AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in January 2022: ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ಬಂದ್: ಯಾವಾಗ?, ಇಲ್ಲಿದೆ ಮಾಹಿತಿ

ಆರ್‌ಬಿಐನ ಪಟ್ಟಿಯ ಪ್ರಕಾರ ಜನವರಿ 2022 ರಲ್ಲಿ ಒಟ್ಟು ಒಂಬತ್ತು ರಾಜ್ಯವಾರು ರಜೆಗಳು ಇದೆ. ಈ ವಾರದಿಂದಲೇ ಈ ರಜೆಗಳು ಇರಲಿದೆ. ಜನವರಿ ಒಂದರಂದೇ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ ಮುಚ್ಚರಲಿದೆ.

Bank Holidays in January 2022: ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ಬಂದ್: ಯಾವಾಗ?, ಇಲ್ಲಿದೆ ಮಾಹಿತಿ
Bank Holidays
TV9 Web
| Edited By: |

Updated on:Dec 31, 2021 | 10:46 AM

Share

2021 ವರ್ಷ ಮುಗಿದು 2022 ಸ್ವಾಗತಿಸುವ ಸಂದರ್ಭದಲ್ಲಿ ಮುಂದಿನ ವರ್ಷವಿಡಿ ಸಿಗಲಿರುವ ರಜಾ ದಿನಗಳ (Holidays in January 2022) ಪಟ್ಟಿ ಬಿಡುಗಡೆ ಆಗಿದೆ. ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ. ಈ ಪೈಕಿ ಜನವರಿ ಮೊದಲ ತಿಂಗಳಲ್ಲೇ ಬ್ಯಾಂಕ್​ಗಳು ಬರೋಬ್ಬರಿ 16 ದಿನಗಳ ಕಾಲ ಮುಚ್ಚಿರಲಿವೆ (Bank Holidays in January 2022). 2022ರ ಜನವರಿಯ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆಗೊಳಿಸಿದೆ. ಆರ್​ಬಿಐ ಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೆ (States) ಅನ್ವಯಿಸೋದಿಲ್ಲ ಎಂಬುದು ಗಮನಿಸಬೇಕು. ಹೀಗಾಗಿ ನಿಮ್ಮ ರಾಜ್ಯಕ್ಕೆ ಅನ್ವಯಿಸುವ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ.

ಆರ್‌ಬಿಐನ ಪಟ್ಟಿಯ ಪ್ರಕಾರ ಜನವರಿ 2022 ರಲ್ಲಿ ಒಟ್ಟು ಒಂಬತ್ತು ರಾಜ್ಯವಾರು ರಜೆಗಳು ಇದೆ. ಈ ವಾರದಿಂದಲೇ ಈ ರಜೆಗಳು ಇರಲಿದೆ. ಜನವರಿ ಒಂದರಂದೇ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ ಮುಚ್ಚರಲಿದೆ. ಇನ್ನು ಉಳಿದಂತೆ ಏಳು ರಜಾ ದಿನಗಳು ವಾರದ ರಜಾದ ದಿನಗಳು ಆಗಿದೆ. ಈ ವಾರದ ರಜಾ ದಿನಗಳ ಸಂದರ್ಭದಲ್ಲಿ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಿರಲಿದೆ. ಆದ್ದರಿಂದಾಗಿ ನಿಮಗೆ ಯಾವುದೇ ಬ್ಯಾಂಕಿನ ವಹಿವಾಟು ಇದ್ದರೆ ಈ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದು ಕೊಳ್ಳಿ.

ಆರ್‌ಬಿಐ ಮೂರು ಹಂತಗಳಲ್ಲಿ ಬ್ಯಾಂಕ್‌ ರಜೆಗಳನ್ನು ವಿಂಗಡನೆ ಮಾಡಲಿದೆ. ರಾಜ್ಯವಾರು ರಜೆಗಳು, ಧಾರ್ಮಿಕ ರಜೆಗಳು ಹಾಗೂ ಹಬ್ಬದ ಹಿನ್ನೆಲೆ ರಜೆಗಳು ಎಂದು ಆರ್‌ಬಿಐ ವಿಂಗಡನೆ ಮಾಡುತ್ತದೆ. ಜನವರಿಯಲ್ಲಿ ರಾಷ್ಟ್ರೀಯ ರಜೆಯೂ ಕೂಡಾ ಇರಲಿದೆ. ಜನವರಿ 26 ರಂದು ಗಣರಾಜ್ಯ ದಿನವಾದ ಹಿನ್ನೆಲೆಯಿಂದಾಗಿ ರಾಷ್ಟ್ರೀಯ ರಜೆ ಇರಲಿದೆ. ಆದರೆ ಇಂಫಾಲ್‌, ಜೈಪುರ, ಶ್ರೀನಗರ, ಭೋಪಾಲ್‌, ಭುವನೇಶ್ವರ, ಚಂಡೀಗಢ, ಅಗರ್ತಾಲದಲ್ಲಿ ಬ್ಯಾಂಕುಗಳು ತೆರೆದಿರಲಿದೆ. ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಕೋಲ್ಕತ್ತಾದಲ್ಲಿ ರಜೆ ಇರಲಿದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ದಿನ ಎಂದಿನಂತೆ ಕಾರ್ಯ ನಿರ್ವಹಣೆ ಆಗಲಿದೆ.

  • 1 ಜನವರಿ: ಹೊಸ ವರ್ಷದ ದಿನ (ಇಡೀ ದೇಶದಲ್ಲೂ ಬ್ಯಾಂಕ್‌ಗಳಿಗೆ ರಜೆ)
  • 2 ಜನವರಿ: ರವಿವಾರ
  • 4 ಜನವರಿ: ಲೋಸೂಂಗ್ (ಸಿಕ್ಕಿಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)
  • 8 ಜನವರಿ: ಎರಡನೇ ಶನಿವಾರ
  • 9 ಜನವರಿ: ರವಿವಾರ
  • 11 ಜನವರಿ: ಮಿಷನರಿ ಡೇ (ಮಿಜೋರಾಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)
  • 12 ಜನವರಿ: ಸ್ವಾಮಿ ವಿವೇಕಾನಂದ ಅವರ ಜನ್ಮದಿನ
  • 14 ಜನವರಿ: ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬ
  • 15 ಜನವರಿ: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ
  • 16 ಜನವರಿ: ರವಿವಾರ
  • 18 ಜನವರಿ: ಚೆನ್ನೈನಲ್ಲಿ ಥೈ ಪೂಸಂ ಎಂಬ ಹಬ್ಬ
  • 22 ಜನವರಿ: ನಾಲ್ಕನೆಯ ಶನಿವಾರ
  • 23 ಜನವರಿ: ರವಿವಾರ
  • 30 ಜನವರಿ: ರವಿವಾರ
  • 26 ಜನವರಿ: ಗಣರಾಜ್ಯೋತ್ಸವ ಸಂಭ್ರಮ
  • 31 ಜನವರಿ: ಮಿ-ಡ್ಯಾಮ್-ಮಿ-ಫೈ (ಅಸ್ಸಾಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)

ಈ ಎಲ್ಲ ರಜಾದಿನಗಳಂದು ಆನ್ಲೈನ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗೋದಿಲ್ಲ. ಹೀಗಾಗಿ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರೋರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

Petrol Rate: ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ; ಮಹಾನಗರಗಳಲ್ಲಿ ಇಂದು ಪೆಟ್ರೋಲ್​, ಡೀಸೆಲ್​ ಬೆಲೆ ಹೀಗಿದೆ

(Bank Holidays in January 2022 Here is the full list of holidays for the month of January 2022 as per RBI mandate)

Published On - 11:09 am, Tue, 28 December 21