AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold, Silver Rates Today: ಚಿನ್ನದ ಬೆಲೆ ದುಬೈನಲ್ಲಿ ತುಸು ಇಳಿಕೆ; ಭಾರತ ಮತ್ತು ವಿದೇಶಗಳಲ್ಲಿ ಎಷ್ಟಿದೆ ದರ?

2023, March 7h: ಬೆಳ್ಳಿ ಮತ್ತು ಚಿನ್ನದ ಬೆಲೆಗಳು ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿವೆ. ದುಬೈ ಮತ್ತು ಸಿಂಗಾಪುರದಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಆಗಿದೆ. ಅನಿವಾಸಿ ಭಾರತೀಯ ಸಮುದಾಯದವರು ಹೆಚ್ಚಾಗಿ ಇರುವ ಅಮೆರಿಕ, ಸಿಂಗಾಪುರ, ಮಲೇಷ್ಯಾ, ದುಬೈ ಮೊದಲಾದ ಕಡೆ ಚಿನ್ನದ ಬೆಲೆ 50 ಸಾವಿರ ರೂಗಿಂತ ಕಡಿಮೆ ಇದೆ.

Gold, Silver Rates Today: ಚಿನ್ನದ ಬೆಲೆ ದುಬೈನಲ್ಲಿ ತುಸು ಇಳಿಕೆ; ಭಾರತ ಮತ್ತು ವಿದೇಶಗಳಲ್ಲಿ ಎಷ್ಟಿದೆ ದರ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 07, 2023 | 5:00 AM

Share

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ದೇಶಾದ್ಯಂತ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿವೆ. ದುಬೈ ಮತ್ತು ಸಿಂಗಾಪುರದಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಆಗಿದೆ. ಅನಿವಾಸಿ ಭಾರತೀಯ ಸಮುದಾಯದವರು ಹೆಚ್ಚಾಗಿ ಇರುವ ಅಮೆರಿಕ, ಸಿಂಗಾಪುರ, ಮಲೇಷ್ಯಾ, ದುಬೈ ಮೊದಲಾದ ಕಡೆ ಚಿನ್ನದ ಬೆಲೆ 50 ಸಾವಿರ ರೂಗಿಂತ ಕಡಿಮೆ ಇದೆ. ಭಾರತದ ಚಿನಿವಾರ ಪೇಟೆಯಲ್ಲಿ (Bullion Market) 22 ಕ್ಯಾರಟ್​ನ 10 ಗ್ರಾಮ ಚಿನ್ನದ ಬೆಲೆ 51,900 ರೂ ಆಗಿದೆ. ಅಪರಂಜಿ ಅಥವಾ ಶುದ್ಧ ಚಿನ್ನವೆನಿಸಿರುವ 24 ಕ್ಯಾರಟ್ ಗೋಲ್ಡ್ ಬೆಲೆ 56,600 ರೂ ಇದೆ. ಬೆಂಗಳೂರಿನಲ್ಲಿಯೂ ಆಭರಣ ಚಿನ್ನದ ಬೆಲೆ 10 ಗ್ರಾಮ್​ಗೆ 51,900 ರೂ ಇದೆ. ಬೆಳ್ಳಿ ಬೆಲೆ 10 ಗ್ರಾಮ್​ಗೆ 669 ರೂಪಾಯಿ ಇದೆ. ಬೆಂಗಳೂರು ಹಾಗೂ ಕೆಲ ನಗರಗಳಲ್ಲಿ 700 ರೂ ಆಗಿದೆ.

ಇದೇ ವೇಳೆ, ಕೆಲ ಪ್ರಮುಖ ವಿದೇಶೀ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಭಾರತದಕ್ಕಿಂತ ತುಸು ಕಡಿಮೆ ಇದೆ. ಅನಿವಾಸಿ ಭಾರತೀಯ ಸಮುದಾಯದವರು ಹೆಚ್ಚಾಗಿ ಇರುವ ಅಮೆರಿಕ, ಸಿಂಗಾಪುರ, ಮಲೇಷ್ಯಾ, ದುಬೈ ಮೊದಲಾದ ಕಡೆ ಚಿನ್ನದ ಬೆಲೆ 50 ಸಾವಿರ ರೂಗಿಂತ ಕಡಿಮೆ ಇದೆ. ಅಮೆರಿಕ ಮತ್ತು ದುಬೈನಲ್ಲಿ 46 ಸಾವಿರ ರೂ ಆಸುಪಾಸಿನಲ್ಲಿ ಚಿನ್ನದ ಬೆಲೆ ಇದೆ.

ಭಾರತದಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 51,900 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,600 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 669 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 51,900 ರೂ

ಚೆನ್ನೈ: 52,510 ರೂ

ಮುಂಬೈ: 51,850 ರೂ

ದೆಹಲಿ: 51,950 ರೂ

ಕೋಲ್ಕತಾ: 51,850 ರೂ

ಕೇರಳ: 51,850 ರೂ

ಅಹ್ಮದಾಬಾದ್: 51,900 ರೂ

ಜೈಪುರ್: 51,950 ರೂ

ಲಕ್ನೋ: 51,950 ರೂ

ಭುವನೇಶ್ವರ್: 51,850 ರೂ

ಇದನ್ನೂ ಓದಿFoxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಮಲೇಷ್ಯಾ: 2,660 ರಿಂಗಿಟ್ (48,560 ರುಪಾಯಿ)

ಕತಾರ್: 2,155 ರಿಯಾಲ್ (48,363 ರೂ)

ದುಬೈ: 2075 ಡಿರಾಮ್ (46,252 ರುಪಾಯಿ)

ಅಮೆರಿಕ: 565 ಡಾಲರ್ (46,167 ರುಪಾಯಿ)

ಸಿಂಗಾಪುರ: 775 ಸಿಂಗಾಪುರ್ ಡಾಲರ್ (47,151 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 700 ರೂ

ಚೆನ್ನೈ: 700 ರೂ

ಮುಂಬೈ: 669 ರೂ

ದೆಹಲಿ: 669 ರೂ

ಕೋಲ್ಕತಾ 669 ರೂ

ಕೇರಳ: 700 ರೂ

ಅಹ್ಮದಾಬಾದ್: 669 ರೂ

ಜೈಪುರ್: 669 ರೂ

ಲಕ್ನೋ: 669 ರೂ

ಭುವನೇಶ್ವರ್: 700 ರೂ

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ