Sign In

By signing in or creating an account, you agree with Associated Broadcasting Company's Terms & Conditions and Privacy Policy.

Foxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?

Karnataka and Telangana Governments Reveals MoU with Foxconn: ಐಫೋನ್ ಫ್ಯಾಕ್ಟರಿ ಸ್ಥಾಪನೆಗೆ ಫಾಕ್ಸ್​ಕಾನ್ ಜೊತೆ ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳೆರಡೂ ಎಂಒಯು ಮಾಡಿಕೊಂಡಿವೆ. ಆದರೆ, ಫಾಕ್ಸ್​ಕಾನ್​ನ ಫ್ಯಾಕ್ಟರಿ ಎಲ್ಲಿ ಸ್ಥಾಪನೆಯಾಗುತ್ತದೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ...

Foxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?
ಐಫೋನ್ ಫ್ಯಾಕ್ಟರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 06, 2023 | 5:36 PM

ಬೆಂಗಳೂರು: ತೈವಾನ್ ಮೂಲಕ ಫಾಕ್ಸ್​ಕಾನ್ ಕಂಪನಿಯ ಐಫೋನ್ ತಯಾರಕಾ ಘಟಕದ (Foxconn’s iPhone Manufacturing Unit) ವಿಚಾರ ಈಗ ಗೊಂದಲದ ಗೂಡಾಗಿದೆ. ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಫಾಕ್ಸ್​ಕಾನ್ ಸಂಸ್ಥೆ ಐಫೋನ್ ಘಟಕ ಸ್ಥಾಪನೆಗೆ ಕರ್ನಾಟಕ ಮತ್ತು ತೆಲಂಗಾಣ ಎರಡೂ ಸರ್ಕಾರಗಳೊಂದಿಗೆ ಎಂಒಯು (MoU- Memorandum of Understanding) ಒಪ್ಪಂದಕ್ಕೆ ಸಹಿಹಾಕಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ತೆಲಂಗಾಣ ಸಿಎಂ ತಮ್ಮ ಸರ್ಕಾರ ಮಾಡಿಕೊಂಡಿರುವ ಎಂಒಯು ಪ್ರತಿಯನ್ನು ಬಹಿರಂಗಪಡಿಸಿದ್ದಾರೆ. ಇತ್ತ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಎಂಒಯು ಪ್ರತಿಯನ್ನು ಸಾರ್ವತ್ರಿಕಗೊಳಿಸಿದ್ದಾರೆ. ಆದರೆ, ವಾಸ್ತವ ಏನು? ಫಾಕ್ಸ್​ಕಾನ್ ಎಲ್ಲಿ ತನ್ನ ಘಟಕ ಸ್ಥಾಪಿಸುತ್ತದೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಹೋನ್ ಹಾಯ್ ಪ್ರಿಸಿಶನ್ ಇಂಡಸ್ಟ್ರಿ ಸಂಸ್ಥೆ (ಫಾಕ್ಸ್​ಕಾನ್- Hon Hai Precision Industries) ಮಾರ್ಚ್ 6, ಸೋಮವಾರದಂದು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ ಐಫೋನ್ ಫ್ಯಾಕ್ಟರಿ ಸ್ಥಾಪಿಸುವ ಪ್ರಾಜೆಕ್ಟ್ ಎಲಿಫ್ಯಾಂಟ್ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನ ಮಾಡುವುದಾಗಿ ಹೇಳಿದೆ. ಅಂದರೆ ಈ ಡೀಲ್ ಅಂತಿಮಗೊಂಡಿಲ್ಲ ಎಂದೇ ಅರ್ಥ. ಒಂದು ವೇಳೆ ಈ ಒಪ್ಪಂದ ಕಾರ್ಯಗತವಾದಲ್ಲಿ ಬೆಂಗಳೂರು ಸುತ್ತಮುತ್ತಲ ಒಂದು ಪ್ರದೇಶದಲ್ಲಿ 300 ಎಕರೆ ಜಾಗದಲ್ಲಿ ಫಾಕ್ಸ್​ಕಾನ್ ಐಫೋನ್ ಫ್ಯಾಕ್ಟರಿಯನ್ನು ಕಟ್ಟಲಿದೆ. ಒಂದು ಲಕ್ಷದಷ್ಟು ಉದ್ಯೋಗಸೃಷ್ಟಿಯೂ ಆಗಲಿದೆ.

ಇದನ್ನೂ ಓದಿBig Saving Days Sale: iPhone14 ಭಾರೀ ಕಡಿಮೆ ಬೆಲೆಗೆ; ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಸೇಲ್ ಆಫರ್ಸ್

ಇನ್ನೊಂದೆಡೆ ತೆಲಂಗಾಣದೊಂದಿಗೆ ಫಾಕ್ಸ್​ಕಾನ್ ಮಾಡಿಕೊಂಡಿರುವ ಎಂಒಯು ಪ್ರಕಾರ ಹೈದರಾಬಾದ್​ನ ಕೊಂಗರ ಕಾಳನ್ ಎಂಬಲ್ಲಿ 200 ಎಕರೆ ಜಾಗದಲ್ಲಿ ಐಫೋನ್ ಫ್ಯಾಕ್ಟರಿ ಸ್ಥಾಪಿಸುವ ಪ್ರಸ್ತಾಪ ಇದೆ.

ಕಾಂಗ್ರೆಸ್ ಟೀಕೆ:

ಫಾಕ್ಸ್​ಕಾನ್ ಐಫೋನ್ ಫ್ಯಾಕ್ಟರಿ ಸ್ಥಾಪನೆ ವಿಚಾರ ಈಗ ಕರ್ನಾಟಕದಲ್ಲಿ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕರ್ನಾಟಕ ಸರ್ಕಾರ ಫಾಕ್ಸ್​ಕಾನ್ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ.

ನಿಜಾಂಶ ಏನು?

ಫಾಕ್ಸ್​ಕಾನ್ ಎರಡೂ ರಾಜ್ಯಗಳೊಂದಿಗೆ ಎಂಒಯು ಒಪ್ಪಂದ ಮಾಡಿಕೊಂಡಿರುವುದು ನಿಜ. ಆದರೆ, ಎಂಒಯು ಆದಾಕ್ಷಣ ಒಪ್ಪಂದ ಅಂತಿಮಗೊಳ್ಳುವುದಿಲ್ಲ. ಅದು ಕೇವಲ ಪ್ರಸ್ತಾಪದ ಹಂತ ಮಾತ್ರವಾಗಿರುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಹಲವು ಎಂಒಯುಗಳು ಆಗಿದ್ದವು. ಅದರಲ್ಲಿ ಶೇ. 40ರಷ್ಟು ಮಾತ್ರ ಜಾರಿಗೆ ಬಂದಿದ್ದವು.

ಇದನ್ನೂ ಓದಿVehicles Sale: ಭಾರತದಲ್ಲಿ ವಾಹನಗಳ ಮಾರಾಟ ಭರಾಟೆ; ಫೆಬ್ರುವರಿಯಲ್ಲಿ ಒಟ್ಟು ಸೇಲ್ ಆಗಿದ್ದು ಎಷ್ಟು?

ಹಿಂದೆ ಫಾಕ್ಸ್​ಕಾನ್ ಮಹಾರಾಷ್ಟ್ರದಲ್ಲಿ ಸೆಮಿಕಂಡಕ್ಟರ್ ತಯಾರಿಕೆ ಘಟಕ ಸ್ಥಾಪಿಸುವ ಪ್ರಸ್ತಾಪ ಇತ್ತು. ಕೊನೆಗೆ ವೇದಾಂತ ಕಂಪನಿಯ ಸಹಭಾಗಿತ್ವದಲ್ಲಿ ಗುಜರಾತ್​​ನಲ್ಲಿ ಫಾಕ್ಸ್​ಕಾನ್ ಸೆಮಿಕಂಡಕ್ಟರ್ ಫ್ಯಾಕ್ಟರಿ ಸ್ಥಾಪಿಸಲು ನಿರ್ಧರಿಸಿತು. ಆದ್ದರಿಂದ ಐಫೋನ್ ಫ್ಯಾಕ್ಟರಿಯನ್ನು ಕರ್ನಾಟಕದಲ್ಲೋ, ತೆಲಂಗಾಣದಲ್ಲೋ ಎಲ್ಲಿ ಸ್ಥಾಪಿಸಬೇಕೆಂಬ ನಿರ್ಧಾರ ಫಾಕ್ಸ್​ಕಾನ್ ಮೇಲೆಯೇ ನಿಂತಿದೆ. ಇವೆರಡು ರಾಜ್ಯಗಳನ್ನು ಬಿಟ್ಟು ಬೇರೆಡೆಯ ಒಂದು ಪ್ರದೇಶದಲ್ಲೂ ಫಾಕ್ಸ್​ಕಾನ್ ತನ್ನ ಘಟಕ ಸ್ಥಾಪಿಸುವ ಸ್ವಾತಂತ್ರ್ಯ ಹೊಂದಿದೆ.

ಕೋಲಾರದಲ್ಲಿ ಈಗಾಗಲೇ ತೈವಾನ್ ಮೂಲದ ಮತ್ತೊಂದು ಕಂಪನಿ ವಿಸ್ಟ್ರಾನ್ ಈಗಾಗಲೇ ಐಫೋನ್ ಫ್ಯಾಕ್ಟರಿ ಸ್ಥಾಪಿಸಿದೆ. ಈಗ ಫಾಕ್ಸ್​ಕಾನ್​ನ ಘಟಕವೂ ಸ್ಥಾಪನೆಯಾದರೆ ಕರ್ನಾಟಕ ಆ್ಯಪಲ್ ಐಫೋನ್ ತಯಾರಿಕೆಯ ಪ್ರಮುಖ ಹಬ್ ಆಗಬಹುದು.

ಐಫೋನ್ ತಯಾರಿಕೆ ಹೇಗೆ ಆಗುತ್ತದೆ?

ಆ್ಯಪಲ್ ಕಂಪನಿ ತಾನೇ ಖುದ್ದಾಗಿ ಐಫೋನ್ ತಯಾರಿಸುವುದಿಲ್ಲ. ಆ್ಯಪಲ್ ನಿರ್ದಿಷ್ಟಪಡಿಸಿದ ಮಾನದಂಡ ಮತ್ತು ಗುಣಮಟ್ಟದ ಆಧಾರದಲ್ಲಿ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ಕಂಪನಿಗಳು ಚಿಪ್ ಇತ್ಯಾದಿ ವಿವಿಧ ಬಿಡಿಭಾಗಗಳನ್ನು ತಯಾರಿಸುತ್ತವೆ. ಐಫೋನ್ ತಯಾರಿಸಲು ಗುತ್ತಿಗೆ ಪಡೆದ ಕಂಪನಿಗಳಿಗೆ ಈ ಬಿಡಿಭಾಗಗಳು ಸರಬರಾಜಾಗುತ್ತವೆ. ತೈವಾನ್ ಮೂಲದ ಫಾಕ್ಸ್​ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಕಂಪನಿಗಳು ಈ ಗುತ್ತಿಗೆ ಪಡೆದಿವೆ. ಈ ಕಂಪನಿಗಳು ಬಿಡಿಭಾಗಗಳನ್ನು ಅಸೆಂಬಲ್ ಮಾಡಿ ಐಫೋನ್ ತಯಾರಿಸುತ್ತವೆ. ಈ ಮೂರು ಕಂಪನಿಗಳ ಹೆಚ್ಚಿನ ಐಫೋನ್ ಫ್ಯಾಕ್ಟರಿಗಳು ಚೀನಾದಲ್ಲೇ ಇದ್ದವು. ಇದೀಗ ಚೀನಾದಿಂದ ಹೊರಗೆ ಘಟಕ ಸ್ಥಾಪಿಸಲಾಗುತ್ತಿದೆ. ಭಾರತದಲ್ಲಿ ಈ ಮೂರೂ ಕಂಪನಿಗಳು ಐಫೋನ್ ಫ್ಯಾಕ್ಟರಿ ಸ್ಥಾಪಿಸಿವೆ, ಸ್ಥಾಪಿಸುತ್ತಿವೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Mon, 6 March 23

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ