ್​ಗಳು ಷೇರು ಮಾರುಕಟ್ಟೆಯಲ್ಲಿ ಒಟ್ಟಾರೆ ಸಂಗ್ರಹಿಸಿದ ಬಂಡವಾಳ 29,200 ಕೋಟಿ ರೂಗೂ ಅಧಿಕ ಇದೆ. ಇದರಲ್ಲಿ ಹೊಸ ಷೇರುಗಳನ್ನು ವಿತರಿಸಿ 14,672 ಕೋಟಿ ರೂ ಸಂಗ್ರಹಿಸಲಾಗಿದೆ. ಆಫರ್ ಫಾರ್ ಸೇಲ್, ಅಥವಾ ಒಎಫ್​ಎಸ್ ಮೂಲಕ 14,574 ಕೋಟಿ ರೂ ಬಂಡವಾಳ ಸಂಗ್ರಹಿಸಿವೆ.

ಇದನ್ನೂ ಓದಿ: ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಯುವ ಪೀಳಿಗೆಗೆ ಮಾದರಿ ಯಾಕೆ? ರತನ್ ಅವರ ಸಾಧನೆಯ ಹಾದಿಯ ಚಿತ್ರಣ ಇಲ್ಲಿದೆ

ಅಗ್ಗದ ಇಂಟರ್ನೆಟ್ ಲಭ್ಯತೆಯಿಂದ ಅನುಕೂಲ…

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಟರ್ನೆಟ್ ಅಗ್ಗದ ದರಕ್ಕೆ ಸಿಗುತ್ತದೆ. ಇದು ಫಿನ್​ಟೆಕ್, ಎಜುಟೆಕ್, ಹೆಲ್ತ್ ಟೆಕ್ ಇತ್ಯಾದಿ ನಾವೀನ್ಯ ತಂತ್ರಜ್ಞಾನ ಕಂಪನಿಗಳು ಮತ್ತು ಇಕಾಮರ್ಸ್ ಕಂಪನಿಗಳು ಉತ್ತಮ ರೀತಿಯಲ್ಲಿ ಬೆಳೆಯಲು ಸಹಕಾರಿಯಾಗಿದೆ. ಭಾರತದಲ್ಲಿ ಯುವ ಮತ್ತು ಉತ್ಸಾಹೀ ಉದ್ಯೋಗಿಗಳ ಲಭ್ಯತೆಯೂ ಸ್ಟಾರ್ಟಪ್​ಗಳ ಬೆಳವಣಿಗೆಗೆ ಸಹಕಾರಿ ಆಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ, ಬ್ಲಾಕ್​ಚೈನ್ ಇತ್ಯಾದಿ ಆವಿಷ್ಕಾರಗಳು ಸ್ಟಾರ್ಟಪ್​ಗಳಿಗೆ ಸಹಕಾರಿಯಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ
ಮರಳಿನಲ್ಲಿ ಸಿಲುಕಿಕೊಂಡ ಫೆರಾರಿ ಕಾರು; ರಸ್ತೆಗೆ ಎಳೆದು ತಂದ ಎತ್ತಿನ ಗಾಡಿ