Bank Holidays: ಮಾರ್ಚ್ ತಿಂಗಳ ಕೊನೆಯ 10 ದಿನದಲ್ಲಿ ಬ್ಯಾಂಕುಗಳಿಗೆ 8 ದಿನ ರಜೆ; ನೋಡಿ ಪಟ್ಟಿ

RBI holiday calendar March 16-31st: ಮಾರ್ಚ್ ತಿಂಗಳಲ್ಲಿ ರಜೆಗಳ ಸುಗ್ಗಿ ಇದೆ. ಒಟ್ಟು 14 ದಿನಗಳ ಕಾಲ ಬ್ಯಾಂಕುಗಳು ಬಾಗಿಲು ಮುಚ್ಚಿರುತ್ತವೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಶನಿವಾರದ ರಜೆಗಳಿವೆ. ಮಾರ್ಚ್ 22ರಿಂದ 31ರವರೆಗೆ ಎಂಟು ದಿನಗಳು ರಜೆ ಇವೆ. ಹೋಳಿ ಮತ್ತು ಗುಡ್ ಫ್ರೈಡೆ ಈ ಅವಧಿಯಲ್ಲಿ ಇವೆ. ಕರ್ನಾಟಕದಲ್ಲಿ ಗುಡ್ ಫ್ರೈಡೆ ಹಬ್ಬಕ್ಕೆ ಬ್ಯಾಂಕುಗಳಿಗೆ ರಜೆ ಇರುತ್ತದೆ. ಹೋಳಿಗೆ ಉತ್ತರ ಭಾರತದ ಹಲವು ಕಡೆ ರಜೆ ಇರುತ್ತದೆ.

Bank Holidays: ಮಾರ್ಚ್ ತಿಂಗಳ ಕೊನೆಯ 10 ದಿನದಲ್ಲಿ ಬ್ಯಾಂಕುಗಳಿಗೆ 8 ದಿನ ರಜೆ; ನೋಡಿ ಪಟ್ಟಿ
ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 15, 2024 | 1:54 PM

ನವದೆಹಲಿ, ಮಾರ್ಚ್ 15: ಬ್ಯಾಂಕುಗಳಿಗೆ ಈ ಮಾರ್ಚ್ ತಿಂಗಳ ಕೊನೆಯ ಎರಡು ವಾರ ರಜೆಗಳ ಸುಗ್ಗಿಯೇ ಇದೆ. ಆರ್​ಬಿಐ ಕ್ಯಾಲಂಡರ್ ಪ್ರಕಾರ ಇಡೀ ಮಾರ್ಚ್ ತಿಂಗಳಲ್ಲಿ 14 ದಿನ ರಜೆ ಇದ್ದು, ಅದರಲ್ಲಿ ಮಾರ್ಚ್ 16ರಿಂದಲೇ 9 ರಜೆಗಳಿವೆ. ಕೊನೆಯ ವಾರದಂದು ಹೋಳಿ ಹಬ್ಬ ಮತ್ತು ಗುಡ್ ಫ್ರೈಡೆ ಹಬ್ಬಗಳಿವೆ. ವಿವಿಧೆಡೆ ವಿವಿಧ ದಿನಗಳಲ್ಲಿ ಹೋಳಿಗೆ ಬ್ಯಾಂಕುಗಳು (Bank Holidays) ಬಾಗಿಲು ಮುಚ್ಚುತ್ತವೆ. ಕರ್ನಾಟಕದಲ್ಲಿ ಗುಡ್ ಫ್ರೈಡೆಯಂದು (Good Friday Festival) ಬ್ಯಾಂಕುಗಳಿಗೆ ರಜೆ ಇದೆ. ಅದು ಬಿಟ್ಟರೆ ಭಾನುವಾರದ ರಜೆಗಳು, ಎರಡು ಮತ್ತು ನಾಲ್ಕನೇ ಶನಿವಾರದ ರಜೆಗಳೂ ಒಳಗೊಂಡಿವೆ. ಮಾರ್ಚ್ ತಿಂಗಳಲ್ಲಿ ಐದು ಭಾನುವಾರಗಳ ರಜೆಗಳೇ ಇವೆ. ಮಾರ್ಚ್ 15ರ ಬಳಿಕ ಯಾವ್ಯಾವ ಕಡೆ ಬ್ಯಾಂಕುಗಳಿಗೆ ರಜೆ ಇದೆ ಎನ್ನುವ ವಿವರ ಇಲ್ಲಿದೆ:

ಮಾರ್ಚ್ 15ರ ಬಳಿಕ ಬ್ಯಾಂಕುಗಳಿಗೆ ರಜಾದಿನಗಳು

  • ಮಾರ್ಚ್ 17: ಭಾನುವಾರ
  • ಮಾರ್ಚ್ 22: ಶುಕ್ರವಾರ: ಬಿಹಾರ ದಿವಸ್ (ಬಿಹಾರ ರಾಜ್ಯದಲ್ಲಿ ರಜೆ)
  • ಮಾರ್ಚ್ 23: ನಾಲ್ಕನೇ ಶನಿವಾರ
  • ಮಾರ್ಚ್ 24: ಭಾನುವಾರ
  • ಮಾರ್ಚ್ 25, ಸೋಮವಾರ: ಹೋಳಿ ಹಬ್ಬ (ಬೆಂಗಳೂರು, ಭುವನೇಶ್ವರ್, ಚೆನ್ನೈ, ಇಂಫಾಲ್, ಕೊಚಿ, ಕೋಹಿಮಾ, ಪಟ್ನಾ, ಶ್ರೀನಗರ ಮತ್ತು ತಿರುವನಂತಪುರಂ ಹೊರತುಪಡಿಸಿ ಉಳಿದ ಕಡೆ ಬ್ಯಾಂಕ್ ರಜೆ ಇರುತ್ತದೆ)
  • ಮಾರ್ಚ್ 26, ಮಂಗಳವಾರ: ಹೋಳಿ ಹಬ್ಬ ಎರಡನೇ ದಿನ (ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
  • ಮಾರ್ಚ್ 27, ಬುಧವಾರ: ಹೋಳಿ ಹಬ್ಬ (ಪಾಟ್ನಾದಲ್ಲಿ ಬ್ಯಾಂಕ್ ರಜೆ)
  • ಮಾರ್ಚ್ 29: ಗುಡ್ ಫ್ರೈಡೆ ಹಬ್ಬ (ಅಗಾರ್ಟಲಾ, ಗುವಾಹಟಿ, ಜೈಪುರ್, ಜಮ್ಮು, ಶಿಮ್ಲಾ ಮತ್ತು ಶ್ರೀನಗರ ಹೊರತುಪಡಿಸಿ ಉಳಿದ ಕಡೆ ರಜೆ)
  • ಮಾರ್ಚ್ 31: ಭಾನುವಾರ

ಕರ್ನಾಟಕದಲ್ಲಿ ಮಾರ್ಚ್ 15ರ ನಂತರದ ಬ್ಯಾಂಕ್ ರಜಾದಿನಗಳ ಪಟ್ಟಿ

  • ಮಾರ್ಚ್ 17: ಭಾನುವಾರ
  • ಮಾರ್ಚ್ 23: ನಾಲ್ಕನೇ ಶನಿವಾರ
  • ಮಾರ್ಚ್ 24: ಭಾನುವಾರ
  • ಮಾರ್ಚ್ 29: ಗುಡ್ ಫ್ರೈಡೆ ಹಬ್ಬ
  • ಮಾರ್ಚ್ 31: ಭಾನುವಾರ

ಇದನ್ನೂ ಓದಿ: ಶಿವರಾತ್ರಿ, ಹೋಳಿ, ಗುಡ್​ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ

2024ರ ಏಪ್ರಿಲ್ ತಿಂಗಳಲ್ಲಿರುವ ರಜೆಗಳು

  • ಏಪ್ರಿಲ್ 1: ಬ್ಯಾಂಕ್ ವಾರ್ಷಿಕ ರಜೆ
  • ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಜಯಂತಿ
  • ಏಪ್ರಿಲ್ 7: ಭಾನುವಾರ
  • ಏಪ್ರಿಲ್ 8: ಈದ್
  • ಏಪ್ರಿಲ್ 9: ಯುಗಾದಿ
  • ಎಪ್ರಿಲ್ 13: ಎರಡನೇ ಶನಿವಾರ
  • ಏಪ್ರಿಲ್ 14: ಭಾನುವಾರ
  • ಏಪ್ರಿಲ್ 21: ಭಾನುವಾರ
  • ಏಪ್ರಿಲ್ 27: ನಾಲ್ಕನೇ ಶನಿವಾರ

ಬ್ಯಾಂಕುಗಳಿಗೆ ರಜೆ ಇದ್ದರೂ ಎಟಿಎಂ, ಆನ್​ಲೈನ್, ನೆಟ್ ಬ್ಯಾಂಕಿಂಗ್ ಇತ್ಯಾದಿಗಳು 24 ಗಂಟೆ ಲಭ್ಯ ಇರುತ್ತವೆ. ಯುಪಿಐ ಪ್ಲಾಟ್​ಫಾರ್ಮ್ ಬಳಸಿ ಬ್ಯಾಂಕಿಂಗ್ ಸೇವೆ ಪಡೆಯಬಹುದು. ಎಫ್​ಡಿ, ಆರ್​ಡಿ ಇತ್ಯಾದಿ ಪ್ಲಾನ್​ಗಳನ್ನೂ ಆನ್​ಲೈನ್​ನಲ್ಲೇ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ