Banks Closed: ಮಾರ್ಚ್ 7, 8, 9ರಂದು ಹಬ್ಬಕ್ಕೆ ಬ್ಯಾಂಕುಗಳಿಗೆ ರಜೆ; ಕರ್ನಾಟಕದಲ್ಲೂ ಬಾಗಿಲು ಮುಚ್ಚುತ್ತಾ?

|

Updated on: Mar 07, 2023 | 5:45 PM

Holi and Ugadi Festivals: ಈ ವಾರ (ಮಾರ್ಚ್ 6-12) ಮೂರು ದಿನ ಹೋಳಿ ಹಬ್ಬದ ಪ್ರಯುಕ್ತ ಕೆಲ ರಾಜ್ಯಗಳಲ್ಲಿ ರಜೆ ಇದೆ. ಬ್ಯಾಂಕುಗಳು ಈ ದಿನಗಳು ಕಾರ್ಯನಿರ್ವಹಿಸುವುದಿಲ್ಲ. ಕೆಲ ರಾಜ್ಯಗಳಲ್ಲಿ ಹೋಳಿಗೆ ರಜೆ ಇಲ್ಲ. ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ಯಾವಾಗ ರಜೆ? ಇಲ್ಲಿದೆ ವಿವರ:

Banks Closed: ಮಾರ್ಚ್ 7, 8, 9ರಂದು ಹಬ್ಬಕ್ಕೆ ಬ್ಯಾಂಕುಗಳಿಗೆ ರಜೆ; ಕರ್ನಾಟಕದಲ್ಲೂ ಬಾಗಿಲು ಮುಚ್ಚುತ್ತಾ?
ಎಸ್​ಬಿಐ ಬ್ಯಾಂಕ್
Follow us on

ಬೆಂಗಳೂರು: ಹೋಳಿ ಹಬ್ಬ ಬಂದೇ ಬಿಟ್ಟಿತು, ಹಬ್ಬದ ಸೀಸನ್ ಮೊದಲುಗೊಂಡಿತು. ಬ್ಯಾಂಕುಗಳಿಗೆ ಈಗ ರಜೆಗಳ ಭರಾಟೆ. ಮಾರ್ಚ್ 7, 8 ಮತ್ತು 9ರಂದು ಹೋಳಿ ಹಬ್ಬ (Holi Festival) ಇದ್ದು, ಕೆಲ ರಾಜ್ಯಗಳಲ್ಲಿ ಈ ಎರಡು ದಿನಗಳು ಬ್ಯಾಂಕುಗಳಿಗೆ ರಜೆ (Bank Holidays) ಇದೆ. ಈ ವಾರ ಶನಿವಾರ ಮತ್ತು ಭಾನುವಾರದ ರಜೆ ಸೇರಿ ನಾಲ್ಕು ದಿನಗಳ ಕಾಲ ಬ್ಯಾಂಕುಗಳು ಬಾಗಿಲು ಮುಚ್ಚುತ್ತಿವೆ.

ಜಾರ್ಖಂಡ್, ಉತ್ತರಾಖಂಡ್ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಹಾಗೂ ಜಮ್ಮು ನಗರದಲ್ಲಿ ಇಂದು ಮತ್ತು ನಾಳೆ ಹೋಳಿಯ ಎರಡೂ ದಿನಗಳು ರಜೆ ಇದೆ. ಇದೂ ಸೇರಿ ಈ ವಾರ ಈ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ನಾಲ್ಕು ದಿನಗಳ ರಜೆ ಇದೆ. ಈ ವಾರ ಇಲ್ಲಿ ಸೋಮವಾರ, ಗುರುವಾರ ಮತ್ತು ಶುಕ್ರವಾರಗಳಂದು ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ.

ಮಾರ್ಚ್ 7ರಂದು ಮಹಾರಾಷ್ಟ್ರ, ಅಸ್ಸಾಮ್, ರಾಜಸ್ಥಾನ್, ಶ್ರೀನಗರ್, ಗೋವಾ, ಉತ್ತರಾಖಂಡ್, ಉತ್ತರಪ್ರದೇಶ, ಜಮ್ಮು, ಶ್ರೀನಗರ, ತೆಲಂಗಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ.

ಮಾರ್ಚ್ 8ರಂದು ತ್ರಿಪುರಾ, ಗುಜರಾತ್, ಮಿಝೋರಾಮ್, ಮಧ್ಯಪ್ರದೇಶ, ಒಡಿಶಾ, ಚಂಡೀಗಡ, ಉತ್ತರಾಖಂಡ್, ಸಿಕ್ಕಿಂ, ರಾಜಸ್ಥಾನ, ಜಮ್ಮು, ಉತ್ತರಪ್ರದೇಶ, ಬಂಗಾಳ, ನವದೆಹಲಿ, ಬಿಹಾರ, ಚತ್ತೀಸ್​ಗಡ, ಮೇಘಾಲಯ ಮತ್ತು ಹಿಮಾಚಲಪ್ರದೇಶಗಳಲ್ಲಿ ರಜೆ ಇದೆ.

ಇದನ್ನೂ ಓದಿFoxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?

ಮಾರ್ಚ್ 9ರಂದು ಬಿಹಾರದಲ್ಲಿ ಹೋಳಿ ಪ್ರಯುಕ್ತ ರಜೆ ಇದೆ.

ಮಾರ್ಚ್ 11ರಂದು ಎರಡನೇ ಶನಿವಾರದ ಪ್ರಯುಕ್ತ ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ರಜೆ ಇದೆ. ತಿಂಗಳಲ್ಲಿ ಪ್ರತೀ ಭಾನುವಾರದ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳಿಗೆ ನಿಯಮಿತವಾಗಿ ರಜೆ ಇರುತ್ತದೆ.

ಹೋಳಿ ಹಬ್ಬದ ಮೂರು ದಿನಗಳ ಪೈಕಿ ಕರ್ನಾಟಕದಲ್ಲಿ ಯಾವ ದಿನದಲ್ಲೂ ರಜೆ ಇಲ್ಲ. ಕರ್ನಾಟಕದಲ್ಲಿ ಈ ವಾರ ಶನಿವಾರ ಮತ್ತು ಭಾನುವಾರ ಮಾತ್ರವೇ ಬ್ಯಾಂಕುಗಳು ಬಂದ್ ಇರುತ್ತವೆ.

ಇದನ್ನೂ ಓದಿBig Saving Days Sale: iPhone14 ಭಾರೀ ಕಡಿಮೆ ಬೆಲೆಗೆ; ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಸೇಲ್ ಆಫರ್ಸ್

ಈ ವಾರ ಬಿಟ್ಟರೆ ಇನ್ನು ಹಬ್ಬಕ್ಕೆ ರಜೆ ಇರುವುದು ಮಾರ್ಚ್ 22 ಮತ್ತು ಮಾರ್ಚ್ 30ರಂದು ಮಾತ್ರವೇ. ಮಾರ್ಚ್ 22ರಂದು ಯುಗಾದಿ ಹಬ್ಬದ ಪ್ರಮುಕ್ತ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.

ಮಾರ್ಚ್ 30ರಂದು ರಾಮನವಮಿ ಇರುವುದರಿಂದ ದೇಶದ ಕೆಲವಾರು ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇದೆ.. ಕರ್ನಾಟಕದ ಬ್ಯಾಂಕುಗಳಿಗೆ ಈ ದಿನ ರಜೆ ಇರುವುದಿಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Mon, 6 March 23